ತಟ್ಟೆ, ಗಂಟೆ ಹಿಡಿದು ಬೀದಿಗಿಳಿದ ಜನ; ಮೋದಿ ಬೆಂಬಲಿಸಿದ ಜನರನ್ನೇ ಟೀಕಿಸಿದ ನಟ?

Suvarna News   | Asianet News
Published : Mar 24, 2020, 04:09 PM IST
ತಟ್ಟೆ, ಗಂಟೆ ಹಿಡಿದು ಬೀದಿಗಿಳಿದ ಜನ; ಮೋದಿ ಬೆಂಬಲಿಸಿದ ಜನರನ್ನೇ ಟೀಕಿಸಿದ ನಟ?

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜನತಾ ಕರ್ಫ್ಯೂ ಹಾಗೂ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಯೋಧರಿಗೆ ಸಲಾಂ ಹೇಳಲು ಮೋದಿ ನೀಡಿದ ಕರೆಗೆ ಸ್ಪಂದಿಸಿದ ಸಾರ್ವಜನಿಕರನ್ನು ನಟ ರೈ ಟೀಕಿಸಿದ್ದು ಹೀಗೆ....

ದೇಶವೇ ಕೂತು ಕೊರೋನಾ ವೈರಸ್‌ ಹೆಂಗಪ್ಪಾ ಹೋಗಲಾಡಿಸುವುದೆಂದು ಚಿಂತಿಸುತ್ತಿದ್ದರೆ, ಇತ್ತ ಬಹು ಬಾಷಾ ನಟ ಪ್ರಕಾಶ್‌ ರೈ ಬಿಜೆಪಿ ವಿರುದ್ಧ ಟ್ವೀಟ್ ದಾಳಿ ನಡೆಸಿ, #JustAsking ಎಂದಿದ್ದಾರೆ. ಸದಾ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸುವ ಚಿಂತಕ ರೈ ಈ ಸಲ ಜನರ ವಿರುದ್ಧ ಹರಿಹಾಯ್ದಿದ್ದಾರೆ. ದೇಶಕ್ಕೆ ಕೊರೋನಾ ವೈರಸ್ ಕಾಲಿಟ್ಟ ಬೆನ್ನಲ್ಲೇ, ಎಲ್ಲರನ್ನೂ ಒಗ್ಗಟ್ಟಾಗಿಸಲು, ಮನೆಯಲ್ಲಿಯೇ ಇರುವ ಅಗತ್ಯವನ್ನು ಮನದಟ್ಟು ಮಾಡಿಸಲು ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಅಷ್ಟೇ ಅಲ್ಲ, ರಾತ್ರಿ ಬೆಳಗ್ಗೂ ನಮಗಾಗಿ ಶ್ರಮಿಸುತ್ತಿರುವ ವೈದ್ಯರು, ಪತ್ರಕರ್ತರು, ಪೊಲೀಸರು, ಸೈನಿಕರನ್ನು ಹುರಿದುಂಬಿಸುಲು ಇರುವಲ್ಲಿಯೇ ಚಪ್ಪಾಳೆ ತಟ್ಟಲು ಕರೆ ನೀಡಿದ್ದರು. ಆದರೆ, ಮಂದಿ ಗುಂಪು ಗುಂಪಾಗಿ ಬಂದು ಅಲ್ಲಲ್ಲಿ ಸಂಭ್ರಮಚಾರಣೆಯನ್ನೂ ಮಾಡಿದ್ದರು. 

50 ಲಕ್ಷ ರೂ. ನೀಡಿ ಹಿರಿಯ ಕಲಾವಿದನನ್ನು ಕಾಪಾಡಿದ ಪ್ರಕಾಶ್‌ ರಾಜ್!

ಮೋದಿ ಹೇಳಿದ್ದಕ್ಕೆ ಜನರ ಸ್ಪಂದನೆ ಅತ್ಯದ್ಭುತವಾಗಿತ್ತು. ಆದರೆ, ನಡೆದು ಕೊಂಡ ರೀತಿ ಬಗ್ಗೆ ಕೆಲವೆಡೆ ಟೀಕೆಗಳು ಈಗಾಗಲೇ ವ್ಯಕ್ತವಾಗಿವೆ. ಹಾಗೆಯೇ ಸದಾ #JustAsking ಎಂಬ ಹ್ಯಾಶ್ ಟ್ಯಾಗ್‌ನಡಿ ಸರಕರಾವನ್ನು ಟೀಕಿಸು ರೈ, ಇದೀಗ 'ಯಥಾ ರಾಜ, ತಥಾ ಪ್ರಜಾ ಅಥವಾ ಇದು ಉಲ್ಟಾನಾ?' ಎಂದು ಪ್ರಶ್ನಿಸುವ ಮೂಲಕ ಮೋದಿಯನ್ನು ಪಕ್ಷಾತೀತವಾಗಿ ಬೆಂಬಲಿಸಿದ ಸಾರ್ವಜನಿಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. 

ಮಂದಿ ಮನೆಯಿಂದ ಹೊರ ಬಂದು ತಟ್ಟೆ, ಜಾಗಟೆ ಹಾಗೂ ಚಪ್ಪಾಳೆ ತಟ್ಟುವ ಮೂಲಕ ಕೊರೋನಾ ಯುದ್ಧದ ವಿರುದ್ಧ ಹೋರಾಡುವ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಇದು ಇಷ್ಟೇ ನಡೆದಿದ್ದರೂ ಒಂದು ಅರ್ಥವಿರುತ್ತಿತು ಆದರೆ ಜನರು ಗುಂಪಿನಲ್ಲಿ ಸೇರಿಕೊಂಡು, ಇಡಿ ದೇಶದಲ್ಲೇ ಕೊರೋನಾ ವೈರಸ್ ಮಾಯವಾದ ರೀತಿಯಲ್ಲಿ ಪರೇಡ್ ಮಾಡಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋಗೆ ಪ್ರಶಾಕ್ ರೈ ರಿಯಾಕ್ಟ್‌ ಮಾಡಿದ್ದಾರೆ.

ಈಗಾಗಲೇ ಕರ್ನಾಟಕ ಸರಕಾರ ವೈರಸ್ ಅನ್ನು ಹೊಡೆದೋಡಿಸಲು ಕರ್ಫ್ಯೂ ಜಾರಿಗೊಳಿಸಿದೆ. ಆದರೂ ಅರ್ಥ ಮಾಡಿಕೊಳ್ಳದವರು ಅಲ್ಲಲ್ಲಿ ಗುಂಪಾಗಿ ಸೇರುತ್ತಿದ್ದಾರೆ. ಶಾಪಿಂಗ್ ಮಾಡುತ್ತಿದ್ದಾರೆ. ಕೇವಲ ಭಾನುವಾರಕ್ಕೆ ಮಾತ್ರ ಸೀಮಿತವಾಗಿದ್ದ ಜನತಾ ಕರ್ಫ್ಯೂ ಇನ್ನೊಂದರೆಡು ವಾರಗಳ ಕಾಲ ಮುಂದುವರೆಯಬೇಕಿತ್ತು. ಅದು ಬಿಟ್ಟು ಸಾರ್ವಜನಿಕರೇ ಈ ರೀತಿ ಬೇಜವಾಬ್ದಾರಿಯುತ ವರ್ತನೆ ತೋರುತ್ತಿರುವುದು ದುರಾದೃಷ್ಟ. 

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!