ಕೊರೋನಾ ಪರಿಹಾರ: 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ!

By Suvarna News  |  First Published Mar 26, 2020, 2:41 PM IST

ಕೊರೋನಾ ವೈರಸ್‌ನನಿಂದ ಕಂಗಾಲಾದ ಜನರಿಗೆ ಸರ್ಕಾರದ ಅಭಯ| ದೇಶದ ಜನತೆಗಾಗಿ 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ ಕೇಂದ್ರ!| ಹಸಿವಿನಿಂದ ಯಾರೂ ಸಾಯಬಾರದು- ನಿರ್ಮಲಾ ಸೀತಾರಾಮನ್


ನವದೆಹಲಿ(ಮಾ. 26): ದೇಶದಲ್ಲಿ ದಿನೇ ದಿನೇ ಉಲ್ಭಣಿಸುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್‌ಡೌನ್‌ನಿಂದ ಜನ ಸಾಮಾನ್ಯರಿಗೆ ಸಮಸ್ಯೆಳನ್ನೆದುರಿಸಬೇಕಾಗಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅರ್ಥಿಕವಾಗಿಯೂ ಕಷ್ಟವುಂಟು ಮಾಡಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಹಾಗಾದ್ರೆ ಇದರ ಅನ್ವಯ ಏನೇನು ಸಿಗುತ್ತೆ? ಇಲ್ಲಿದೆ ವಿವರ 

"

Tap to resize

Latest Videos

undefined

ಇಂದು ಪತ್ರಿಕಾಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ಮೂರು ತಿಂಗಳ ರಾಷ್ಟ್ರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಈ ಪ್ಯಾಕೇಜ್‌ನಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಅನೇಕ ನೂತನ ಯೋಜನೆಗಳನ್ನು ಘೋಷಿಸಲಾಗಿದೆ. ಅಲ್ಲದೇ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಕೊರೋನಾದಿಂದ ಜನರನ್ನು ಕಾಡುತ್ತಿರುವ ವೈದ್ಯರು, ಪ್ಯಾರಾ ಮೆಡಿಕಲ್ ಸ್ಟಾಫ್‌ಗಳಿಗೆ 50 ಲಕ್ಷ ರೂ. ಆರೋಗ್ಯ ವಿಮೆಯನ್ನೂ ಘೋಷಿಸಿದ್ದಾರೆ.

ಕೊರೋನಾ ಆತಂಕ, ಕೆಲ ತಿಂಗಳು EMI ವಿನಾಯಿತಿ!?

ಯಾರಿಗೇನು ಘೋಷಣೆ?

- ಮುಂದಿನ ಮೂರು ತಿಂಗಳು ಬಿಪಿಎಲ್‌ ಕಾರ್ಡುದಾರರಿಗೆ 5 ಕೆಜಿ ಉಚಿತ ಅಕ್ಕಿ ಮತ್ತು ಗೋಧಿಯನ್ನು ನೀಡಲು ಉದ್ದೇಶಿಸಲಾಗಿದೆ.

-ಉಜ್ವಲ ಯೋಜನೆಯ ಅಡಿಯಲ್ಲಿ 8.3 ಕೋಟಿ ಬಿಪಿಎಲ್‌ ಕುಟುಂಬಗಳಿಗೆ ಮುಂದಿನ ಮೂರು ತಿಂಗಳಿಗೆ ಉಚಿತವಾಗಿ ಅಡಿಗೆ ಅನಿಲ ವಿತರಣೆ.

-ವೈದ್ಯರು, ಪ್ಯಾರಾ ಮೆಡಿಕಲ್ ಸ್ಟಾಫ್‌ಗಳಿಗೆ 50 ಲಕ್ಷ ರೂ. ಆರೋಗ್ಯ ವಿಮೆ

- ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಸುಮಾರು 8.9 ಕೋಟಿ ರೈತರ ಖಾತೆಗಳಿಗೆ ನೇರವಾಗಿ ಮುಂದಿನ ಮೂರು ತಿಂಗಳಿಗೆ ತಲಾ 2,000 ಹಣ ಜಮಾವಣೆ, ಮೊದಲ ಕಂತಿನ ಹಣವನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಜಮೆ.

-ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜನ್‌ಧನ್ ಖಾತೆ ಹೊಂದಿರುವ ಎಲ್ಲಾ ಮಹಿಳೆಯರ ಖಾತೆಗಳಿಗೂ ನೇರವಾಗಿ 500 ರೂ ಜಮೆ.

"

ಏಷ್ಯಾದ ಈ ರಾಷ್ಟ್ರದಲ್ಲಿ ಫಲ ಕೊಡ್ತಿದೆ ಕೊರೋನಾ ನಿಯಂತ್ರಣ ಕ್ರಮ!

- ಮಹಿಳಾ ಸ್ವಸಹಾಯ ಸಂಘಗಳಿಗೆ 10 ಲಕ್ಷದವರೆಗೆ ಶ್ಯೂರಿಟಿ ಇಲ್ಲದೆ ಸಾಲ. ಈ ಮೂಲಕ ಸುಮಾರು 20 ಕೋಟಿ ಮಹಿಳೆಯರು ಅನುಕೂಲ.

- ದಿನಗೂಲಿ ನೌಕರರ ಕೂಲಿಯನ್ನು 180 ರಿಂದ 200 ರೂಪಾಯಿಗೆ ಏರಿಕೆ.

- ಎಲ್ಲಾ ರಾಜ್ಯಗಳ ಖಾತೆಯಲ್ಲಿರುವ ಕಟ್ಟಡ ಕಾರ್ಮಿಕರ ಯೋಗಕ್ಷೇಮ ನಿಧಿಯಲ್ಲಿರುವ ಸುಮಾರು 31,000 ಕೋಟಿ ಹಣವನ್ನು ಆಯಾ ರಾಜ್ಯಗಳು ಕಾರ್ಮಿಕರಿಗೆ ಸಹಾಯ ಧನ ನೀಡಲು ಬಳಸಿಕೊಳ್ಳಬೇಕು.

ಸಂಘಟಿತ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 2 ವಿಶೇಷ ಪ್ಯಾಕೇಜ್

- ಈ ವಲಯದ ಕಾರ್ಮಿಕರಿಗೆ ಸರ್ಕಾರ ದೀನ ದಯಾಳ ಉಪಾಧ್ಯಾಯ ಯೋಜನೆಯ ಅಡಿಯಲ್ಲಿ ತಲಾ 20 ಲಕ್ಷ ರೂ. ಸಾಲ, ಇದರಿಂದ ಸುಮಾರು 2 ಕೋಟಿ ಕುಟುಂಬಗಳು ಲಾಭ

- ಕಾರ್ಮಿಕರ ಪಿಎಫ್ (ಭವಿಷ್ಯ ನಿಧಿ) ಹಣವನ್ನು ಹಿಂಪಡೆಯಲು ನಿಯಮವನ್ನು ಸರಳಗೊಳಿಸಲಾಗಿದೆ. 15,000 ಕ್ಕಿಂತ ಕಡಿಮೆ ವೇತನ ಹೊಂದಿರುವವರಿಗೆ ಕೇಂದ್ರ ಸರ್ಕಾರವೇ ಶೇ.24 ರಷ್ಟು ಪಿಎಫ್ ಹಣ ಭರಿಸಲಿದೆ.

- ಶೇ.75ರಷ್ಟು ಪಿಎಫ್ ಹಣವನ್ನು ಪಡೆಯಲು ಅವಕಾಶ ನೀಡಲಾಗಿದ್ದು, ಕಂಪೆನಿ ಮತ್ತು ಉದ್ಯೋಗಿ ಎರಡೂ ಪಾಲನ್ನೂ ಸರ್ಕಾರವೇ ನೀಡಲಿದೆ.

ಜೂನ್‌ವರೆಗೆ ಉಳಿಯಲಿದ್ಯಂತೆ ಕೊರೋನಾ: ಜ್ಯೋತಿಷಿ ಏನ್ ಹೇಳಿದ್ರು ಕೇಳಿ

- ವೃದ್ದಾಪ್ಯ, ವಿಧವಾ ಮತ್ತು ಅಂಗವಿಕಲರಿಗೆ 2000 ಹೆಚ್ಚುವರಿ ಪಿಂಚಣಿ ನಿಗದಿ ಮಾಡಲಾಗಿದ್ದು ಈ ಹಣ ನೇರವಾಗಿ ಅವರ ಖಾತೆಗೆ ವರ್ಗಾವಣೆಯಾಗುವಂತೆ ಆಯಾ ಇಲಾಖೆಗಳಿಗೆ ಸೂಚನೆ

- ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಖಾತೆಯಲ್ಲಿರುವ ಹಣವನ್ನು ಕೊರೋನಾ ವಿರುದ್ಧದ ಹೋರಾಟಕ್ಕೆ, ಚಿಕಿತ್ಸೆ ಮತ್ತು ಪರೀಕ್ಷಾ ಲ್ಯಾಬ್ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಸೂಚನೆ.

ಕೊರೋನಾ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 25 ರಿಂದ ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದು, ಇದರಿಂದ ದೇಶಕ್ಕೆ ಸುಮಾರು 9 ಲಕ್ಷ ಕೋಟಿ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ನಿರ್ಧಾರದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನ ಸಾಕಷ್ಟು ನಷ್ಟ ಅನುಭವಿಸಲಿದ್ದಾರೆ. ಇದೇ ಕಾರಣದಿಂದ ಇಂದು ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

click me!