ಮುಂಬೈ ಸ್ಲಂನಲ್ಲಿ ಮೊದಲ ಕೊರೋನಾ ವೈರಸ್ ಪತ್ತೆ; ಹೆಚ್ಚಾಯ್ತು ಬಡಪಾಯಿಗಳ ಆತಂಕ!

Suvarna News   | Asianet News
Published : Apr 01, 2020, 09:40 PM IST
ಮುಂಬೈ ಸ್ಲಂನಲ್ಲಿ ಮೊದಲ ಕೊರೋನಾ ವೈರಸ್ ಪತ್ತೆ; ಹೆಚ್ಚಾಯ್ತು ಬಡಪಾಯಿಗಳ ಆತಂಕ!

ಸಾರಾಂಶ

ದೇಶದೆಲ್ಲೆಡೆ ಕೊರೋನಾ ವೈರಸ್ ಹೊಸ ಕೇಸ್ ಪತ್ತೆಯಾಗುತ್ತಲೇ ಇದೆ. ಇದಕ್ಕೆ ಜನರ ನಿರ್ಲಕ್ಷ್ಯವೇ ಕಾರಣ. ಹೆಚ್ಚಾಗಿ ವಿದ್ಯಾವಂತರೇ ನಿಯಮ, ಸೂಚನೆ ಉಲ್ಲಂಘಿಸುತ್ತಿದ್ದಾರೆ. ಇದರಿಂದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಮುಂಬೈನ ಸ್ಲಂ ನಿವಾಸಿಗಳಲ್ಲಿ ಇದೀಗ ಮೊದಲ ಕೇಸ್ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಬಡಪಾಯಿಗಳ ಆತಂಕ ಹೆಚ್ಚಾಗಿದೆ. 

ಮುಂಬೈ(ಏ.01): ಕೊರೋನಾ ವೈರಸ್ ಹರಡದಂತೆ ತಡೆಯಲು ಹಲವು ಸೂಚನೆ, ಮನವಿ ಮಾಡಿದರೂ ಜನರೂ ಕೇಳುವ ಪರಿಸ್ಥಿಯಲ್ಲಿಲ್ಲ. ಜನರ ನಿರ್ಲಕ್ಷ್ಯದಿಂದ ಇದೀಗ ಮುಂಬೈನ ಧಾರವಿ ಸ್ಲಂ ಪ್ರದೇಶದಲ್ಲಿ ಮೊದಲ ಕೊರೋನಾ ಕೇಸ್ ಪತ್ತೆಯಾಗಿದೆ. 56 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ ಸೋಂಕಿತನ್ನು ಸಿಯೋನ್ ಆಸ್ಪತ್ರೆಗೆ ಸೇರಿಸಲಾದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಪಾಲ್ಗೊಂಡಿದ್ದ ಕನ್ನಡಿಗರು ಎಲ್ಲಿಗೆ ಹೋದ್ರು?

ಸೋಂಕಿತ ಕುಟುಂಬದ 10 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇಷ್ಟೇ ಅಲ್ಲ ಸಂಪೂರ್ಣ ಬಿಲ್ಡಿಂಗ್‌ ಬಂದ್ ಮಾಡಲಾಗಿದೆ.  ಬಿಲ್ಡಿಂಗ್‌ನಲ್ಲಿ ಬಂಧಿಯಾಗಿರುವರಿಗೆ ಆಹಾರ, ನೀರು ಸೇರಿದಂತೆ ಅಗತ್ಯ ವಸ್ತುಗಳನ್ನು ಅಧಿಕಾರಿಗಳೇ ವಿತರಿಸುತ್ತಿದ್ದಾರೆ. ಯಾರೂ ಕೂಡ ಮನೆಯಿಂದ ಹೊರಗೆ ಬರದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

ಮುಂಬೈನ ಧಾರಾವಿ ಸ್ಲಂ ಪ್ರದೇಶ ಸರಿಸುಮಾರು 613 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿದೆ. ಇನ್ನು ಇಲ್ಲಿ 15 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಹೀಗಾಗಿ ಇಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ಸೋಂಕು ಹರಡದಂತೆ ತಡೆಯಲು ಎಲ್ಲಾ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂಬೈನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 350 ದಾಟಿದೆ. ಅತೀ ಹೆಚ್ಚು ಸೋಂಕು ತಗುಲಿದ ರಾಜ್ಯ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ. 

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!