ಮದ್ಯದಂಗಡಿ ಬಿಟ್ಟು ಮಾನಸಿಕ ಆಸ್ಪತ್ರೆಗೆ ವ್ಯಸನಿಗಳ ದೌಡು!

By Kannadaprabha NewsFirst Published Apr 4, 2020, 9:10 AM IST
Highlights

ಮದ್ಯದಂಗಡಿ ಬಿಟ್ಟು ಮಾನಸಿಕ ಆಸ್ಪತ್ರೆಗೆ ವ್ಯಸನಿಗಳ ದೌಡು| ತೆಲಂಗಾಣ, ಕೇರಳದಲ್ಲಿ ಹೆಚ್ಚಿದ ಇವರ ಸಂಖ್ಯೆ| ಲಾಕ್‌ಡೌನ್‌ ಕಾರಣ ಮದ್ಯದಂಗಡಿ ಬಂದ್‌| ಮದ್ಯ ಸಿಗದೇ ಕುಡುಕರಿಗೆ ಮಾನಸಿಕ ಕ್ಷೋಭೆ

ತಿರುವನಂತಪುರ(ಏ.04): ಕೊರೋನಾ ವೈರಸ್‌ ಹರಡುವಿಕೆ ಕಾರಣ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿರುವ ಪರಿಣಾಮ ಮದ್ಯದ ಅಂಗಡಿಗಳೂ ಬಂದ್‌ ಆಗಿವೆ. ಈ ಕಾರಣ ಮದ್ಯ ಸಿಗದೇ ಕುಡುಕರಿಗೆ ಪೀಕಲಾಟ ಶುರುವಾಗಿದೆ.

ವಿಶೇಷವಾಗಿ ಕರ್ನಾಟಕ ಅಲ್ಲದೆ, ಪಕ್ಕದ ತೆಲಂಗಾಣ ಹಾಗೂ ಕೇರಳದಲ್ಲಿ ಮದ್ಯವ್ಯಸನಿಗಳು ಚಡಪಡಿಕೆಗೆ ಒಳಗಾಗಿದ್ದಾರೆ. ಅನೇಕರು ಮದ್ಯವ್ಯಸನ ಮುಕ್ತ ಕೇಂದ್ರಗಳಿಗೆ ತೆರಳಿ ಮದ್ಯವನ್ನು ಈಗಲಾದರೂ ಬಿಡುವ ಮನಸ್ಸು ತೋರಿದರೆ, ಇನ್ನೂ ಅನೇಕರ ಮಾನಸಿಕ ಕ್ಷೋಭೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ವೈದ್ಯರ ಚೀಟಿ ಇದ್ರೆ ಮದ್ಯ ವಿತರಿಸುವ ನಿರ್ಧಾರ: ಕೇರಳ ಸರ್ಕಾರಕ್ಕೆ ಛೀಮಾರಿ!

ತೆಲಂಗಾಣದಲ್ಲಿ 2400 ಮದ್ಯದ ಅಂಗಡಿಗಳು ಹಾಗೂ 700 ಬಾರ್‌ಗಳು ಮುಚ್ಚಿವೆ. ಈ ಕಾರಣ ಹೆæೖದರಾಬಾದ್‌ನ ಎರಗಡ್ಡದಲ್ಲಿ ಇರುವ ಮಾನಸಿಕ ಆರೋಗ್ಯ ಕೇಂದ್ರಕ್ಕೆ 150 ಮದ್ಯ ವ್ಯಸನಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ವಿವಿಧ ಜಿಲ್ಲೆಗಳಲ್ಲಿರುವ ಮಾನಸಿಕ ತಜ್ಞರ ಬಳಿಯೂ ಹಲವರು ಚಿಕಿತ್ಸೆ ಪಡೆದಿದ್ದಾರೆ.

ಇದು ತೆಲಂಗಾಣದ ಕತೆಯಾದರೆ ಕೇರಳದ್ದೂ ಇದೇ ಹಾಡು. ಅತಿ ಹೆಚ್ಚು ತಲಾ ಮದ್ಯಸೇವನೆಯ ‘ಖ್ಯಾತಿ’ ಹೊಂದಿರುವ ಕೇರಳದಲ್ಲಿ ಕುಡುಕರ ಪಾಡು ಹೇಳತೀರದು. ಒಂದೇ ವಾರದಲ್ಲಿ 14 ಮದ್ಯವ್ಯಸನ ಮುಕ್ತಿ ಕೇಂದ್ರಗಳಿಗೆ 64 ಮಂದಿ ದಾಖಲಾಗಿದ್ದಾರೆ. ಸಾಮಾನ್ಯ ಸಮಯದಲ್ಲಿ 20-30 ಜನ ಬರುತ್ತಿದ್ದರು. ಆದರೆ ಈಗ ಈ ಸಂಖ್ಯೆ ದುಪ್ಪಟ್ಟಾಗಿದೆ.

ಲಾಕ್‌ಡೌನ್ ಎಫೆಕ್ಸ್: ರಾಜ್ಯದಲ್ಲಿ ಮದ್ಯ ಸಿಗದೆ 17 ಮಂದಿ ಆತ್ಮಹತ್ಯೆ!

ಕೇರಳದಲ್ಲಿ ಮದ್ಯ ಸಿಗದೇ ಒಂದು ವಾರದಲ್ಲಿ 8 ಮಂದಿ ಹಾಗೂ ತೆಲಂಗಾಣದಲ್ಲಿ 4 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

click me!