ಮುಂದಿನ 3 ತಿಂಗಳು EMI ಪಾವತಿ ಮಾಡೋದು ಬೇಡ್ವಾ..?

By Suvarna News  |  First Published Mar 27, 2020, 3:14 PM IST

ದೇಶ ಲಾಕ್‌ಡೌನ್ ಸಂದರ್ಭದಲ್ಲಿ ಈಗಿನ ಅಗತ್ಯವನ್ನು ಮನಗಂಡು ಮುಂದಿನ ಮೂರು ತಿಂಗಳ ಕಾಲ ಲೋನ್ ಹಿಂಪಾತಿ ಮೇಲೆ ರಿಯಾಯಿತಿ ನೀಡುವಂತೆ ಆರ್‌ಬಿಐ ತಿಳಿಸಿದೆ. ಆರ್‌ಬಿಐ ಇಎಂಐ ಪಾವತಿಗೆ ವಿನಾಯಿತಿ ಏನೋ ಕೊಟ್ಟಿದೆ. ಆದರೆ ಈ ಬಗ್ಗೆ ಇನ್ನೂ ಜನರಲ್ಲಿ ಗೊಂದಲ ಬಾಕಿ ಇದೆ. ಜನರಲ್ಲಿ ಮೂಡುವ ಸಾಮಾನ್ಯ ಗೊಂದಲಗಳಿಗೆ ಇಲ್ಲಿವೆ ಉತ್ತರ.


ನವದೆಹಲಿ(ಮಾ.27): ಇಡೀ ದೇಶವೇ ಕೊರೋನಾ ವೈರಸ್‌ ಭೀತಿಯಲ್ಲಿರುವಾಗ, ಜನ ಲಾಕ್‌ಡೌನ್‌ನಿಂದ ಮನೆಯೊಳಗೆ ಕುಳಿತಿದ್ದಾರೆ. ಸಂಪಾದನೆ, ಕೆಲಸ, ವೇತನ ಏನೂ ಇಲ್ಲ. ಈ ಸಂದರ್ಭದಲ್ಲಿ ಈಗಿನ ಅಗತ್ಯವನ್ನು ಮನಗಂಡು ಮುಂದಿನ ಮೂರು ತಿಂಗಳ ಕಾಲ ಲೋನ್ ಹಿಂಪಾತಿ ಮೇಲೆ ರಿಯಾಯಿತಿ ನೀಡುವಂತೆ ಆರ್‌ಬಿಐ ತಿಳಿಸಿದೆ.

"

Latest Videos

undefined

ರಾಷ್ಟ್ರದ ಎಲ್ಲಾಪ್ರಮುಖ ಆರ್ಥಿಕ ಸಂಸ್ಥೆಗಳಿಗೆ ಸೂಚನೆ ನೀಡಿರುವ ಆರ್‌ಬಿಐ 3 ತಿಂಗಳ ಕಾಲ ಸಾಲ ಮರುವಪಾತಿಗೆ ಗ್ರಾಹಕರಿಗೆ ವಿನಾಯಿತಿ ನೀಡಬೇಕೆಂದು ಸೂಚನೆ ನೀಡಿದೆ. ಈ ಸಂದರ್ಭದಲ್ಲಿ ಎಲ್ಲಾ ಬ್ಯಾಂಕ್‌, ಹಾಗೂ ಸಾಲ ನೀಡುವ ಅಧಿಕೃತ ಸಂಸ್ಥೆಗಳಲ್ಲಿ ಮೂರು ತಿಂಗಳ ಇಎಂಐ ಪಾವತಿಸುವ ಅಗತ್ಯವಿರುವುದಿಲ್ಲ. ಹಾಗೆಯೇ ಇಎಂಐ ಪಾವತಿಸದಿರುವುದಕ್ಕೆ ಹೆಚ್ಚಿನ ಬಡ್ಡಿ ಅಥವಾ ಕ್ರೆಡಿಟ್ ಕಾರ್ಡ್‌ನ ಸ್ಕೋರ್‌ಗಳ ಮೇಲೆಯೂ ಇದು ಪರಿಣಾಮ ಬೀರುವುದಿಲ್ಲ.

ಆರ್‌ಬಿಐ ಇಎಂಐ ಪಾವತಿಗೆ ವಿನಾಯಿತಿ ಏನೋ ಕೊಟ್ಟಿದೆ. ಆದರೆ ಈ ಬಗ್ಗೆ ಇನ್ನೂ ಜನರಲ್ಲಿ ಗೊಂದಲ ಬಾಕಿ ಇದೆ. ಜನರಲ್ಲಿ ಮೂಡುವ ಸಾಮಾನ್ಯ ಗೊಂದಲಗಳಿಗೆ ಇಲ್ಲಿವೆ ಉತ್ತರ.

  • ಇಎಂಐ ಡ್ಯೂ ಡೇಟ್‌ ಸಮೀಪಿಸುತ್ತಿದೆ. ಖಾತೆಯಿಂದ ಇಎಂಐ ಮೊತ್ತ ಕಡಿತವಾಗಲಿದೆಯೇ..?

ಈಗಾಗಲೇ ನೀಡಿದ ಸೂಚನೆಯಂತೆ ಆರ್‌ಬಿಐ ದೇಶದ ಬ್ಯಾಂಕ್‌ ಹಾಗೂ ಇತರ ಸಂಸ್ಥೆಗಳಿಗೆ ಇಎಂಐನ್ನು ಸದ್ಯದ ಮಟ್ಟಿಗೆ ಕ್ಯಾನ್ಸಲ್ ಮಾಡಲು ತಿಳಿಸಿದೆ. ಆದರೆ ಈ ಬಗ್ಗೆ ಇನ್ನೂ ಸರಿಯಾದ ಸ್ಪಷ್ಟನೆ ಸಿಕ್ಕಿಲ್ಲ. ಇಎಂಐ ರದ್ದುಗೊಳಿಸುವುದು ಬ್ಯಾಂಕ್‌ ಆಧಾರಿತವಾಗಿಯೋ ಅಥವಾ ಒಂದೊಂದು ಖಾತೆಯನ್ನು ಆಧರಿಸಿಯೋ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಸಿಗಬೇಕಿದೆ. ಎಸ್‌ಬಿಐ ಗ್ರಾಹಕರಿಗೆ ಸಂಬಂಧಿಸಿ ಎಸ್‌ಬಿಐ ಮುಖ್ಯಸ್ಥ ರಜನೀಶ್ ಈಗಾಗಲೇ ಸೂಚನೆ ನೀಡಿದ್ದು ಸಾಲವನ್ನು ಆಧರಿಸಿ ಎಲ್ಲ ಇಎಂಐ ಮೂರು ತಿಂಗಳಿಗೆ ರದ್ದಾಗಲಿದೆ.

  • ಇಎಂಐ ರದ್ದುಗೊಳಿಸುವ ಪ್ರಕ್ರಿಯೆ ಬ್ಯಾಂಕ್ ಮಟ್ಟದಲ್ಲಿ ಹೇಗೆ ನಡೆಯಲಿದೆ..?

ಎಲ್ಲಾ ಬ್ಯಾಂಕ್‌ಗಳು ಆರ್‌ಬಿಐ ನೀಡಿದ ಸೂಚನೆಯ ಬಗಗ್ಎ ಚರ್ಚಿಸಿ ಆಯಾ ಬ್ಯಾಂಕ್‌ನ ಬೋರ್ಡ್ ಲೆವೆಲ್‌ನಲ್ಲಿ ಅನುಮತಿ ಪಡೆದು ಅದಕ್ಕೆ ತಕ್ಕಂತೆ ಅಗತ್ಯ ಪ್ರಕ್ರಿಯೆಗಳನ್ನು ನಡೆಸಬೇಕಾಗಿದೆ. ಇಎಂಐ ಕಟ್ಟದಿರುವುದರಿಂದ ಕ್ರೆಡಿಟ್ ಕಾರ್ಡ್ ಸ್ಕೋರ್‌ಗೆ ಯಾವುದೇ ತೊಂದರೆಯಾಗುವುದಿಲ್ಲ.

"

  • ಆರ್‌ಬಿಐ ನೀಡಿದ ಸೂಚನೆ ಯಾವೆಲ್ಲಾ ಬ್ಯಾಂಕ್‌ಗಳಿಗೆ ಅನ್ವಯಿಸುತ್ತದೆ..?

ಎಲ್ಲಾ ರೀತಿಯ ಕಮರ್ಷಿಯಲ್ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡಿದ ಸೂಚನೆ ಅನ್ವಯಿಸುತ್ತದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಸಣ್ಣ ಆರ್ಥಿಕ ಬ್ಯಾಂಕ್, ಸ್ಥಳೀಯ ಬ್ಯಾಂಕ್‌, ಸಹಕಾರಿ ಬ್ಯಾಂಕ್, ಆಲ್ ಇಂಡಿಯಾ ಆರ್ಥಿಕ ಸಂಸ್ಥೆಗಳು, ಗೃಹಸಾಲ ನೀಡುವ ಕಂಪನಿ ಹಾಗೂ ಸಣ್ಣ ಆರ್ಥಿಕ ಸಂಸ್ಥೆ ಸೇರಿ ಎನ್‌ಬಿಎಫ್‌ಸಿಗಳಿಗೆ ಇದು ಅನ್ವಯವಾಗಲಿದೆ.

  • ಇದು ಸಾಲಮನ್ನಾ ಮಾಡಿರುವುದೇ ಅಥವಾ ಮುಂದೂಡಿರುವುದೇ..?

ಖಂಡಿತವಾಗಿಯೂ ಇದು ಸಾಲ ಮನ್ನಾ ಅಲ್ಲ. ಬದಲಾಗಿ ಸಾಲ ಮರುಪಾವತಿಯ ಕಾಲಾವಕಾಶದ ಮುಂದೂಡಿಕೆ. ನಿಮ್ಮ ಸಾಲದ ಡ್ಯೂ ಡೇಟ್, ಮರುಪಾವತಿಯ ದಿನ, ಇಎಂಐ ಕಟ್ಟಬೇಕಾದ ದಿನ ಸೇರಿ ಸಾಲಕ್ಕೆ ಸಂಬಂಧಿಸಿದ ಎಲ್ಲ ಡೆಡ್‌ಲೈನ್‌ಗಳು ಮೂರು ತಿಂಗಳು ಮುಂದೂಡಲ್ಪಡುತ್ತದೆ ಎಂದುಬು ಆರ್‌ಬಿಐ ಸ್ಪಷ್ಟ ಸೂಚನೆ.

  • ಸಾಲ ಮರುಪಾತಿಗೆ ನೀಡಿರುವ ತತ್ಕಾಲಿಕ ತಡೆ ಸಾಲದ ಮೊತ್ತ, ಬಡ್ಡಿ ದರ ಎರಡಕ್ಕೂ ಅನ್ವಯಿಸುತ್ತದೆಯೇ..?

ಹೌದು. ಎರಡಕ್ಕೂ ಅನ್ವಯಿಸುತ್ತದೆ. ನಿಮ್ಮ ಸಂಪೂರ್ಣ ಇಎಂಐಯನ್ನು ಮೂರು ತಿಂಗಳು ಕಟ್ಟಬೇಕಿಲ್ಲ. ಹಾಗೆಯೇ ಈ ಬಡ್ಡಿದರವನ್ನೂ ಕಟ್ಟಬೇಕಿಲ್ಲ. ಇದು ಎಲ್ಲ ಸಾಲಗಳಿಗೂ ಅನ್ವಯಿಸುತ್ತದೆ.

  • ಆರ್‌ಬಿಐ ನೀಡಿರುವ ವಿನಾಯಿತಿಯಲ್ಲಿ ಯಾವೆಲ್ಲಾ ಸಾಲ ಒಳಗೊಳ್ಳಲಿದೆ..?

ಆರ್‌ಬಿಐ ವಿವರಿಸಿರುವ ಲೋನ್‌ ನಿಯಮಗಳ ಪ್ರಕಾರ ಸಾಲ ಮರುಪಾವತಿ ವಿನಾಯಿತಿಯಲ್ಲಿ ಗೃಹಸಾಲ, ಪರ್ಸನಲ್ ಲೋನ್, ಶಿಕ್ಷಣ ಸಾಲ, ಆಟೋ ಸಾಲ ಹಾಗೂ ನಿಗದಿತ ಸಮಯವಿರುವ ಇತರ ಸಾಲಗಳೂ ಒಳಗೊಳ್ಳಲಿದೆ. ಮೊಬೈಲ್‌, ಫ್ರಿಡ್ಜ್, ಟಿವಿ ಮೇಲಿನ ಇಎಂಐಗೂ ವಿನಾಯಿತಿ ಇದೆ.

  • ಕ್ರೆಡಿಟ್ ಕಾರ್ಡ್ ಪೇಮೆಂಟ್ ಆರ್‌ಬಿಐ ಸೂಚನೆಯಲ್ಲಿ ಒಳಪಡುತ್ತದೆಯೇ..?

ಕ್ರೆಡಿಟ್ ಕಾರ್ಡ್‌ಗಳು ಟರ್ಮ್‌ ಲೋನ್ ಮಾದರಿಯವುಗಳಲ್ಲ ಎಂದಾರೆ ಆರ್‌ಬಿಐ ಇಂದು ನೀಡಿರುವ ವಿನಾಯಿತಿ ಇಂತಹ ಕ್ರೆಡಿಟ್‌ ಕಾರ್ಡ್‌ಗೆ ಅನ್ವಯಿಸುವುದಿಲ್ಲ.

  • ಫ್ಯಾಕ್ಟರಿ ಲೋನ್ ಇಎಂಐ ಕಟ್ಟದಿರಬಹುದಾ..?

ಇಎಂಐ ಮುಂದೂಡಿಕೆ ವಿನಾಯಿತಿ ಟರ್ಮ್ ಲೋನ್‌ಗಳಿಗೆ ಮಾತ್ರ ಸಂಬಂಧಿಸಿದೆ. ಯಾವುದೇ ಫ್ಯಾಕ್ಟರಿ, ಪ್ರಾಜೆಕ್ಟ್‌ಗಳಿಗೆ ಸಂಬಂಧಿಸಿಲ್ಲ. ಈ ಕುರಿತ ಹೆಚ್ಚಿನ ಸ್ಪಷ್ಟನೆ ನಿಮ್ಮ ಬ್ರಾಂಚ್‌ಗಳಲ್ಲಿ ತಿಳಿದುಕೊಳ್ಳಬೇಕಿದೆ.

  • ಉದ್ಯಮಗಳ ಬಗ್ಗೆ ಆರ್‌ಬಿಐ ಏನು ಹೇಳಿದೆ..?

ಉದ್ಯಮಗಳಿಗಾಗಿ ಸಾಲ ತೆಗೆದವರ ಸಾಲದ ಬಡ್ಡಿ ಪಾವತಿ ಅವಧಿ ಮುಂದೂಡಲಾಗಿದೆ. ಇದು 2020 ಮಾರ್ಚ್ 1ರ ತನಕದ ಸಾಲಗಳಿಗೆ ಅನ್ವಯಿಸಲಿದೆ. ಸಾಲ ಮರುಪಾವತಿ ಅವಧಿ ಮುಂದೂಡುವುದು ಲೋನ್‌ಗೆ ಸಂಬಂಧಿಸಿದ ಯಾವುದೇ ನಿಯಮ, ಎಗ್ರಿಮೆಂಟ್‌ಗಳಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ.

click me!