ಲಾಕ್‌ಡೌನ್‌ನಿಂದ ಪ್ರತಿ ನಿತ್ಯ 40 ಸಾವಿರ ಕೋಟಿ ರು. ನಷ್ಟ!

Suvarna News   | Asianet News
Published : Mar 27, 2020, 02:24 PM IST
ಲಾಕ್‌ಡೌನ್‌ನಿಂದ ಪ್ರತಿ ನಿತ್ಯ 40 ಸಾವಿರ ಕೋಟಿ ರು. ನಷ್ಟ!

ಸಾರಾಂಶ

ಲಾಕ್‌ಡೌನ್‌ನಿಂದ ನಿತ್ಯ 40 ಸಾವಿರ ಕೋಟಿ ರು. ನಷ್ಟ! ಮಾರುಕಟ್ಟೆ ಸಮೀಕ್ಷಕ ಸಂಸ್ಥೆ ಕೇರ್‌ ರೇಟಿಂಗ್ಸ್‌ ಅಂದಾಜು | ಶೇ.80 ರಷ್ಟುಉತ್ಪಾದನೆ ಕುಸಿತ | 21 ದಿನದಲ್ಲಿ ಒಟ್ಟಾರೆ 7.2 ಲಕ್ಷ ಕೋಟಿ ರು. ಹಾನಿ | ಲಾಕ್‌ಡೌನ್‌ ಇನ್ನೂ ವಿಸ್ತರಣೆಯಾದರೆ ಹಾನಿ ಇನ್ನೂ ಅಧಿಕ

ಮುಂಬೈ (ಮಾ. 27): ಕೊರೋನಾ ವೈರಾಣು ಕಾರಣ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 21 ದಿವಸಗಳ ‘ಲಾಕ್‌ಡೌನ್‌’ ಕಾರಣ ಶೇ.80 ರಷ್ಟು ಉತ್ಪಾದನೆಗೆ ಭಂಗ ಬಂದಿದೆ. ಇದರಿಂದಾಗಿ ಅರ್ಥವ್ಯವಸ್ಥೆಗೆ ನಿತ್ಯ 35 ಸಾವಿರ ಕೋಟಿ ರು.ನಿಂದ 40 ಸಾವಿರ ಕೋಟಿ ರು.ವರೆಗೆ ಹಾನಿ ಆಗಲಿದೆ. ಒಟ್ಟಾರೆ 6.3 ಲಕ್ಷ ಕೋಟಿ ರು.ನಿಂದ 7.2 ಲಕ್ಷ ಕೋಟಿ ರು.ವರೆಗೆ ನಷ್ಟಸಂಭವಿಸಲಿದೆ ಎಂದು ವರದಿಯೊಂದು ಹೇಳಿದೆ.

ರಾಜಕಾರಣಿಗಳನ್ನು ಒಗ್ಗೂಡಿಸಿದ ಕೊರೋನಾ: ಮೋದಿಗೆ ಸೋನಿಯಾ ಫುಲ್ ಸಪೋರ್ಟ್!

ಮಾರುಕಟ್ಟೆಸಮೀಕ್ಷಕ ಸಂಸ್ಥೆಯಾದ ‘ಕೇರ್‌ ರೇಟಿಂಗ್ಸ್‌’, ಈ ಆಘಾತಕಾರಿ ಅಂಕಿ-ಅಂಶಗಳನ್ನು ಒದಗಿಸಿದೆ.

ಒಂದು ವರ್ಷಕ್ಕೆ 300 ಮಾನವ (ಕೆಲಸ ಮಾಡುವ) ದಿನಗಳು ಸಾಮಾನ್ಯವಾಗಿ ಇರುತ್ತವೆ. ಇದರಿಂದ ದಿನಕ್ಕೆ ಸುಮಾರು 45 ಸಾವಿರ ಕೋಟಿ ರು.ನಿಂದ 50 ಸಾವಿರ ಕೋಟಿ ರು.  ಮೌಲ್ಯದಷ್ಟು ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತವೆ. ಆದರೆ ಈಗ ವ್ಯಾಪಾರ ವಹಿವಾಟು ಬಂದ್‌ ಆದ ಕಾರಣ ಇಷ್ಟೊಂದು ನಷ್ಟವಾಗುತ್ತಿದೆ ಎಂದು ವರದಿ ಹೇಳಿದೆ.

ಲಾಕ್‌ಡೌನ್: ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸಿಎಂ, ಹೊರಗೆ ಬಂದ್ರೆ ಅಷ್ಟೇ ಕಥೆ..!

ಇದರಿಂದಾಗಿ 4ನೇ ತ್ರೈಮಾಸಿಕವು ಕೇವಲ ಶೇ.1.5-ಶೇ.2.5ರ ದರದಲ್ಲಿ ಬೆಳವಣಿಗೆ ಕಾಣಲಿದೆ. ಈ ಮುನ್ನ ಅಂದುಕೊಂಡಂತೆ 1.74 ಲಕ್ಷ ಕೋಟಿ ರು.ನಷ್ಟು(ಶೇ.4.7) ಬೆಳವಣಿಗೆ ಸಾಧಿಸಬೇಕಿತ್ತು.

ಲಾಕ್‌ಡೌನ್‌ ಕೇವಲ 21 ದಿನಗಳಿಗೆ ಸೀಮಿತ ಆಗಿರುತ್ತದೆ ಎಂದು ಹೇಳಲಾಗದು. ಮೊದಲು 8 ದಿನದ ಲಾಕ್‌ಡೌನ್‌ ಈಗ 21 ದಿನಕ್ಕೆ ವಿಸ್ತಾರವಾಗಿದೆ. 30ರಿಂದ 60 ದಿನದವರೆಗೂ ಇದು ವಿಸ್ತಾರ ಆಗಬಹುದು. ಹೀಗಿದ್ದಾಗ ಹಾನಿ ಇನ್ನೂ ಅಧಿಕವಾಗಬಹುದು ಎಂದು ಕೇರ್‌ ರೇಟಿಂಗ್ಸ್‌ ಹೇಳಿದೆ.

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!