ಕೊನೆಗೂ ರಾಹುಲ್ ವೈದ್ಯನ ಅನ್‌ಬ್ಲಾಕ್ ಮಾಡಿದ ಕೊಹ್ಲಿ, ಉಲ್ಟಾ ಹೊಡೆದ ಗಾಯಕ

Published : May 17, 2025, 11:44 PM IST
ಕೊನೆಗೂ ರಾಹುಲ್ ವೈದ್ಯನ ಅನ್‌ಬ್ಲಾಕ್ ಮಾಡಿದ ಕೊಹ್ಲಿ, ಉಲ್ಟಾ ಹೊಡೆದ ಗಾಯಕ

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಗಾಯಕ ರಾಹುಲ್ ವೈದ್ಯನನ್ನು ಕೊಹ್ಲಿ ಬ್ಲಾಕ್ ಮಾಡಿದ್ದರು. ಬಳಿಕ ಭಾರಿ ಯುದ್ಧವೇ ನಡೆದಿತ್ತು. ಕೊಹ್ಲಿ ವಿರುದ್ದ ನಾಲಗೆ ಹರಿಬಿಟ್ಟಿದ್ದ ಗಾಯಕ ಹಲವು ಬಾರಿ ಅನ್‌ಬ್ಲಾಕ್ ಮಾಡುವಂತೆ ಮನವಿ, ಟ್ರೋಲ್ ಮಾಡಿದ್ದರು. ಇದೀಗ ವಿರಾಟ್ ಕೊಹ್ಲಿ ಕೊನೆಗೂ ರಾಹುಲ್ ವೈದ್ಯನ ಅನ್‌ಬ್ಲಾಕ್ ಮಾಡಿದ್ದಾರೆ. ಇದೀಗ ಗಾಯಕ ಉಲ್ಟಾ ಹೊಡೆದಿದ್ದಾರೆ.

ಬೆಂಗಳೂರು(ಮೇ.17) ವಿರಾಟ್ ಕೊಹ್ಲಿ ಹಾಗೂ ಗಾಯಕ ರಾಹುಲ್ ವೈದ್ಯ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕಳೆದ ಹಲವು ದಿನಗಳಿಂದ ವಾರ್ ನಡೆಯುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ರಾಹುಲ್ ವೈದ್ಯನ, ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಬ್ಲಾಕ್ ಮಾಡಿದ್ದರು. ಇದು ರಾಹುಲ್ ವೈದ್ಯನ ಕೆರಳಿಸಿತ್ತು. ತನ್ನನ್ನು ಬ್ಲಾಕ್ ಮಾಡಿದ ಕೊಹ್ಲಿ ವಿರುದ್ದ ರಾಹುಲ್ ವೈದ್ಯ ಉದ್ದುದ್ದ ನಾಲಗೆ ಹರಿಬಿಟ್ಟಿದ್ದರು. ಕೊಹ್ಲಿಯನ್ನು ಟ್ರೋಲ್ ಮಾಡಿದ್ದರು. ಹಲವು ಬಾರಿ ಕೊಹ್ಲಿಯನ್ನು ಅಣಕಿಸಲಾಗಿತ್ತು. ಇದರ ನಡುವೆ ಅನ್‌ಬ್ಲಾಕ್ ಮಾಡುವಂತೆಯೂ ರಾಹುಲ್ ವೈದ್ಯ ಸೂಚನೆ, ಮನವಿ, ಟ್ರೋಲ್ ಕೂಡ ಮಾಡಿದ್ದರು.  ಈ ಎಲ್ಲಾ ಬೆಳವಣಿಗೆ ಬಳಿಕ ಕೊನೆಗೂ ವಿರಾಟ್ ಕೊಹ್ಲಿ , ಗಾಯಕ ರಾಹುಲ್ ವೈದ್ಯನ ಅನ್‌ಬ್ಲಾಕ್ ಮಾಡಿದ್ದಾರೆ. ಕೊಹ್ಲಿ ಅನ್‌ಬ್ಲಾಕ್ ಮಾಡುತ್ತಿದ್ದಂತೆ  ರಾಹುಲ್ ವೈದ್ಯ ವರಸೆ ಬದಲಿಸಿದ್ದಾರೆ. ಕೊಹ್ಲಿ ದೇಶದ ಹೆಮ್ಮೆ ಎಂದು ಬಣ್ಣಿಸಿದ್ದಾರೆ.

ಕೊಹ್ಲಿಗೆ ಧನ್ಯವಾದ ತಿಳಿಸಿದ ರಾಹುಲ್ ವೈದ್ಯ
ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ವೈದ್ಯ ಅನ್‌ಬ್ಲಾಕ್ ಮಾಡುತ್ತಿದ್ದಂತೆ ಇನ್‌ಸ್ಟಾಗ್ರಾಂ ಮೂಲಕ ರಾಹುಲ್ ವೈದ್ಯ ಸಂತಸ ಹಂಚಿಕೊಂಡಿದ್ದಾರೆ. ನನ್ನನ್ನು ಅನ್‌ಬ್ಲಾಕ್ ಮಾಡಿದ್ದಕ್ಕೆ ವಿರಾಟ್ ಕೊಹ್ಲಿಗೆ ಧನ್ಯವಾದ. ನಾನು ನೋಡಿದ ಅತ್ಯುತ್ತಮ ಬ್ಯಾಟ್ಸಮನ್ ವಿರಾಟ್ ಕೊಹ್ಲಿ. ನೀವು ಈ ದೇಶದ ಹೆಮ್ಮೆ. ಜೈ ಹಿಂದ್. ನಿಮಗೆ ಹಾಗೂ ಕುಟುಂಬಕ್ಕೆ ದೇವರ ಆಶೀರ್ವಾದ ಸದಾ ಇರಲಿ ಎಂದು ರಾಹುಲ್ ವೈದ್ಯ ಪೋಸ್ಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ವಿರುದ್ಧ ಸತತವಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದ ರಾಹುಲ್ ವೈದ್ಯ ಇದೀಗ ಮೆತ್ತಗಾಗಿದ್ದಾರೆ. ಕೊಹ್ಲಿ ಅನ್‌ಬ್ಲಾಕ್ ಮಾಡಿದ ಬೆನ್ನಲ್ಲೇ ರಾಹುಲ್ ವೈದ್ಯನ ಮಾತುಗಳು ಬದಲಾಗಿದೆ. ಇದೀಗ ಕೊಹ್ಲಿ ಬಗ್ಗೆ ಹೆಮ್ಮೆ ಪಟ್ಟಿದ್ದಾರೆ.

ಬ್ಲಾಕ್ ಮಾಡಿದ್ದ ಗರಂ ಆಗಿದ್ದ ರಾಹುಲ್ ವೈದ್ಯ
ವಿರಾಟ್ ನನ್ನನ್ನ ಬ್ಲಾಕ್ ಮಾಡಿದ್ದಾರೆ. ಇದು ಇನ್ಸ್ಟಾಗ್ರಾಮ್ ನ ತಪ್ಪು ಅಂತ ನನಗನಿಸುತ್ತೆ. ವಿರಾಟ್ ಕೊಹ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ. ಅದು ಇನ್‌ಸ್ಟಾಗ್ರಾಮ್‌ನ ತಪ್ಪಾಗಿರಬೇಕು. ಅಲ್ಗಾರಿದಮ್ ಕೊಹ್ಲಿಗೆ 'ನಾನು ನಿನ್ನ ಪರವಾಗಿ ರಾಹುಲ್ ವೈದ್ಯರನ್ನು ಬ್ಲಾಕ್ ಮಾಡ್ತೀನಿ' ಅಂತ ಹೇಳಿರಬೇಕು ಎಂದಿದ್ದರು. ನನಗೆ ಕಾರಣ ಗೊತ್ತಿಲ್ಲ. ನಾನು ಅವರ ಅಭಿಮಾನಿ. ಆದರೆ ಅವರು ಒಳ್ಳೆಯ ಮನುಷ್ಯ ಅಂತ ನನಗನಿಸಲ್ಲ ಅಂತ ರಾಹುಲ್ ಹೇಳಿದ್ದಾರೆ.

 

 

ವಿರಾಟ್ ಕೊಹ್ಲಿ ಇತ್ತೀಚೆಗೆ ನಟಿ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಲೈಕ್ ಮಾಡಿದ್ದರಿಂದ ಸಾಮಾಜಿಕ ಮಾಧ್ಯಮ ವಿವಾದದಲ್ಲಿ ಸಿಲುಕಿಕೊಂಡರು. ಕೊಹ್ಲಿ ಇನ್‌ಸ್ಟಾಗ್ರಾಮ್ ಅಲ್ಗಾರಿದಮ್‌ನಿಂದ ಆಕಸ್ಮಿಕವಾಗಿ ಲೈಕ್ ಆಗಿರಬಹುದು ಎಂದು ಸ್ಪಷ್ಟನೆ ನೀಡಿದರು. ಆದರೆ ವಿವಾದ ಜೋರಾಗಿತ್ತು. ಈ ವಿವಾದಕ್ಕೆ ಇದೇ ರಾಹುಲ್ ವೈದ್ಯ ತುಪ್ಪ ಸುರಿದಿದ್ದರು.  ಗಾಯಕ ರಾಹುಲ್ ವೈದ್ಯ ಕೊಹ್ಲಿಯನ್ನು ಗೇಲಿ ಮಾಡಿದರು. ಒಂದು ವಿಡಿಯೋದಲ್ಲಿ, ವೈದ್ಯ ತಮಾಷೆಯಾಗಿ, ಇನ್‌ಸ್ಟಾಗ್ರಾಮ್‌ನ ಅಲ್ಗಾರಿದಮ್ ಕೂಡ ಕೊಹ್ಲಿ ತನ್ನನ್ನು ಬ್ಲಾಕ್ ಮಾಡಲು ಕಾರಣವಾಗಿರಬಹುದು ಎಂದು ಹೇಳಿದ್ದರು. 

ರಾಹುಲ್ ವೈದ್ಯ ವಿರುದ್ದ ವಿರಾಟ್ ಕೊಹ್ಲಿ ಅಭಿಮಾನಿಗಳು ಗರಂ ಆಗಿದ್ದರು. ಕಮೆಂಟ ಮೂಲಕ ರಾಹುಲ್ ವೈದ್ಯ ಜಾಡಿಸಿದ್ದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ರಾಹುಲ್ ವೈದ್ಯ, ನೀವು ನನ್ನನ್ನು ನಿಂದಿಸುವುದು ಸರಿ, ಆದರೆ ನನ್ನ ಹೆಂಡತಿ ಮತ್ತು ಸಹೋದರಿಯನ್ನು ನಿಂದಿಸುತ್ತಿದ್ದೀರಿ. ನಾನು ಹೇಳಿದ್ದೇ ಸರಿ ಇದೆ. ನೀವು ವಿರಾಟ್ ಕೊಹ್ಲಿ ಜೋಕರ್ ಅಭಿಮಾನಿಗಳು ಎಂದು ಕಮೆಂಟ್ ಮಾಡಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌