ಬಾಲಿವುಡ್ ಕ್ವೀನ್ ಜಾಕ್ವೆಲಿನ್ ಫರ್ನಾಂಡಿಸ್ ಬರ್ತ್ ಡೇಗೆ ಉಡುಗೊರೆ ಹರಿದು ಬಂದಿದೆ. ಬರೀ ಜಾಕ್ವೆಲಿನ್ ಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೆ ಐಫೋನ್ ಗಿಫ್ಟ್ ಸಿಕ್ಕಿದೆ. ಈ ಎಲ್ಲ ಉಡುಗೊರೆ ನೀಡಿದ್ದು ಜೈಲಿನಲ್ಲಿರುವ ಕೈದಿ ಅಂದ್ರೆ ನೀವು ನಂಬ್ಲೇಬೇಕು.
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Bollywood actress Jacqueline Fernandez) ಆಗಸ್ಟ್ 11ರಂದು 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಏತನ್ಮಧ್ಯೆ ಜಾಕ್ವೆಲಿನ್ ಮಾಜಿ ಪ್ರೇಮಿ ಮತ್ತು ಕುಖ್ಯಾತ ವಂಚಕ ಸುಕೇಶ್ ಚಂದ್ರಶೇಖರ್ (Sukhesh Chandrasekhar) ಮತ್ತೆ ಸುದ್ದಿಗೆ ಬಂದಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟುಹಬ್ಬದ ಸಂದರ್ಭದಲ್ಲಿ ಸುಕೇಶ್ ಚಂದ್ರಶೇಖರ್, ಪ್ರೀತಿಯ ಮಳೆಗೈದಿದ್ದಾರೆ. ಉಡುಗೊರೆಗಳ ಮಹಾಪೂರವೇ ಜಾಕ್ವೆಲಿನ್ ಮನೆಗೆ ಬಂದಿದೆ. ನಟಿಯ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸೋದಾಗಿ ಭರವಸೆ ನೀಡಿದ್ದ ಸುಕೇಶ್ ಚಂದ್ರಶೇಖರ್ ಅದ್ರಂತೆ ನಡೆದುಕೊಂಡಿದ್ದಾರೆ. ಅಷ್ಟಕ್ಕೂ ಸುಕೇಶ್ ಇರೋದು ಜೈಲಿನಲ್ಲಿ. ಕಂಬಿ ಹಿಂದೆ ಸೇರಿದ್ರೂ ಸುಕೇಶ್ ಚಂದ್ರಶೇಖರ್, ಹಣ, ಐಷಾರಾಮಿಗೆ ಕಡಿಮೆ ಆಗಿಲ್ಲ.
ಸುಕೇಶ್ ಜಾಕ್ವೆಲಿನ್‌ಗೆ ಬೋಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದಕ್ಕೆ ಲೇಡಿ ಜಾಕ್ವೆಲಿನ್ ಎಂದು ಹೆಸರಿಡಲಾಗಿದೆ. ಜಾಕ್ವೆಲಿನ್ ಹುಟ್ಟುಹಬ್ಬದಂದು ನಟಿಗೆ ಸುಕೇಶ್ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ, ಐಫೋನ್ 15 ಪ್ರೊ ಗೆದ್ದ 100 ಜಾಕ್ವೆಲಿನ್ ಅಭಿಮಾನಿಗಳ ಹೆಸರನ್ನು ಪ್ರಕಟಿಸಿದ್ದಾರೆ. ಸುಕೇಶ್ ಚಂದ್ರಶೇಖರ್, ತಮ್ಮ ಪ್ರಿಯತಮೆಯ ಬರ್ತ್ ಡೇಯನ್ನು ಇಷ್ಟು ಅದ್ಧೂರಿಯಾಗಿ ಆಚರಿಸುತ್ತಿದ್ದರೂ ಅವರು ಜಾಕ್ವೆಲಿನ್ ಜೊತೆಗಿಲ್ಲ. ಸುಕೇಶ್ ಸದ್ಯ ಜೈಲಿನಲ್ಲಿದ್ದಾರೆ. 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ 2015ರಲ್ಲಿಯೇ ಜೈಲು ಸೇರಿದ್ದಾರೆ. ಜೈಲಿನಲ್ಲಿದ್ರೂ ಸುಕೇಶ್ ಪ್ರಸಿದ್ಧಿ ಕಡಿಮೆ ಏನಾಗಿಲ್ಲ. ಆಗಾಗ ಜಾಕ್ವೆಲಿನ್ ಗೆ ಪತ್ರ ಬರೆಯುವ ಸುಕೇಶ್, ಸಾಕಷ್ಟು ಸಮಾಜ ಸೇವೆ ಕೂಡ ಮಾಡ್ತಿದ್ದಾರೆ.
ಸುಕೇಶ್ ಚಂದ್ರಶೇಖರ್ ಯಾರು? : 34 ವರ್ಷದ ಮಾಸ್ಟರ್ ಮೈಂಡ್ ಸುಕೇಶ್ ಚಂದ್ರಶೇಖರ್ ಬೆಂಗಳೂರು ನಿವಾಸಿ. ಅವರು ನಟಿ ಲೀನಾ ಮರಿಯಾ ಪಾಲ್ ಅವರನ್ನು ವಿವಾಹವಾಗಿದ್ರು. ಸುಕೇಶ್ ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ ಓದಿದರು ಮತ್ತು ಮಧುರೆ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಶೀಘ್ರದಲ್ಲೇ ಶ್ರೀಮಂತರಾಗಲು ಬಯಸಿದ್ದ ವ್ಯಕ್ತಿ ಸುಕೇಶ್. 17 ನೇ ವಯಸ್ಸಿನಲ್ಲಿ ವಂಚನೆ ಪ್ರಕರಣದಲ್ಲಿ ಮೊದಲ ಬಾರಿಗೆ ಬಂಧಿತರಾಗಿದ್ದರು.
ಥೂ ನಾಚಿಕೆ ಆಗಲ್ವಾ? ನಿಮ್ಮಂಥವರನ್ನು ಹಿಡಿದು ಥಳಿಸಬೇಕು... ಶಾರುಖ್,ಅಜಯ್ ವಿರುದ್ಧ ಗುಡುಗಿದ 'ಶಕ್ತಿಮಾನ್'
ಮೂಲಗಳ ಪ್ರಕಾರ, ಸುಕೇಶ್ ಒಮ್ಮೆ ಬೆಂಗಳೂರು ಪೊಲೀಸ್ ಕಮಿಷನರ್ ಸಹಿಯನ್ನು ನಕಲಿ ಮಾಡಿದ್ದರು. ಆ ಸಮಯದಲ್ಲಿ ಸುಖೇಶ್ ಅಪ್ರಾಪ್ತರಾಗಿದ್ದರು. ಹಲವು ವರ್ಷಗಳಿಂದ ಸುಕೇಶ್ ಮಾಜಿ ಮುಖ್ಯಮಂತ್ರಿಯ ಮೊಮ್ಮಗನಂತೆ ನಟಿಸಿ ನೂರಾರು ಜನರಿಗೆ ವಂಚನೆ ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದರು. ಬಳಿಕ ಕಿಂಗ್ ಇನ್ವೆಸ್ಟ್‌ಮೆಂಟ್ ಎಂಬ ಕಂಪನಿ ಆರಂಭಿಸಿ ಹೂಡಿಕೆದಾರರಿಗೆ 2000 ಕೋಟಿ ರೂಪಾಯಿ ವಂಚಿಸಿದ್ದರು. ಒಂದಲ್ಲ ಎರಡಲ್ಲ ಅನೇಕ ಪ್ರಕರಣ ಸುಖೇಶ್ ಮೇಲಿದೆ. ಜೈಲಿನಲ್ಲಿ ಅಧಿಕಾರಿಗಳ ಜೊತೆಯೇ ಡೀಟ್ ಮಾಡಿಕೊಂಡಿದ್ದ ಸುಖೇಶ್, ಐಷಾರಾಮಿ ಜೀವನ ನಡೆಸುತ್ತಿದ್ದ.
ಭ್ರಷ್ಟಾಚಾರ ಕಾಯ್ದೆ, ಕ್ರಿಮಿನಲ್ ಪಿತೂರಿ ಮತ್ತು MCOCA ಸೇರಿದಂತೆ 18 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಎಲ್ಲಾ ಆರೋಪಗಳ ನಂತರ, ನ್ಯಾಯಾಲಯದ ಆದೇಶದ ಮೇರೆಗೆ ಸುಕೇಶ್‌ನನ್ನು ತಿಹಾರ್‌ನ ರೋಹಿಣಿ ಜೈಲಿನಿಂದ ಮಂಡೋಲಿ ಜೈಲಿಗೆ ಸ್ಥಳಾಂತರಿಸಲಾಗಿದೆ. ತಿಹಾರ್ ಜೈಲಿನಲ್ಲಿದ್ದುಕೊಂಡೇ 200 ಕೋಟಿ ರೂಪಾಯಿ ವಂಚಿಸಿದ್ದಲ್ಲದೆ, ಬಾಲಿವುಡ್ ನಟಿಯರಾದ ಜಾಕ್ವೆಲಿನ್ ಮತ್ತು ನೋರಾ ಜತೆಗಿನ ಆತ್ಮೀಯನಾಗಿದ್ದ. ಜಾಕ್ವೆಲಿನ್ ಫರ್ನಾಂಡಿಸ್ ಗೆ ಸುಕೇಶ್ ಕೋಟ್ಯಂತರ ರೂಪಾಯಿ ಗಿಫ್ಟ್ ನೀಡಿದ್ದರು. ಇವುಗಳಲ್ಲಿ 52 ಲಕ್ಷ ರೂಪಾಯಿ ಮೌಲ್ಯದ ಅರೇಬಿಯನ್ ಕುದುರೆ, ತಲಾ 9 ಲಕ್ಷ ರೂಪಾಯಿ ಮೌಲ್ಯದ 3 ಪರ್ಷಿಯನ್ ಬೆಕ್ಕುಗಳು, ಡೈಮಂಡ್ ಸೆಟ್‌ಗಳಂತಹ ದುಬಾರಿ ಉಡುಗೊರೆಗಳು ಸೇರಿವೆ. ತಿಹಾರ್ ಜೈಲಿನಲ್ಲಿದ್ದಾಗಲೂ ಸುಕೇಶ್ ಜಾಕ್ವೆಲಿನ್ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದರು.
ಏನೇ ಆಗಲಿ ಜೊತೆಯಾಗಿರಿ ಸಾಕು; ಗಂಡನಿಲ್ಲದೆ ನಾನಿಲ್ಲ ಎಂದ ಕವಿತಾ ಗೌಡ ಪೋಸ್ಟ್‌ಗೆ ನೆಟ್ಟಿಗರ ಕಾಮೆಂಟ್!
ವಯನಾಡ್ ಭೂಕುಸಿತ ನಿರಾಶ್ರೀತರಿಗೆ ಹಣ ಸಹಾಯ : ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು 15 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡುವುದಾಗಿ ಸುಖೇಶ್ ವಾಗ್ದಾನ ಮಾಡಿದ್ದಾರೆ. ದುರಂತದಿಂದ ಸಂತ್ರಸ್ತರಾದವರಿಗೆ 300 ಮನೆಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.