
ವಿವಾದಿತ ಇಂಡಿಯನ್ ಸಿನಿಮಾ ಆಕ್ಟರ್ (Cinema actors) ಹೆಸರು ಪಟ್ಟಿ ಮಾಡಿದರೆ ಮೊದಲ ಸಾಲಲ್ಲಿ ಕಾಣಿಸಿಕೊಳ್ಳುವ ಹೆಸರು ಪೂನಂ ಪಾಂಡೆ (Poonam Pandey) ಯದ್ದು. ಈಕೆಗೆ ಬಾಲಿವುಡ್‌ನಲ್ಲಿ (Bollywood) ಕಾಂಟ್ರವರ್ಸಿಯಲ್ ಕ್ವೀನ್ (Controversy) ಅಂತಲೇ ಕರೆಯುತ್ತಾರೆ. ಸದ್ಯ ಈಕೆ ಕಂಗನಾ ರಾನಾವತ್ (Kangana Ranavath) ನಡೆಸಿಕೊಡುವ ರಿಯಾಲಿಟಿ ಶೋ (Reality show) 'ಲಾಕ್‌ಅಪ್'ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಇದೊಂದು ಕಾಮಿಡಿ ಮತ್ತು ಹಾರರ್ ಜೊತೆಯಾಗಿ ಇರುವ ರಿಯಾಲಿಟಿ ಶೋ. ಅದೇನು ಎಂದರೆ ಹಲವು ಸೆಲೆಬ್ರಿಟಿಗಳನ್ನು ಇಲ್ಲಿ ಕೈಕೋಳ ಹಾಕಿ ಒಂದು ಮನೆಯಲ್ಲಿ ಬಿಟ್ಟುಬಿಡುತ್ತಾರೆ. ಅವರು ಆ ಟಾಸ್ಕ್‌ನಲ್ಲಿ ಹೇಗೆ ಆಟವಾಡುತ್ತಾರೆ, ಹೇಗೆ ಬಚಾವಾಗುತ್ತಾರೆ ಎಂಬುದು ಆಟದ ಮರ್ಮ.
ಪೋರ್ನ್ ಚಿತ್ರೀಕರಿಸುವಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದ ನಟಿ?
ಅದಿರಲಿ. ಈ ಶೋಗೆ ಎಂಟರ್ ಆಗುವ ಸಂದರ್ಭದಲ್ಲಿ ಶೋದ ಆಂಕರ್ ಸಿದ್ಧಾರ್ಥ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಪೂನಂ ಪಾಂಡೆ ನೀಡಿದ ಉತ್ತರಗಳು ಹುಬ್ಬೇರಿಸುವಂತಿವೆ. ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರ ಗಂಡ ರಾಜ್ ಕುಂದ್ರಾ (Raj Kundra) ಅವರು ಪೋರ್ನೋಗ್ರಫಿ ಕೇಸಿನಲ್ಲಿ ಸಿಕ್ಕಿಬಿದ್ದರಷ್ಟೆ. ರಾಜ್ ಕುಂದ್ರಾ ಸೃಷ್ಟಿ ಮಾಡುತ್ತಿದ್ದ ಪೋರ್ನೋ ಕಂಟೆಂಟ್‌ನಲ್ಲಿ ಪೂನಂ ಪಾಂಡೆ ಕೂಡ ಒಬ್ಬಳಾಗಿದ್ದಳು. ಸದ್ಯ ಕೆಲವು ವರ್ಷಗಳಿಂದ ಮೇನ್‌ಸ್ಟ್ರೀನ್ ಹಿಂದಿ ಫಿಲಂಗಳಲ್ಲಿ ಕೆಲಸ ಇಲ್ಲದಿದ್ದರಿಂದ, ರಾಜ್ ಕುಂದ್ರಾ ನಡೆಸುತ್ತಿದ್ದ ಪೋರ್ನೋ ಇಂಡಸ್ಟ್ರಿಗೆ ಪೂನಂ ಸೇರಿಕೊಂಡಿದ್ದಳು. ಯಾರೋ ಹೇಳಿದ ಮಾತು ಕೇಳಿ, ಕೈತುಂಬ ಕಾಸು ಸಿಗುವುದು ಎಂದು ಭಾವಿಸಿ ಏನೇನೋ ಮಾಡಿಕೊಂಡೆ. ಕೈಯಲ್ಲಿ ಕೆಲಸ ಇಲ್ಲದಿದ್ದಾಗ ಯಾರೋ ಏನೋ ಹೇಳಿದರೆ ಅದನ್ನು ಪಾಲಿಸಿಬಿಡಲು ಮುಂದಾಗುತ್ತೇವೆ. ನಾಲ್ಕು ವರ್ಷಗಳ ಕಾಲ ಚಿತ್ರಹಿಂಸೆ ಅನುಭವಿಸಿದೆ ಎಂದು ಹೇಳಿದ್ದಾಳೆ ಈಕೆ. ನಮ್ಮನ್ನು ಯಾರೂ ಇಂಥ ಸಂದರ್ಭದಲ್ಲಿ ಕಾಪಾಡಲು ಬರುವುದಿಲ್ಲ. ಹದಿನೈದು ನಿಮಿಷಗಳ ಜನಪ್ರಿಯತೆಯಿಂದ ಬದುಕಿನಲ್ಲಿ ನಮಗೆ ಏನೇನೂ ಸಿಗೋಲ್ಲ. ಆದರೆ ಪರಿಶ್ರಮಪಟ್ಟು ಕೆಲಸ ಮಾಡುವುದರಂದ ಮಾತ್ರವೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬುದು ಈಗ ಅರ್ಥವಾಗಿದೆ ಎಂದಿದ್ದಾಳೆ ಆಕೆ.
ಈ ಕೇಸಿನಲ್ಲಿ ಪೂನಂ ಪಾಂಡೆಯ ಹೆಸರೂ ತೇಲಿಬಂದು, ಆಕೆಯನ್ನೂ ತನಿಖಾಧಿಕಾರಿಗಳು ವಿಚಾರಿಸಿಕೊಂಡಿದ್ದರು. ಆಗ, ರಾಜ್ ಕುಂದ್ರಾ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾಗಿ ಪೂನಂ ಹೇಳಿಕೊಂಡಿದ್ದಳು. ಹೇಗೆ ಬ್ಲ್ಯಾಕ್‌ಮೇಲ್ ಮಾಡಿದ? ಆಕೆಯ ನಗ್ನ ಚಿತ್ರಗಳು ಅವನ ಬಳಿ ಇದ್ದವೇ ಅಥವಾ ಆಕೆಯ ರಾಜ್ ಅಥವಾ ಇನ್ಯಾರದೋ ಜೊತೆ ಆಕ್ಷೇಪಾರ್ಹ ಭಂಗಿಯಲ್ಲಿ ಇದ್ದುದನ್ನು ರಾಜ್ ಚಿತ್ರೀಕರಿಸಿಕೊಂಡಿದ್ದನೇ? ಇಲ್ಲವಾದರೆ ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಹೇಗೆ ಸಾಧ್ಯ? ಈ ಪ್ರಶ್ನೆಗೆ ಆಕೆ ಉತ್ತರಿಸಿಲ್ಲ. ಆದರೆ ರಾಜ್ ಮೇಲೆ ಆರಪವನ್ನಂತೂ ಹೊರಿಸಿದ್ದಾಳೆ. ಜೊತೆಗೆ, ಈ ಪ್ರಕರಣದಲ್ಲಿ ಪೂನಂಗೆ ರಾಜ್‌ನಿಂದ ತೊಂದರೆಯಾಗಿದೆ ಎಂದು ಗೊತ್ತಾದ ಬಳಿಕ ಶಿಲ್ಪಾ ಶೆಟ್ಟಿ ಬಂದು ಆಕೆಯನ್ನು ಭೇಟಿ ಮಾಡಿದ್ದಳೇ ಎಂದು ಕೇಳಲಾದ ಪ್ರಶ್ನೆಗೆ ಪೂನಂ, ಇಲ್ಲ ಎಂದು ಉತ್ತರಿಸಿದ್ದಾಳೆ. ಆದರೆ ಒಬ್ಬಾಕೆ ಗೃಹಿಣಿಯಾಗಿ, ಎರಡು ಮಕ್ಕಳ ತಾಯಿಯಾಗಿ, ಇಂಥ ಪ್ರಕರಣದಲ್ಲಿ ಗಂಡ ಸಿಕ್ಕಿಬಿದ್ದಾಗ ಆಕೆ ಯಾವ ಪರಿ ಮುಜುಗರ ಅನುಭವಿಸಿರಬಹುದು ಎಂಬುದು ನನಗೆ ಅಂದಾಜಾಗುತ್ತದೆ. ಯಾಕೆಂದರೆ ನಾನೂ ಒಬ್ಬ ಗೃಹಿಣಿ ಎಂದು ಪೂನಂ ಉತ್ತರ ಕೊಟ್ಟಿದ್ದಾಳೆ. ಕೆಲವು ಸಂದರ್ಭಗಳಲ್ಲಿ ನಾವು ನಮ್ಮ ಹೃದಯದಲ್ಲಿ ಇರುವುದನ್ನು ಹಾಗೇ ಹೇಳಿಬಿಡಲು ಸಾಧ್ಯವಾಗುವುದಿಲ್ಲ. ಸೆಲೆಬ್ರಿಟಿಗಳಿಗೆ ಈ ಬಿಕ್ಕಟ್ಟು ಇನ್ನೂ ಹೆಚ್ಚಿರುತ್ತದೆ. ಹೀಗಾಗಿ ಜನಸಾಮಾನ್ಯರು ನಮ್ಮಂಥವರನ್ನು ಜಡ್ಜ್ ಮಾಡುವ ಮುನ್ನ ಇದನ್ನೆಲ್ಲ ಗಮನಿಸಬೇಕು ಎಂದು ಆಕೆ ಹೇಳುತ್ತಾಳೆ.
ಕೊನೇ ಪಕ್ಷ, ಇದರಿಂದ ನಾನು ಪಾಠ ಕಲಿತೆ. ಕೆಲವು ದಿನ ಕೆಲಸವಿಲ್ಲದೇ ಮನೆಯಲ್ಲಿ ಕೂತಿದ್ದೆ. ಆದರೆ ಈಗ ಕೆಲಸಗಳು ಸಿಗುತ್ತಿವೆ. ನಾನು ಅದೃಷ್ಟವಂತೆ ಎಂದಿದ್ದಾಳೆ ಪೂನಂ. ಈ ರಿಯಾಲಿಟಿ ಶೋದಲ್ಲಿ ಕೈಕೋಳ ಹಾಕಿಸಿಕೊಂಡಿರುವ ಕಾಂಟ್ರವರ್ಷಿಯಲ್ ಸೆಲೆಬ್ರಿಟಿಗಳಲ್ಲಿ ಪೂನಂ ಕೂಡ ಒಬ್ಬಳು, ಅವರಿಗೂ ವಿವಾದಿತ ಪ್ರತಿಭೆಗಳೇ ಬೇಕು ಎನ್ನೋಣ.
ಡಿನ್ನರ್‌ಗೆ ಜೊತೆಯಾದ ಬಾಲಿವುಡ್‌ನ ಸ್ಟಾರ್‌ಕಿಡ್ಸ್ ಅನನ್ಯಾ,ಸುಹಾನಾ, ಶನಯಾ,ಖುಷಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.