ಕೊರೋನಾ ತಡೆಗೆ ಕೇಂದ್ರ ಸರ್ಕಾರದಿಂದ Kavach app

By Kannadaprabha NewsFirst Published Mar 28, 2020, 9:27 AM IST
Highlights

ಕೊರೋನಾ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಕೇಂದ್ರ ಮಾಹಿತಿ ತಂತ್ರಜ್ಞಾನ ಮಂತ್ರಾಲಯ‘ಕೊರೋನಾ ಕವಚ’ ಎಂಬ ಹೆಸರಿನ ಆ್ಯಪ್‌ ಒಂದನ್ನು ಅಭಿವೃದ್ಧಿ ಪಡಿಸಿದೆ. 

ನವದೆಹಲಿ (ಮಾ. 28): ಕೊರೋನಾ ಸೋಂಕು ಮತ್ತಷ್ಟುಹರಡುವುದನ್ನು ತಡೆಯಲು ಕೇಂದ್ರ ಮಾಹಿತಿ ತಂತ್ರಜ್ಞಾನ ಮಂತ್ರಾಲಯ‘ಕೊರೋನಾ ಕವಚ’ ಎಂಬ ಹೆಸರಿನ ಆ್ಯಪ್‌ ಒಂದನ್ನು ಅಭಿವೃದ್ಧಿ ಪಡಿಸಿದೆ.

ಆರಂಭಿಕ ಹಂತವಾಗಿ ಬೀಟಾ ಮಾದರಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಬಳಕೆದಾರರ ಮೊಬೈಲ್‌ ಲೊಕೇಶನ್‌ ಮೂಲಕ ಅವರು ನಡೆದಾಡಿದ ಸ್ಥಳಗಳ ಬಗ್ಗೆ ಈ ಆ್ಯಪ್‌ ಮಾಹಿತಿ ಸಂಗ್ರಹಿಸಲಿದೆ.

ಬ್ಲೂ ಟೂಥ್‌ ಮೂಲಕವೂ ಈ ಆ್ಯಪ್‌ ಕಾರ್ಯ ನಿರ್ವಹಿಸಲಿದ್ದು, ಒಂದು ವೇಳೆ ಕೊರೋನಾ ಪೀಡಿತ ವ್ಯಕ್ತಿ ನೀವಿರುವಲ್ಲಿ ಪ್ರಯಾಣಿಸಿದರೆ ಅಥವಾ, ನಿಮ್ಮ ಪಕ್ಕ ಸೋಂಕಿತ ತಂಗಿದ್ದರೆ ನೋಟಿಫಿಕೇಶನ್‌ ಮೂಲಕ ಎಚ್ಚರಿಕೆ ನೀಡುತ್ತದೆ. ಸದ್ಯ ಆ್ಯಂಡ್ರಾಯ್ಡ್‌ನಲ್ಲಿ ಮಾತ್ರ ಲಭ್ಯವಿದೆ.

click me!