ಸೌತ್ ನಟಿ ಸಮಂತಾ ಅಕ್ಕಿನೇನಿ ಶೆಫ್ ಆಗಿದ್ದಾರೆ. ನಟ ರಾಮಚರಣ್ ವೈಫ್ ಉಪಾಸನಾ ಜೊತೆ ಅಡುಗೆ ಮಾಡಿದ್ದಾರೆ.
ಸಮಂತಾ ಇತ್ತೀಚೆಗಷ್ಟೇ ಉಪಾಸನಾ ಜೊತೆಗೆ ಸೇರಿಕೊಂಡು ಶೆಫ್ ಆಗಿದ್ದಾರೆ. ಸಮಂತಾ UR ಲೈಫ್‌ಗೆ ಗೆಸ್ಟ್ ಎಡಿಟರ್ ಆಗಿ ಕೆಲಸ ಮಾಡಿದ್ದು, ಅವರ ಮೊದಲ ವಿಡಿಯೋ ವೈರಲ್ ಆಗಿದೆ. ಸೌತ್ ನಟಿ ಸಮಂತಾ ಅಕ್ಕಿನೇನಿ ಶೆಫ್ ಆಗಿದ್ದಾರೆ. ನಟ ರಾಮಚರಣ್ ವೈಫ್ ಉಪಾಸನಾ ಜೊತೆ ಅಡುಗೆ ಮಾಡಿದ್ದಾರೆ.
ಸಮಂತಾ ವಿಡಿಯೋದಲ್ಲಿ ಉಪಾಸನಾ ಜೊತೆ ಸೇರಿಕೊಂಡು ತಕ್ಕಾಳಿ ಸದಂ ತಯಾರಿಸಿದ್ದಾರೆ. ಅಡುಗೆಯ ಸಾಮಾಗ್ರಿಗಳ ಬಗ್ಗೆಯೂ ವಿವರ ನೀಡಲಾಗಿದ್ದ, ಸಮಂತಾ ಮತ್ತು ಉಪಾಸನಾ ನಡುವಿನ ಕಾಂಬಿನೇಷನ್ ನಿಮ್ಮನ್ನು ವಿಡಿಯೋ ನೋಡುವಂತೆ ಮಾಡುತ್ತದೆ.
ನಮ್ಮ ಆಹಾರ ನಾವೇ ಬೆಳೆಯೋದು ಕೂಲ್ ಅಂತಾರೆ ಸಮಂತಾ: ಇಲ್ನೋಡಿ ಫೋಟೋಸ್
ಲಾಕ್‌ಡೌನ್‌ನಲ್ಲಿ ಟೆರೇಸ್ ಗಾರ್ಡ್‌ನಿಂಗ್ ಮಾಡುತ್ತಿರುವ ಸಮಂತಾ ಸೊಪ್ಪು ತರಕಾರಿ, ಕ್ಯಾರೆಟ್ ಸೇರಿ ವಿವಿಧ ತರಕಾರಿ ಬೆಳೆದು ಫಸಲು ಕೊಯ್ದಿದ್ದಾರೆ. ಇದೀಗ ಮಾಡಿರೋ ಹೊಸ ರೆಸಿಪಿ ಜೊತೆ ಸಾದಾ ರೈಸ್ ಕಾಂಬಿನೇಷನ್ ತೋರ್ಸಿದ್ದಾರೆ ನಟಿ.
ಮನೆ ತಾರಸಿಯಲ್ಲಿ ಬಹಳಷ್ಟು ಬಗೆಯ ತರಕಾರಿ ಬೆಳೆಸಿರುವ ಸಮಂತಾ ಲಾಕ್‌ಡೌನ್ ಸಮಯದಲ್ಲಿ ಈ ಹವ್ಯಾಸ ಆರಂಭಿಸಿ ತಮ್ಮ ಫ್ಯಾನ್ಸ್‌ಗೂ ಇದನ್ನು ಸೂಚಿಸಿದ್ದಾರೆ. ಇನ್ನು ಫ್ಯಾಷನ್ ಐಕನ್ ಆಗಿರೋ ನಟಿ ಹೊಸ ಫ್ಯಾಷನ್ ಬ್ರ್ಯಾಂಡ್ ಸಾಕಿ ಕೂಡಾ ಆರಂಭಿಸಿದ್ದಾರೆ.