
ಯಂಗ್ ಹೀರೋಯಿನ್ ಗೆ ಕಾಂಪಿಟೇಶನ್ ನೀಡೋ ಬಾಲಿವುಡ್ ಹಿರಿಯ ನಟಿ ಭಾಗ್ಯಶ್ರೀ (Bollywood Senior actress Bhagyashree ) 56ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 56ನೇ ವಯಸ್ಸಿನಲ್ಲೂ 25ರ ಯುವತಿಯಂತೆ ಕಾಣುವ ಭಾಗ್ಯಶ್ರೀ ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡ್ತಾರೆ. ಭಾಗ್ಯಶ್ರೀ ಬರೀ ಸೌಂದರ್ಯಕ್ಕೆ ಮಾತ್ರವಲ್ಲ ಸಂಬಂಧಕ್ಕೂ ಬೆಲೆ ನೀಡುವ ನಟಿ. ಈಗಿನ ದಿನಗಳಲ್ಲಿ ವಿಚ್ಛೇದನ ಹೆಚ್ಚಾಗ್ತಿದೆ. ಬಾಲಿವುಡ್ ನಲ್ಲಿ ಒಬ್ಬರಾದ್ಮೇಲೆ ಒಬ್ಬರಂತೆ ವಿಚ್ಛೇದನ ಪಡೆಯುತ್ತಿದ್ದಾರೆ. ಈ ಮಧ್ಯೆ 35 ವರ್ಷ ಯಶಸ್ವಿ ಸಂಸಾರ ಮಾಡಿದ ನಟಿ ಭಾಗ್ಯಶ್ರೀ, ತಮ್ಮ ಸುಖ ಸಂಸಾರದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಸಲ್ಮಾನ್ ಖಾನ್ (Salman Khan) ಜೊತೆ ಮೊದಲ ಚಿತ್ರದಲ್ಲೇ ಹಿಟ್ ಆದ ಭಾಗ್ಯಶ್ರೀ, ವೃತ್ತಿಯ ಉತ್ತುಂಗದಲ್ಲಿರುವಾಗ್ಲೇ ಮದುವೆ ನಿರ್ಧಾರ ತೆಗೆದುಕೊಂಡು ಬಾಲಿವುಡ್ ಗೆ ಗುಡ್ ಬೈ ಹೇಳಿದ್ರು. ಮನೆಯವರ ವಿರೋಧದ ಮಧ್ಯೆ ಭಾಗ್ಯಶ್ರೀ ಕೈ ಹಿಡಿದಿದ್ದು ಹಿಮಾಲಯ ದಾಸಾನಿಯವರನ್ನು. ಭಾಗ್ಯಶ್ರೀ ಜನವರಿ 19, 1989 ರಂದು ಹಿಮಾಲಯ ದಾಸಾನಿ (Himalaya Dasani) ಅವರನ್ನು ವಿವಾಹವಾಗಿದ್ದು, ಅವರಿಗೆ ಇಬ್ಬರು ಮಕ್ಕಳು. ಒಬ್ಬ ಮಗ ಮತ್ತು ಮಗಳು. ಪತಿ, ಮಕ್ಕಳ ಜೊತೆ ಖುಷಿಯಾಗಿರುವ ಭಾಗ್ಯಶ್ರೀ, ಪತಿ ಜೊತೆ ಕಳೆಯುವ ರೋಮ್ಯಾಂಟಿಕ್ ಕ್ಷಣಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಜೂ.ಎನ್‌ಟಿಆರ್‌ಗೆ ಇಷ್ಟವಾದ ಡ್ಯಾನ್ಸರ್ ಚಿರು, ಅಲ್ಲು, ರಾಮ್ ಅಲ್ಲ: ಊಹಿಸದ ಆ ಹೆಸರು ಹೇಳಿದ್ಯಾಕೆ?
ಭಾಗ್ಯಶ್ರೀ ದಾಂಪತ್ಯದ ಗುಟ್ಟೇನು?: ದಾಂಪತ್ಯದಲ್ಲಿ ರೋಮ್ಯಾನ್ಸ್ (Romance) ತುಂಬಾ ಇಂಪಾರ್ಟೆಂಟ್ ಅನ್ನೋದು ಭಾಗ್ಯಶ್ರೀ ಮಾತು. ಭಾಗ್ಯಶ್ರೀ ಅವರ ಪತಿ ಹಿಮಾಲಯ ದಾಸಾನಿ ಅವ್ರನ್ನು ತುಂಬಾ ಪ್ರೀತಿ ಮಾಡ್ತಾರೆ. ವಯಸ್ಸು ಹೆಚ್ಚಾಗ್ತಿದ್ದಂತೆ ರೋಮ್ಯಾನ್ಸ್ ಕಡಿಮೆ ಆಗುತ್ತೆ ಎನ್ನುವ ಮಾತಿದೆ. ಆದ್ರೆ ಇವ್ರಲ್ಲಿ ಅದು ಎಂದೂ ಕಡಿಮೆಯಾಗಲು ಸಾಧ್ಯವಿಲ್ಲ. ಮದುವೆ ಆದ ಆರಂಭದಲ್ಲಿ, ರಾತ್ರಿ ಮನೆಗೆ ಬರ್ತಿದ್ದ ಪತಿಗೆ ಸ್ಯಾಂಡ್ವಿಚ್ ಮಾಡ್ತಿದ್ರು ಭಾಗ್ಯಶ್ರೀ. ಹಿಮಾಲಯ ದಾಸಾನಿ ಗ್ಯಾಸ್ ಕಟ್ಟೆ ಮೇಲೆ ಕುಳಿತುಕೊಂಡು, ಭ್ಯಾಗ್ಯಶ್ರೀ ಮಾಡಿದ ತಿಂಡಿಯನ್ನು ಭಾಗ್ಯಶ್ರೀಗೆ ತಿನ್ನಿಸ್ತಾ ಇದ್ರು. ಇದೇ ನಮ್ಮ ರೋಮ್ಯಾನ್ಸ್ ಎನ್ನುವ ಭಾಗ್ಯಶ್ರೀ, ಹಿಮಾಲಯ ದಾಸಾನಿಗೆ ಫಿಸಿಕಲ್ ಅಟ್ರಾಕ್ಷನ್ ಹೆಚ್ಚು ಎಂದಿದ್ದಾರೆ. ಎಲ್ಲರ ಮುಂದೆ ಭಾಗ್ಯಾರನ್ನು ಪತಿ ಹಗ್ ಮಾಡ್ತಾರಂತೆ. ಅತ್ತೆ – ಮಾವ, ಮಕ್ಕಳ ಮುಂದೆ ಇದು ಮುಜುಗರ ತರಿಸಿದ್ರೂ, ಅನಿವಾರ್ಯ, ಪತಿಯನ್ನು ಕಂಟ್ರೋಲ್ ಮಾಡೋದು ಕಷ್ಟ ಎಂದಿದ್ದಾರೆ ಭಾಗ್ಯಶ್ರೀ.
ಭಾಗ್ಯಶ್ರೀ ಹಾಗೂ ಹಿಮಾಲಯ ದಾಸಾನಿ ಮದುವೆಯಾಗಿ 35 ವರ್ಷ ಕಳೆದಿದೆ, ತಿಂಗಳಿಗೊಮ್ಮೆ ಡೇಟಿಂಗ್ ಹೋಗ್ತಾರೆ ಇವ್ರು. ಒಂದು ರಾತ್ರಿಯನ್ನು ತಮಗಾಗಿ ಮೀಸಲಿಡುವ ಜೋಡಿ, ಡೇಟಿಂಗ್ ಪ್ಲೇಸ್ ಗೆ ಪ್ರತ್ಯೇಕವಾಗಿ ಹೋಗ್ತಾರೆ. ಭಾಗ್ಯಶ್ರೀ ಯಾವ ಡ್ರೆಸ್ ಧರಿಸಿದ್ದಾರೆ ಅನ್ನೋದು ಹಿಮಾಲಯ ದಾಸಾನಿಗೆ ತಿಳಿದಿರೋದಿಲ್ಲ. ದುಬಾರಿ ಹೊಟೇಲ್ ಗೆ ಡೇಟಿಂಗ್ ಹೋಗ್ಬೇಕು ಅನ್ನೋದಿಲ್ಲ. ಬೀಚ್ ನಲ್ಲಿ ವಾಕ್ ಇರಲಿ ಇಲ್ಲ ಮನೆ ಗಾರ್ಡನ್ ನಲ್ಲಿ ಡಿನ್ನರ್ ಇರಲಿ, ಯಾವುದಾದ್ರೂ ಓಕೆ ಎನ್ನುವ ಭಾಗ್ಯಶ್ರೀ ಡೇಟ್ ಗಾಗಿ ಸ್ಪೇಷಲ್ ಆಗಿ ಡ್ರೆಸ್ ಅಪ್ ಆಗ್ತಾರಂತೆ.
ಕಿಚ್ಚ ಸುದೀಪ ಸಿನಿಮಾದಲ್ಲಿ ನಟಿಸಿ ಪ್ರಸಿದ್ಧಿಯಾದ ನಾನಿಯ ಮೊದಲ ಸಂಬಳ ಒಂದು ಊಟಕ್ಕೂ
ಈ ಕಾರಣಕ್ಕೆ ಶುರುವಾಗಿತ್ತು ಲೆಟರ್ ಬರೆಯೋ ಅಭ್ಯಾಸ : ಮೊದಲ ಪ್ರೆಗ್ನೆನ್ಸಿ ಟೈಂನಲ್ಲಿ ಭಾಗ್ಯಶ್ರೀ ಪತಿಯನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದರಂತೆ. ಆ ಟೈಂನಲ್ಲಿ ಹೊಸ ಬ್ಯುಸಿನೆಸ್ ಗೆ ಹಿಮಾಲಯ ದಾಸಾನಿ ಮದ್ರಾಸ್ ನಲ್ಲಿದ್ರು. ಒಂದು ದಿನ ಫೋನ್ ಮಾಡಿದಾಗ ಭಾಗ್ಯಶ್ರೀ, ಐ ಮಿಸ್ ಯು ಎಂದಿದ್ದರು. ಇದನ್ನು ಕೇಳಿಸಿಕೊಂಡ ಅವರ ಮಾವ, ಮದ್ರಾಸ್ ನಲ್ಲಿರುವ ಮಗನಿಗೆ ಕೆಲಸ ಮಾಡೋದು ಕಷ್ಟವಾಗುತ್ತೆ. ಹೀಗೆಲ್ಲ ಹೇಳ್ಬಾರದು ಅಂದಿದ್ದರಂತೆ. ಅಲ್ಲಿಂದ ಪ್ರತಿ ದಿನ ಪತಿಗೆ ಲೆಟರ್ ಬರೆಯುವ ಅಭ್ಯಾಸ ಮಾಡ್ಕೊಂಡಿದ್ದರಂತೆ ಭಾಗ್ಯಶ್ರೀ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.