ಲಕ್ಷಾಂತರ ಮೌಲ್ಯದ ಮದ್ಯ ಕಳ​ವು! ಸಿಸಿಟಿವಿ ಡಿವಿಆರ್‌ ಕದ್ದ ಸ್ಮಾರ್ಟ್ ಕಳ್ಳರು

By Kannadaprabha News  |  First Published Apr 4, 2020, 7:18 AM IST

ಶಟರ್‌ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಡಿಮೆ ಬೆಲೆಯ ಮದ್ಯ ಸೇರಿದಂತೆ ಅಧಿಕ ಬೆಲೆಯ ಮದ್ಯದ ಬಾಟಲಿಗಳನ್ನು ದೋಚಿ​ದ್ದಾರೆ. ತಮ್ಮ ಕೃತ್ಯ ಹೊರಗೆ ಯಾರಿಗೂ ಕಾಣಿಸದಂತೆ ಅಂಗಡಿ ಎದುರು ಬಟ್ಟೆಯನ್ನು ಕಟ್ಟಿ ಶಟರ್‌ ಬಾಗಿಲನ್ನು ಮುರಿದಿದ್ದಾರೆ.


ಮಂಗಳೂರು(ಏ.04): ಎಂಎಸ್‌ಐಎಲ್‌ನ ವೈಸ್ಸ್‌ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 1 ಲಕ್ಷ ರು. ಮೌಲ್ಯದ ಮದ್ಯವನ್ನು ಕಳವು ಮಾಡಿರುವ ಘಟನೆ ಮಂಗ​ಳೂರು ತಾಲೂ​ಕಿನ ಕುತ್ತಾರು ನಿತ್ಯಾನಂದನಗರದಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಪುರುಷೋತ್ತಮ್‌ ಪಿಲಾರ್‌ ಅವರಿಗೆ ಸೇರಿದ ವೈಸ್ಸ್‌ ಅಂಗಡಿಯಲ್ಲಿ ಕಳವು ನಡೆದಿದೆ.

Tap to resize

Latest Videos

ಶಟರ್‌ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕಡಿಮೆ ಬೆಲೆಯ ಮದ್ಯ ಸೇರಿದಂತೆ ಅಧಿಕ ಬೆಲೆಯ ಮದ್ಯದ ಬಾಟಲಿಗಳನ್ನು ದೋಚಿ​ದ್ದಾರೆ. ತಮ್ಮ ಕೃತ್ಯ ಹೊರಗೆ ಯಾರಿಗೂ ಕಾಣಿಸದಂತೆ ಅಂಗಡಿ ಎದುರು ಬಟ್ಟೆಯನ್ನು ಕಟ್ಟಿ ಶಟರ್‌ ಬಾಗಿಲನ್ನು ಮುರಿದಿದ್ದಾರೆ.

ಡಿವಿಆರ್‌ ಕಳವು:

ಚಾಣಾಕ್ಷತನ ತೋರಿಸಿರುವ ಕಳ್ಳರು ಸಿಸಿಟಿವಿ ದಾಖಲೆ ಹೊಂದಿರುವ ಡಿವಿಆರ್‌ ಕೂಡ ಕಳವು ಮಾಡಿದ್ದಾರೆ. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಗಿಬಿದ್ದ ಮದ್ಯಪ್ರಿಯರು:

ಅಂಗಡಿಯ ಶಟರ್‌ ತೆರೆಯುವುದನ್ನು ಕಂಡ ರಸ್ತೆಯಲ್ಲಿ ಸಂಚರಿಸುವ ಮಂದಿ ವೈಸ್ಸ್‌ ಅಂಗಡಿ ತೆರೆದಿರುವುದೆಂದು ಭಾವಿಸಿ, ಮದ್ಯ ನೀಡುವಂತೆ ಕೇಳಿಕೊಳ್ಳುತ್ತಿರುವ ದೃಶ್ಯ ಸ್ಥಳದಲ್ಲಿ ಕಂಡುಬಂತು. ಕೆಲವರು ದ್ವಿಚಕ್ರ ವಾಹನಗಳಲ್ಲಿ ಬಂದರೆ, ಇನ್ನು ಕೆಲವರು ಕಾರಿನಲ್ಲಿ ಬಂದು ಮದ್ಯ ಕೇಳಿ ಪೊಲೀಸರಿಂದ ಉಗಿಸಿಕೊಂಡರು.

ಲಕ್ಷ ಲಕ್ಷ ಹಣ ಮುಟ್ಟದೆ ಮದ್ಯದ ಬಾಟಲಿ ಮಾತ್ರ ದೋಚಿದ್ರು..! ಇದು ಸ್ವಾಮಿ ನಿಯತ್ತು..!

ಪಾನ್‌ ಅಂಗಡಿಯಿಂದಲೂ ಕಳವು:

ವೈಸ್ಸ್‌ ಅಂಗಡಿ ಸಮೀಪದಲ್ಲೇ ಇರುವ ಪಾನ್‌ ಅಂಗಡಿಯಿಂದ 10 ಪ್ಯಾಕೆಟ್‌ ಸಿಗರೇಟುಗಳನ್ನು ಕಳ್ಳರು ಕಳವು ಮಾಡಿದಿದ್ದಾರೆ. ಮೂರು ವರ್ಷದಲ್ಲಿ 10ನೇ ಬಾರಿ ಇದೇ ರೀತಿಯಲ್ಲಿ ಕಳವು ನಡೆಯುತ್ತಿದೆ ಎಂದು ಪಾನ್‌ವಾಲಾ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ.

click me!