ಮಸೀದಿಯೊಳಗೆ ಒಟ್ಟಾಗಿ ಸೇರಿದ 40 ಜನರ ಮೇಲೆ ಪ್ರಕರಣ ದಾಖಲು

Published : Apr 10, 2020, 02:55 PM ISTUpdated : Apr 10, 2020, 03:30 PM IST
ಮಸೀದಿಯೊಳಗೆ ಒಟ್ಟಾಗಿ ಸೇರಿದ 40 ಜನರ ಮೇಲೆ ಪ್ರಕರಣ ದಾಖಲು

ಸಾರಾಂಶ

ಕೊರೋನಾ ವಿರುದ್ಧ ಹೋರಾಟ/ ಮಧ್ಯಪ್ರದೇಶದಲ್ಲಿ ಲಾಕ್ ಡೌನ್ ಉಲ್ಲಂಘನೆ/ ಮಸೀದಿಯೊಳಗೆ ಒಂದೆ ಕಡೆ ಸೇರಿದ 40 ಜನರಿಂದ ಪ್ರಾರ್ಥನೆ/ ಪ್ರಾರ್ಥನೆ ಮಾಡಿದವರ ಮೇಲೆ ಪ್ರಕರಣ ದಾಖಲು

ಭೋಪಾಲ್(ಏ. 10)  ಕೊರೋನಾ ವಿರುದ್ಧ ಹೋರಾಟಡಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ.  ಮಸೀದಿ-ಮಂದಿರ-ಚರ್ಚ್ ಎಲ್ಲಿಯೂ ಜನರು ಸೇರುವಂತೆ ಇಲ್ಲ ಎಂದು ಹೇಳಲಾಗಿದೆ. ಆದರೆ ಇಲ್ಲಿ ಯಾವುದಕ್ಕೂ ಕಿಮ್ಮತ್ತು ಇಲ್ಲ.

ಮಧ್ಯಪ್ರದೇಶದ ಛಿಂದವಾರಾದ ಚೌರಾಯಿಯ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 40 ಜನರ ಮೇಲೆ ಪ್ರಕರಣ ದಾಖಲಾಗಿದೆ.  ಸೆಕ್ಷನ್ 144ನ್ನು ಉಲ್ಲಂಘನೆ ಮಾಡಿ 40 ಜನ ಒಂದೇ ಕಡೆ ಸೇರಿ ಪ್ರಾರ್ಥನೆ ಸಲ್ಲಿಸುತ್ತಿದ್ದು ಅವರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಚೌರಾಯಿ ಠಾಣಾಧಿಕಾರಿ ತಿಳಿಸಿದ್ದಾರೆ. 

ಅಮೆರಿಕ, ಚೀನಾಕ್ಕಿಂತ ಡೇಂಜರ್ ಸ್ಥಿತಿಯಲ್ಲಿ ಭಾರತ

ಎಪಿಡಿಮಿಕ್ ಆಕ್ಟ್  ಅಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಡೀ ಪ್ರಪಂಚವನ್ನು ಕಾಡುತ್ತಿರುವ ಕೊರೋನಾ ತಡೆಗೆ ಎಲ್ಲ ರಾಷ್ಟ್ರ ಗಳು ಪ್ರಯತ್ನ ಮಾಡುತ್ತಲೇ ಬಂದಿವೆ. ಭಾರತದಲ್ಲಿಯೂ ಏಪ್ರಿಲ್ 14 ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಒಟ್ಟಾಗಿ ಸೇರುವುದನ್ನು ನಿಷೇಧ ಮಾಡಲಾಗಿದೆ. ಯಾವುದೇ ಕಾರಣಕ್ಕೆ ಸಾಮಾಜಿಕ ಅಂತರ ಮೀರಬಾರದು ಎಂಬುದನ್ನು ತಿಳಿಸಿಕೊಡಲಾಗಿದೆ. ಆದರೂ ಅಲ್ಲಲ್ಲಿ ಇಂಥ ಪ್ರಕರಣಗಳು ವರದಿಯಾಗುತ್ತಿವೆ.

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!