ಸತ್ತವರನ್ನು ಸ್ವರ್ಗ ಸೇರಲು ಬಿಡುತ್ತಿಲ್ಲ ಕೊರೋನಾ ವೈರಸ್!

By Suvarna NewsFirst Published Apr 8, 2020, 6:53 PM IST
Highlights

ಕೊರೋನಾ ವೈರಸ್ ಭಾರತದಲ್ಲಿ ಸೃಷ್ಟಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ದುಡಿದು ಒಂದು ಹೊತ್ತು ನೆಮ್ಮದಿಯಾಗಿ ಊಟ ಮಾಡುತ್ತಿದ್ದವರು ಇದೀಗ ಪರದಾಡುವಂತಾಗಿದೆ. ಕಾರಣ ವೈರಸ್ ಹರಡಂತೆ ಭಾರತವನ್ನೇ ಲಾಕ್‌ಡೌನ್ ಮಾಡಲಾಗಿದೆ. ದ್ವಿಗ್ಬಂದನಲ್ಲಿರುವವರಿಗೆ ವೈರಸ್ ಭೀತಿ ಹಾಗೂ ಲಾಕ್‌ಡೌನ್ ಶಿಕ್ಷೆ, ಇನ್ನು  ಮರಣ ಹೊಂದಿದವರಿಗೆ ಸ್ವರ್ಗ ಪ್ರಾಪ್ತಿಗೆ ಅವಕಾಶವೇ ನೀಡುತ್ತಿಲ್ಲ ಕೊರೋನಾ ವೈರಸ್.

ಅಮೃತಸರ(ಏ.08): ಕೊರೋನಾ ವೈರಸ್‌ನಿಂದ ಪ್ರತಿ ದೇಶ ನಲುಗುತ್ತಿದೆ. ಇತ್ತ ಭಾರತ ಕೂಡ ವೈರಸ್ ಮಹಾಮಾರಿಗೆ ಸಿಲುಕಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇತ್ತ ಲಾಕ್‌ಡೌನ್ ಮಾಡಿದರೂ ಸೋಂಕಿತರ ಸಂಖ್ಯೆ ಇಳಿಮುಖವಾಗಿಲ್ಲ. ವೈರಸ್ ಎಲ್ಲಿ ತಗುಲುವುದೋ ಅನ್ನೋ ಭೀತಿಯಲ್ಲಿ ಜನರು ಮನೆಯೊಳಗೆ ಸ್ವಯಂ ದಿಗ್ಬಂಧನದಲ್ಲಿದ್ದಾರೆ. ಮನೆಯೊಳಗೆ ಬಂಧಿಯಾಗಿರುವವರಿಗೆ ವೈರಸ್‌ ತಗುಲುವ ಭೀತಿಯಾದರೆ, ಇತ್ತ ಪ್ರಾಣ ಕಳೆದುಕೊಂಡವರನ್ನೂ ಕೊರೋನಾ ವೈರಸ್ ಬಿಡುತ್ತಿಲ್ಲ.

"

ಏಪ್ರಿಲ್ 14ರ ಬಳಿಕ 11 ರಾಜ್ಯಗಳಲ್ಲಿ ಮುಂದುವರೆಯುತ್ತೆ ಲಾಕ್‌ಡೌನ್..!

ಭಾರತ ಲಾಕ್‌ಡೌನ್‌ನಿಂದ ಕೂಲಿ ಕಾರ್ಮಿಕರು, ನಿರ್ಗತಿಕರು, ಬಡವರ ಸಮಸ್ಯೆ ಒಂದೆಡೆಯಾಗಿದ್ದರೆ, ಮತ್ತೊಂದೆಡೆ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದೇ ಶವಗಳು ಅನಾಥವಾಗಿ ಬಿದ್ದಿವೆ. ಅಗಲಿದ ಕುಟುಂಬಸ್ಥರಿಗೆ ಅಂತಿಮ ಕ್ರಿಯಾ ವಿಧಿವಿಧಾನಗಳನ್ನು ನೇರವೇರಿಸಲು ಸಾಧ್ಯವಾಗುತ್ತಿಲ್ಲ. ದುರಂತ ಅಂದರೆ  ಅಮೃತರಸದಲ್ಲಿನ ದುರ್ಗ್ಯಾನ್ ಮಂದಿರಲ್ಲಿ 250 ರಿಂದ 300 ಶವಗಳನ್ನು ಮೂಟೆಗಳಲ್ಲಿ ಕಟ್ಟಿ ಇಡಲಾಗಿದೆ. 

BSY ತಾಳಿದ ದೃಢ ನಿಲುವು ಸೂಕ್ತ, ಸಾಗ್ವತಾರ್ಹ ಎಂದ ಕುಮಾರಣ್ಣ: ಸಿಎಂ ಮಾಡಿದ್ದಾದ್ರೂ ಏನಣ್ಣ..?

ಹಲವು ಶವಗಳನ್ನು ಸುಡಲಾಗಿದ್ದರೂ ಅಸ್ಥಿಯನ್ನು ಪವಿತ್ರ ಸ್ಥಳದಲ್ಲಿ ಬಿಡಲು ಸಾಧ್ಯವಾಗುತ್ತಿಲ್ಲ.  ಕರ್ಫ್ಯೂ ಹಾಗೂ ಲಾಕ್‌ಡೌನ್‌ನಿಂದ ಹರಿದ್ವಾರ ಪ್ರವೇಶ ನಿಷೇಧಿಸಲಾಗಿದೆ. ಹೀಗಾಗಿ ಶವಗಳನ್ನು ಹಾಗೂ ಅಸ್ಥಿಯನ್ನು ಹರಿದ್ವಾರಕ್ಕೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ ಕ್ರಿಯಾ ವಿಧಿವಿಧಾನಗಳನ್ನು ಮಾಡಲು ಆಗದೆ ಶವಗಳು ಅನಾಥವಾಗಿ ಬಿದ್ದಿದೆ. ಮೊದಲೇ ನಿಧನದಿಂದ ನೋವಿನಲ್ಲಿರುವ ಕುಟುಂಬಗಳಿಗೆ ವಿಧಿ ವಿಧಾನಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋ ನೋವು ಸೇರಿಕೊಂಡಿದೆ.

ಶವಗಳನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸಿ ಇಡಲು ಸ್ಥಳ ಹಾಗೂ ಸೌಲಭ್ಯಗಳು ಇಲ್ಲದಾಗಿದೆ. ಹೀಗಾಗಿ ಬಟ್ಟೆ, ಕಸಗಳನ್ನು ತುಂಬುವ ಹಾಗೇ ಮೂಟೆಗಳಲ್ಲಿ ಶವಗಳನ್ನು ಹಾಗೂ ಅಸ್ಥಿಗಳನ್ನು ಕಟ್ಟಿ ಇಡಲಾಗಿದೆ.  ಇದು ಅಮೃತರಸದ ಪರಿಸ್ಥಿತಿ ಮಾತ್ರವಲ್ಲ, ಬಹುತೇಕ ಭಾರತದಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.  

click me!