ಚಿತ್ರರಂಗ ಕಾರ್ಮಿಕರಿಗೆ 10 ಲಕ್ಷ ರೂ ಪರಿಹಾರ ನೀಡಿದ ಕಾಲಿವುಡ್‌ ಬ್ರದರ್ಸ್!

Suvarna News   | Asianet News
Published : Mar 24, 2020, 02:16 PM ISTUpdated : Mar 28, 2020, 11:05 PM IST
ಚಿತ್ರರಂಗ ಕಾರ್ಮಿಕರಿಗೆ 10 ಲಕ್ಷ ರೂ ಪರಿಹಾರ ನೀಡಿದ ಕಾಲಿವುಡ್‌ ಬ್ರದರ್ಸ್!

ಸಾರಾಂಶ

ಕೊರೋನಾ ಕಂಟಕ ಚಿತ್ರರಂಗಕ್ಕೂ ತಟ್ಟಿದ ಹಿನ್ನಲೆಯಲ್ಲಿ ಚಲನಚಿತ್ರ ಕಾರ್ಮಿಕರಿಗೆ ಸಹಾಯ ಮಾಡುವ ಉದ್ದೇಶದಲ್ಲಿ ಕಾಲಿವುಡ್‌ ಖ್ಯಾತ ನಟರು 10 ಲಕ್ಷ ರೂ ನೀಡಿದ್ದಾರೆ.

ಚೀನಾದಿಂದ ಆರಂಭವಾಗಿ, ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೋನಾ ವೈರಸ್‌ ಚಿತ್ರರಂಗದ ಮೇಲೆ ಭೀಕರ ಪರಿಣಾಮ ಬೀರುತ್ತಿದೆ. ಈ ಕಾರಣ ಕೋಟ್ಯಾಂತರ ರುಪಾಯಿ ನಷ್ಟವಾಗುತ್ತಿದ್ದೆದೆ. ಆದರೂ ಆರೋಗ್ಯ ಮುಖ್ಯವೆಂದು ಸಿನಿಮಾ ಹಾಗೂ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿ ಸೇರಿ ಇತರೆ ಕಾರ್ಯಕ್ರಮಗಳ ಶೂಟಿಂಗ್‌ಗಳಿಗೆ ಬ್ರೇಕ್‌ ಹಾಕಲಾಗಿದೆ. 

ಆದರೆ ಇದರಿಂದ ದಿನಗೂಲಿ ಮಾಡುವ ಕಾರ್ಮಿಕರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕಾಲಿವುಡ್ ಸ್ಟಾರ್ ಬ್ರದರ್ಸ್ ಆದ ಸೂರ್ಯ ಹಾಗೂ ಕಾರ್ತಿ ಒಟ್ಟಾಗಿ ಫಿಲ್ಮ್ ಎಂಪ್ಲಾಯೀಸ್‌ ಫೆಡರೇಷನ್‌ ಆಫ್‌ ಸೌತ್‌ ಇಂಡಿಯಾ ಸಂಘಟನೆಗೆ 10 ಲಕ್ಷ ರೂ ದೇಣಿಗೆ ನೀಡಿದ್ದಾರೆ.  

ತಮಿಳು ಸಿನಿಮಾದಲ್ಲಿ ಕನ್ನಡದ ಕಂಪು ಬೀರಿದ ಕ್ಯಾಪ್ಟನ್!

ಈ ಸಂಘಟನೆಯಲ್ಲಿ ಸುಮಾರು 25000 ಮಂದಿ ಕೆಲಸ ಮಾಡುತ್ತಿದ್ದು, ಅವರಿಗೆ ಸ್ವಲ್ಪವಾದರೂ ಸಹಾಯವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಸಂಘಟನೆಯ ಸದಸ್ಯರೊಬ್ಬರು ಫೋನ್ ಮಾಡಿ ಸೂರ್ಯ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೂರ್ಯ ಹಾಗೂ ಕಾರ್ತಿ ಸಹಾಯ ಮಾಡಿದ್ದಾರೆ.

ಸೂರ್ಯ ಹಾಗೂ ಪತ್ನಿ ಜೋತಿಕಾ ಹೆಚ್ಚಾಗಿ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರದ್ದೇ ಸಂಸ್ಥೆಯೊಂದರಲ್ಲಿ ಸಾವಿರಾರು ಹೆಣ್ಣು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದಾರೆ.

ವೇದಿಕೆಯ ಮೇಲೆ ಯುವತಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟ ನಟ ಸೂರ್ಯ ಶಿವಕುಮಾರ್!

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!