ರಸ್ತೆಯಲ್ಲಿ ಓಡಾಡುವವರ ಚಳಿ ಬಿಡಿಸಿದ 'ಕೊರೋನಾ': ಹೊರಗೋಗೋ ಮುನ್ನ ಎಚ್ಚರ!

By Kannadaprabha NewsFirst Published Mar 28, 2020, 2:29 PM IST
Highlights

ಕೊರೋನಾ ತಡೆಯಲು ದೇಶದಾದ್ಯಂತ ಲಾಕ್‌ಡೌನ್| ಸರ್ಕಾರದ ನಿಯಮಗಳಿಗೂ ತಲೆಬಾಗದ ಜನ, ರಸ್ತೆಯಲ್ಲಿ ಓಡಾಟ| ಜನರ ಚಳಿ ಬಿಡಿಸಲು ರಸ್ತೆಯಲ್ಲೇ ನಿಂತು ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸಿದ ಚೆನ್ನೈ ಪೊಲೀಸರುಉ

ಚೆನ್ನೈ(ಮಾ.28): ಕೊರೋನಾ ವೈರಸ್ ನಿಯಂತ್ರಸಲು ಸರ್ಕಾರ ದೇಶದಾದ್ಯಂತ ಲಾಕ್‌ಡೌನ್ ಹೇರಿದ್ದರೂ, ಕ್ಯಾರೇ ಎನ್ನದ ಜನ ರಸ್ತೆಯಲ್ಲಿ ಓಡಡಾಟ ಮುಂದುವರೆಸಿದ್ದಾರೆ. ಈ ಮೂಲಕ ತಮ್ಮ ಮಾತ್ರವಲ್ಲದೇ ತನ್ನ ಕುಟುಂಬ ಹಾಗೂ ಸಮಾಜಕ್ಕೆ ಕಂಟಕವಾಗಿ ಪರಿಣಮಿಸುತ್ತಿದ್ದಾರೆ. ಇಂತಹವರಿಗೆ ಪಾಠ ಕಲಿಸಲು ಪೊಲೀಸರು ನಾನಾ ತಂತ್ರ ಪ್ರಯೋಗಿಸಿದರೂ ಯಾವುದೇ fರಯೋಜನವಾಗುತ್ತಿಲ್ಲ. ಲಾಠಿ ರುಚಚಿ ತೋರಿಸಿದರೂ ಹೊರ ಹೋವಗುವುದು ಕಡಿಮೆಯಾಗಿಲ್ಲ. ಸದ್ಯ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಚೆನ್ನೈ ಪೊಲೀಸರು ವಿನೂತನ ಪ್ಲಾನ್ ಅಳವಡಿಸಿಕೊಂಡಿದ್ದಾರೆ.

ಹೌದು ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಬುದ್ಧಿ ಕಲಿಸಲು ಚೆನ್ನೈ ಪೊಲೀಸರು ಕೊರೋನಾ ವೈರಸ್ ಹೆಲ್ಮೆಟ್‌ ಮೊರೆ ಹೋಗಿದ್ದಾರೆ. ಖುದ್ದು ಪೊಲೀಸರು ಇದನ್ನು ಧರಿಸಿ ರಸ್ತೆಯಲ್ಲಿ ಓಡಾಡುವವರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Chennai Cop wears a corona like helmet and stop motor bike riders and ask them to stay home. 🦠😄😭 (recd as a fed) Too good! pic.twitter.com/HSHWK4RzAG

— 🇮🇳 Srini Swaminathan🇮🇳 (@srini091)

ಈ ವಿನೂತ ಜಾಗೃತಿ ಅಭಿಯಾನ ಕ್ಲಲಿಕ್ ಕೂಡಾ ಆಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚೆನ್ನೈ ಪೊಲೀಸ್ ಅಧಿಕಾರಿಯೊಬ್ಬರು ಕೋವಿಡ್ 19 ಹೆಲ್ಮೆಟ್ ಧರಿಸಿ ಬಬೈಕ್ ಸವಾರರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲಲ್ಲಿ ಭಾರೀ ವೈರಲ್‌ ಆಗಿದೆ. 

click me!