14 ದಿನದ ಕ್ವಾರಂಟೈನ್‌ ಅವಧಿ ಮುಗಿದ ಮಾರನೇ ದಿನವೇ ಕೊರೋನಾ ಪತ್ತೆ!

By Kannadaprabha NewsFirst Published Mar 28, 2020, 8:47 AM IST
Highlights

14 ದಿನದ ಕ್ವಾರಂಟೈನ್‌ ಅವಧಿ ಮುಗಿದ ಮಾರನೇ ದಿನವೇ ಕೊರೋನಾ ಪತ್ತೆ!| ಈ ಅಪರೂಪದ ಘಟನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ

ಚಂಡೀಗಢ(ಮಾ.28):  ಇದೇ ಮೊದಲ ಬಾರಿಗೆ 14 ದಿನಗಳ ಕ್ವಾರಂಟೈನ್‌ ಅವಧಿ ಮುಕ್ತಾಯವಾದ ಮಾರನೇ ದಿನ ವ್ಯಕ್ತಿಯೋರ್ವ ಕೊರೋನಾ ಸೋಂಕಿಗೆ ಸಿಲುಕಿದ ಅಪರೂಪದ ಘಟನೆ ಚಂಡೀಗಢದಲ್ಲಿ ನಡೆದಿದೆ.

ದುಬೈನಿಂದ ಮಾ.11ರಂದು ತಾಯ್ನಾಡಿಗೆ ಬಂದಿದ್ದ 22 ವರ್ಷದ ವ್ಯಕ್ತಿ 14 ದಿನಗಳ ಕಾಲ ಹೋಮ್‌ ಕ್ವಾರಂಟೈನ್‌ನಲ್ಲಿದ್ದರು. ಈ ಅವಧಿಯಲ್ಲಿ ಅವರಿಗೆ ಯಾವುದೇ ಕೊರೋನಾ ರೋಗ ಲಕ್ಷಣಗಳು ಕಂಡುಬಂದಿಲ್ಲ. ಆದರೆ, 15ನೇ ದಿನಕ್ಕೆ ಜ್ವರ ಕಾಣಿಸಿಕೊಂಡಿದೆ.

ಇದುವರೆಗೂ 14 ದಿನಗಳ ದಿಗ್ಬಂಧನ ಅವಧಿಯಲ್ಲಿ ವ್ಯಕ್ತಿ ಈ ವ್ಯಾಧಿಗೆ ಸಿಲುಕಿದ್ದಾರೆಯೇ ಎಂಬುದು ಗೊತ್ತಾಗುತ್ತಿತ್ತು. ಈ ಅಪರೂಪದ ಘಟನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

click me!