ಪಾಕಿಸ್ತಾನ ಸೇರಿ 9 ರಾಷ್ಟ್ರಗಳ ಜೊತೆ ಹೊಸ ಒಪ್ಪಂದ ಪ್ರಸ್ತಾಪಿಸಿದ ಪ್ರಧಾನಿ | ಕೊರೋನಾ ವಿರುದ್ಧ ಒಟ್ಟಿಗೆ ಹೋರಾಡಲು ಎಗ್ರೀಮೆಂಟ್ | ಏನಿದೆ ಇದರಲ್ಲಿ..?
ಕೊರೋನಾ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಹೋರಾಡುವ ನಿಟ್ಟಿನಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗಾಗಿ ವಿಶೇಷ ವೀಸಾ ಒದಗಿಸುವ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
ವಿಶೇಷ ವೀಸಾ ಮಾಡುವುದರಿಂದ ಆರೊಗ್ಯ ತುರ್ತು ಅಗತ್ಯವಿದ್ದಲ್ಲಿ ಕೋರಿಕೆಯ ಮೇರೆಗೆ ಹೆಲ್ತ್ ಕೇರ್ ಸಿಬ್ಬಂದಿ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗಬಹುದು ಎಂದು ಪ್ರಧಾನಿ ಹೇಳಿದ್ದಾರೆ.
undefined
ಮೋದಿ ರಾಜತಾಂತ್ರಿಕತೆಗೆ ಕೆರಿಬಿಯನ್ ದೇಶಗಳ ಶ್ಲಾಘನೆ
ವೈದ್ಯಕೀಯ ನೆರವಿನ ಉದ್ದೇಶಕ್ಕಾಗಿ ನಾಗರಿಕಾ ವಿಮಾನಯಾನ ಸಚಿವಾಲಯಗಳು ಪ್ರಾದೇಶಿಕ ಏರ್ ಆಂಬುಲೆನ್ಸ್ ಒದಗಿಸುಬ ಬಗ್ಗೆಯೂ ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ನೆರೆ ರಾಷ್ಟ್ರಗಳ ಬಳಿ ಪ್ರಸ್ತಾಪ ಇಟ್ಟಿದ್ದಾರೆ.
“COVID-19 ನಿರ್ವಹಣೆ: ಅನುಭವ, ಉತ್ತಮ ಅಭ್ಯಾಸಗಳು ಕುರಿತು ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಾಂಕ್ರಾಮಿಕ ರೋಗದ ಸಮಯದಲ್ಲಿ ಭಾರತದ ನೆರೆಯ ರಾಷ್ಟ್ರಗಳು ಪರಸ್ಪರ ಆರೋಗ್ಯ ವ್ಯವಸ್ಥೆಗಳು ಸಹಕರಿಸಿಕೊಂಡು ಸಂಘಟಿತರಾಗಿ ಹೆಚ್ಚು ಜನನಿಬಿಡ ಪ್ರದೇಶದಲ್ಲಿ ಸವಾಲನ್ನು ಎದುರಿಸಿದ್ದಕ್ಕಾಗಿ ಶ್ಲಾಘಿಸಿದರು.
ಶ್ರೀನಗರ ಪೊಲೀಸರ ಮೇಲೆ ಉಗ್ರರ ಗುಂಡಿನ ದಾಳಿ; ಬೆಚ್ಚಿ ಬೀಳಿಸುವ CCTV ದಶ್ಯ!...
ಈ ಕಾರ್ಯಾಗಾರದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ತಜ್ಞರು, 10 ರಾಷ್ಟ್ರಗಳ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಪಾಕಿಸ್ತಾನ, ಶ್ರೀಲಂಕಾ ಮತ್ತು ಸೆಯಿಶೆಲ್ಸ್ ಪ್ರತಿನಿಧಿಗಳು ಭಾಗಿಯಾಗಿದ್ದರು.
ಕೊರೋನಾದ ಕಾಲದಲ್ಲಿ ಕಂಡುಬಂದ ಸಹಾಯ ಮನೋಭಾವ ಮುಂದುವರಿಯಬೇಕು. ನಮ್ಮ ಮುಕ್ತತೆ ಮತ್ತು ದೃಢ ನಿಶ್ಚಯದ ಮೂಲಕ, ನಾವು ವಿಶ್ವದ ಅತ್ಯಂತ ಕಡಿಮೆ ಸಾವಿನ ಪ್ರಮಾಣಕ್ಕೆ ಕೊರೋನಾ ಹಾನಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಶ್ಲಾಘನೀಯ. ಲಸಿಕೆಗಳ ವಿಚಾರದಲ್ಲೂ ನಾವು ಒಂದೇ ರೀತಿಯ ಸಹಕಾರಿ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದ್ದಾರೆ.
COVID-19 ಲಸಿಕೆಗಳ ಪರಿಣಾಮದ ಬಗ್ಗೆ ಡೇಟಾವನ್ನು ಸಂಗ್ರಹಿಸಲು, ಅಧ್ಯಯನ ಮಾಡಲು ಈ ದೇಶಗಳು ಪ್ರಾದೇಶಿಕ ವೇದಿಕೆಯನ್ನು ರಚಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ತಂತ್ರಜ್ಞಾನ ನೆರವಿನಿಂದ ಸಾಂಕ್ರಾಮಿಕ ರೋಗವನ್ನು ತಡೆಯಲು ಮತ್ತು ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪ್ರಾದೇಶಿಕ ಸಂಪರ್ಕ ಜಾಲ ರಚಿಸುವ ಪ್ರಸ್ತಾಪವನ್ನೂ ಮಾಡಿದ್ದಾರೆ.