ಮದುವೆಗೆ 50ಕ್ಕೂ ಅಧಿಕ ಜನರ ಸೇರಿಸಿದ ಕುಟುಂಬಕ್ಕೆ ಯಾವ ಸ್ಥಿತಿ ಬಂತು ನೋಡಿ!

Published : Jun 28, 2020, 02:37 PM IST
ಮದುವೆಗೆ 50ಕ್ಕೂ ಅಧಿಕ ಜನರ ಸೇರಿಸಿದ ಕುಟುಂಬಕ್ಕೆ ಯಾವ ಸ್ಥಿತಿ ಬಂತು ನೋಡಿ!

ಸಾರಾಂಶ

ಮದುವೆಗೆ  50  ಜನರಿಗೆ ಮಾತ್ರ ಅವಕಾಶ/ ನಿಯಮ ಮುರಿದ ಕುಟುಂಬದ ಕತೆ ಏನಾಯಿತು ನೋಡಿ/   6.26  ಲಕ್ಷ ರೂ. ದಂಡ ತುಂಬಬೇಕು / ರಾಜಸ್ಥಾನದಲ್ಲೊಂದು ದಿಟ್ಟ ಕ್ರಮ

ಜೈಪುರ(ಜೂ. 28)  ಮದುವೆ ಸಮಾಂಭಕ್ಕೆ ಇಂತಿಷ್ಟೆ ಜನರನ್ನು ಆಹ್ವಾನಿಸಬೇಕು ಎಂದು ಕೊರೋನಾ ಕಾರಣಕ್ಕೆ ಸರ್ಕಾರ ನಿಯಮ ಮಾಡಿದೆ. ಈ ನಿಯಮ ಮುರಿದ ಕುಟುಂಬವೊಂದು ಬರೋಬ್ಬರಿ 6.26  ಲಕ್ಷ ರೂ. ದಂಡ ತುಂಬಬೇಕಾಗಿದೆ.

ಕೊರೋನಾ ನಿಯಮ ಮುರಿದ ಕಾರಣಕ್ಕೆ ಮೂರು ದಿನದ ಒಳಗಾಗಿ ಕುಟುಂಬ  6.26  ಲಕ್ಷ ರೂ. ದಂಡ ತುಂಬಬೇಕು ಎಂದು ಜೈಪುರ ಆಡಳಿತ ಸೂಚಿಸಿದೆ.

ಬೆಂಗಳೂರಿನಲ್ಲಿ ಹೊಸ ಕೋವಿಡ್ ಕೇಂದ್ರಗಳು, ಎಲ್ಲೆಲ್ಲಿ?

ಐವತ್ತು ಜನರನ್ನು ಆಹ್ವಾನಿಸಲು ಅನುಮತಿ ಪಡೆದಿದ್ದ ಕುಟುಂಬದ ಮದುವೆಗೆ  250  ಜನರು ಬಂದಿದ್ದರು.  ಮಾಸ್ಕ್ ಧರಿಸಿದ್ದು ಕಂಡುಬರಲಿಲ್ಲ, ಸಾಮಾಜಿಕ ಅಂತರದ ಕತೆ ಕೇಳಲೇಬೇಡಿ. ಮದುಮಗ ಸೇರಿದಂತೆ  15 ಜನರಿಗೆ ಕೊರೋನಾ ದೃಢಪಟ್ಟಿತ್ತು.  ಇದಾದ ನಂತರ ಮದುವೆಗೆ ಆಗಮಿಸಿದ್ದ  58   ಜನರನ್ನು ಕ್ವಾರಂಟೈನ್ ಮಾಡಿ ಸೋಂಕು ಕಾಣಿಸಿಕೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಜೂನ್  22  ರಂದು ನಡೆದ ಮದುವೆಗೆ ಸಂಬಂಧಿಸಿ ಕುಟುಂಬದ ಮೇಲೆ ಎಫ್ ಐಆರ್ ಸಹ ದಾಖಲಾಗಿದೆ.  ನಿಯಮ ಮುರಿದ ಕುಟುಂಬ 6.26  ಲಕ್ಷ ರೂ. ದಂಡವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬೇಕು ಎಂದು ಭಿಲ್ವಾರಾ ಡಿಸಿ ಆದೇಶಿಸಿದ್ದಾರೆ.

 

 

 

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!