ಕೊರೋನಾ ಸಮರಕ್ಕೆ ಪ್ರೇಮ್‌ಜಿ ಕಂಪನಿಗಳಿಂದ 1,125 ಕೋಟಿ ಮೀಸಲು!

By Suvarna NewsFirst Published Apr 2, 2020, 12:43 PM IST
Highlights

ಪ್ರೇಮ್‌ಜಿ ಕಂಪನಿಗಳಿಂದ 1125 ಕೋಟಿ ಮೀಸಲು|  ಬೆಂಗಳೂರಿನ ಅಜೀಂ ಪ್ರೇಮ್‌ಜಿ ಒಡೆತನದ ವಿಪ್ರೋ ಲಿಮಿಟೆಡ್‌

ಬೆಂಗಳೂರು(ಏ.02): ಬೆಂಗಳೂರಿನ ಅಜೀಂ ಪ್ರೇಮ್‌ಜಿ ಒಡೆತನದ ವಿಪ್ರೋ ಲಿಮಿಟೆಡ್‌, ವಿಪ್ರೋ ಎಂಟರ್‌ಪ್ರೈಸಸ್‌ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್‌ಗಳು ಕೊರೋನಾ ವೈರಸ್‌ ನಿಗ್ರಹಕ್ಕಾಗಿ 1125 ಕೋಟಿ ರು. ಮೀಸಲಿರಿಸುವುದಾಗಿ ಘೋಷಿಸಿವೆ.

ಕೋವಿಡ್-19 ಪರಿಹಾರ ಕಾರ್ಯಕ್ಕೆ ಇನ್ಫೋಸಿಸ್ ಫೌಂಡೇಷನ್‌ನಿಂದ 100 ಕೋಟಿ ರೂಪಾಯಿ ದೇಣಿಗೆ

ಕೊರೋನಾ ನಿಗ್ರಹಕ್ಕಾಗಿ ಶ್ರಮಿಸುತ್ತಿರುವ ವೈದ್ಯಕೀಯ ಹಾಗೂ ಸೇವಾ ವಲಯದ ಸಿಬ್ಬಂದಿಗೆ ಈ ನಿಧಿ ನೆರವಾಗಲಿದೆ ಎಂದು ಮೂರೂ ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ಬುಧವಾರ ತಿಳಿಸಿವೆ.

ಈ 1125 ಕೋಟಿ ರು.ನಲ್ಲಿ ವಿಪ್ರೋ ಎಂಟರ್‌ಪ್ರೈಸಸ್‌ ಪಾಲು 25 ಕೋಟಿ ರುಪಾಯಿ, ವಿಪ್ರೋ ಲಿಮಿಟೆಡ್‌ ಪಾಲು 100 ಕೋಟಿ ರುಪಾಯಿ ಹಾಗೂ ಪ್ರೇಮ್‌ಜಿ ಫೌಂಡೇಶನ್‌ ಪಾಲು 1000 ಕೋಟಿ ರು. ಎಂದು ತಿಳಿಸಲಾಗಿದೆ.

ಕೊರೋನಾ ಮಣಿಸಲು ಪಿಎಂ ಕೇರ್ಸ್ ನಿಧಿಗೆ 500 ಕೋಟಿ ದೇಣಿಗೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್‌

click me!