ರಾಜ್ಯದ ನೌಕರರ ವೇತನ ಕಡಿತ ಇಲ್ಲ: ಸಿಎಂ ಸ್ಪಷ್ಟಣೆ

By Suvarna NewsFirst Published Apr 2, 2020, 2:08 PM IST
Highlights

ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ ಇರುವ ಕಾರಣಕ್ಕೆ ಆರ್ಥಿಕ ಸಂಕಷ್ಟ| ಉ.ಪ್ರದೇಶದ ನೌಕರರ ವೇತನ ಕಡಿತ ಇಲ್ಲ: ಸಿಎಂ ಯೋಗಿ ಸರ್ಕಾರ| 

ಲಖನೌ(ಏ.02): ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ ಇರುವ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಕೆಲ ರಾಜ್ಯಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಾಸಿಕ ವೇತನ ಕಡಿತಕ್ಕೆ ನಿರ್ಧರಿಸಿದ ಬೆನ್ನಲ್ಲೇ, ರಾಜ್ಯದ ಯಾವುದೇ ನೌಕರರ ವೇತನ ಕಡಿತ ಮಾಡವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರ ಘೋಷಣೆ ಮಾಡಿದೆ.

ಅಲ್ಲದೆ, ನೌಕರರ ವೇತನವು ನಿಗದಿತ ಅವಧಿಯಲ್ಲಿ ಪಾವತಿಯಾಗಲಿದ್ದು, ಯಾವುದೇ ಕಾರಣಕ್ಕೂ ವೇತನ ಪಾವತಿ ಮುಂದೂಡುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಬುಧವಾರ ಮಾತನಾಡಿದ ರಾಜ್ಯ ಹೆಚ್ಚುವರಿ ಕಾರ್ಯದರ್ಶಿ ಅವನಿಶ್‌ ಅವಸ್ಥಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಸದೃಢವಾಗಿದ್ದು, ಸಾಂಕ್ರಮಿಕ ಕೊರೋನಾದಿಂದ ಎದುರಾಗಿರುವ ಸವಾಲುಗಳನ್ನು ಎದುರಿಸಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ.

ಸರ್ಕಾರಿ ನೌಕರರಿಗೆ ರಜೆ ನೀಡಿದ ರಾಜ್ಯ ಸರ್ಕಾರ: ಕಂಡಿಷನ್ ಅಪ್ಲೈ

ಹೀಗಾಗಿ, ರಾಜ್ಯ ಸರ್ಕಾರದ ನೌಕರರ ವೇತನ ಮುಂದೂಡುವ ಅಥವಾ ವೇತನ ಕಡಿತ ಮಾಡುವ ಪ್ರಸ್ತಾವನೆ ತಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.

click me!