RIP John Stahl ರಿಕಾರ್ಡ್ ಕಾರ್ಸ್ಟಾರ್ಕ್ ಖ್ಯಾತಿಯ ಹಿರಿಯ ನಟ ಜಾನ್ ಸ್ಟಾಲ್ ನಿಧನ, ಕಾರಣ ನಿಗೂಢ!

By Suvarna NewsFirst Published Mar 6, 2022, 9:01 PM IST
Highlights
  • ಸ್ಕಾಟ್‌ಲೆಂಡ್ ಮೂಲದ ಖ್ಯಾತ ಹಿರಿಯ ನಟ ಜಾನ್ ನಿಧನ
  • ಗೇಮ್ಸ್ ಆಫ್ ಥ್ರೂನ್ ಸೀರಿಸ್‌ನಲ್ಲಿ ರಿಕಾರ್ಡ್ ಕಾರ್ಸ್ಟಾರ್ಕ್ ಪಾತ್ರ
  • 68 ವರ್ಷದ ಜಾನ್ ಸ್ಟಾಲ್ ಸಾವಿನ ಕಾರಣ ನಿಗೂಢ
     

ವಾಶಿಂಗ್ಟನ್(ಮಾ.06):ಗೇಮ್ಸ್ ಆಫ್ ಥ್ರೂನ್ ಚಿತ್ರದ ರಿಕಾರ್ಡ್ ಕಾಸ್ಟಾರ್ಕ್ ಪಾತ್ರದ ಮೂಲಕ ವಿಶ್ವದಲ್ಲೇ ಅತ್ಯಂತ ಜನಪ್ರಿಯವಾಗಿರುವ ಹಿರಿಯ ನಟ ಜಾನ್ ಸ್ಟಾಲ್ ನಿಧರಾಗಿದ್ದಾರೆ. 68 ವರ್ಷದ ಜಾನ್ ಸ್ಟಾಲ್ ಸಾವಿನ ಕಾರಣ ಇನ್ನೂ ಬಹಿರಂಗವಾಗಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಮೆಂಡ್ ಫಿಟ್ಜಾಲನ್ ಹೋವಾರ್ಡ್ ಎಜೆಂಟ್ ಪ್ರಕಟಣೆ ಪ್ರಕಾರ ಜಾನ್ ಸ್ಟಾಲ್ ಮಾರ್ಚ್ 2 ರಂದು ಕೊನೆಯುಸಿರೆಳಿದಿದ್ದಾರೆ. ಜಾನ್ ಸ್ಟಾಲ್ ಪುತ್ರ ಜೇನ್ ಪೆಟನ್ ಹಾಗೂ ಪತ್ನಿಯನ್ನು ಅಗಲಿದ್ದಾರೆ. 1982ರಿಂದ ಸ್ಕಾಟೀಶನ್ ಸೋಪ್ ಒಪೇರಾ ಮೂಲಕ ನಾಟದಲ್ಲಿ ಸಕ್ರಿಯವಾಗಿದ್ದ ಜಾನ್ ಸ್ಟಾಲ್ ಜನಪ್ರಿಯ ರಂಗಭೂಮಿ ಕಲಾವದಿರಾಗಿ ಗುರುತಿಸಿಕೊಂಡಿದ್ದರು.

Latest Videos

HM Mahesh Passed Away: ಸಂಗೀತಾ ಕ್ಯಾಸೆಟ್‌ ಮಾಂತ್ರಿಕ ಎಚ್‌.ಎಂ. ಮಹೇಶ್‌ ಇನ್ನಿಲ್ಲ

1975ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಜಾನ್ ಸ್ಟಾಲ್, 1979ರಲ್ಲಿ ಎ ಸೆನ್ಸ್ ಆಫ್ ಫ್ರೀಡಂ ಚಿತ್ರದ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದ್ದರು. 8ಕ್ಕೂ ಸಿನಿಮಾದಲ್ಲಿ ನಟಿಸಿದ್ದಾರೆ. ಜಾನ್ ಸ್ಟಾಲ್ ವಿಶ್ವದಲ್ಲೇ ಜನಪ್ರಿಯವಾಗಿರುವುದು ಗೇಮ್ಸ್ ಆಫ್ ಥ್ರೋನ್ ಟಿವಿ ಸೀರಿಸ್‌ನಲ್ಲಿ ರಿಕಾರ್ಡ್ ಕಾರ್ಸ್ಟಾರ್ಕ್ ಪಾತ್ರದ ಮೂಲಕ ಜನಮನ್ನಣೆಗಳಿಸಿದ್ದ ಜಾನ್ ಹೊಸ ಅಧ್ಯಾಯ ಬರೆದಿದ್ದರು.

2012-13ರಲ್ಲಿ ಗೇಮ್ಸ್ ಆಫ್ ಥ್ರೋನ್ ಸೀರಿಸಿ ಅತ್ಯಂತ ಜನಪ್ರಿಯವಾಗಿತ್ತು. ಬಳಿಕ ಜಾನ್ ಸ್ಟಾಲ್  ರಿಕಾರ್ಡ್ ಕಾರ್ಸ್ಟಾರ್ಕ್ ಎಂದೇ ಜನಪ್ರಿಯವಾಗಿದ್ದರು. ಜಾನ್ ಸ್ಟಾಲ್ ಕೊನೆಯದಾಗಿ ಕಾಣಿಸಿಕೊಂಡ ಟಿವಿ ಸೀರಿಸ್ ಮಿಸ್ಡೋಮರ್ ಮರ್ಡರ್ಸ್. ಇದರಲ್ಲಿ ಡ್ಯಾಮಿಯನ್ ಲಿಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

1982ರಿಂದ 2003ರ ವರೆಗೆ ಪ್ರಸಾರವಾದ ಹೈ ರೋಡ್ ಟಿವಿ ಸೀರಿಸ್ ಜಾನ್ ಸ್ಟಾಲ್ ನಟನೆಗೆ ಹಿಡಿದ ಕನ್ನಡಿಯಾಗಿತ್ತು. ಹೈ ರೋಡ್ ಬರೋಬ್ಬರಿ 114 ಎಪಿಸೋಡ್ ಮೂಲಕ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಸೀರಿಸ್‌ನಲ್ಲಿ ಜಾನ್ ಟಾಮ್ ಇನ್ವೆರ್ ಡರೋಕ್ ಕೆರ್ ಪಾತ್ರದ ಮೂಲಕ ಕಾಣಿಸಿಕೊಂಡಿದ್ದರು. 

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್‌ ಸ್ಮರಣೆ
ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ 13ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಎರಡನೇ ದಿನವಾದ ಶನಿವಾರ ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಅವರಿಗೆ ನುಡಿ ನಮನ ಸಲ್ಲಿಸುವ ಮೂಲಕ ಅಗಲಿದ ನಟನನ್ನು ಸ್ಮರಿಸಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಭಗವಾನ್‌ ಮಾತನಾಡಿ, ‘ಪುನೀತ್‌ ರಾಜ್‌ಕುಮಾರ್‌ ನಟನೆ ಮತ್ತು ದಾನ ಎರಡರಲ್ಲೂ ಅಪ್ಪನನ್ನು ಮೀರಿಸಿದವರು. ಸ್ವತಃ ಡಾ ರಾಜ್‌ಕುಮಾರ್‌ ಅವರೇ ಒಮ್ಮೆ ಚಿತ್ರದ ಶೂಟಿಂಗ್‌ನಲ್ಲಿ ‘ಇವನು ನನ್ನನ್ನೇ ಮೀರಿಸುತ್ತಾನೆ’ ಎಂದು ಖುಷಿಪಟ್ಟಿದ್ದರು’ ಎಂದು ಹೇಳಿದರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ‘ಪುನೀತ್‌ ರಾಜ್‌ಕುಮಾರ್‌ ಅವರ ‘ಪೃಥ್ವಿ’ ನನ್ನಿಷ್ಟದ ಸಿನಿಮಾ. ಆ ಚಿತ್ರದ ಪ್ರತಿ ದೃಶ್ಯ ನನ್ನ ಕಣ್ಣ ಮುಂದೆ ಇದೆ. ಒಬ್ಬ ಕಮರ್ಷಿಯಲ್‌ ಹೀರೋ ಕತೆಗೆ ತಮ್ಮನ್ನು ಒಗ್ಗಿಸಿಕೊಂಡರೆ ಎಂಥ ಸಿನಿಮಾ ಮೂಡಿ ಬರುತ್ತದೆ ಎಂಬುದಕ್ಕೆ ‘ಪೃಥ್ವಿ’ ಸಿನಿಮಾ ಅತ್ಯುತ್ತಮ ಉದಾಹರಣೆ’ ಎಂದರು.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಶ್ರೀ ಜಗನ್ನಾಥ ದಾಸರು ಚಿತ್ರ ಆಯ್ಕೆ
ರಾಜ್ಯ ಮತ್ತು ವಿದೇಶದಲ್ಲಿ ಯಶಸ್ವಿಗೊಂಡಿರುವ ಶ್ರೀ ಜಗನ್ನಾಥ ದಾಸರು ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ ಎಂದು ನಿರ್ದೇಶಕ ಮಧುಸೂದನ್‌ ಹವಾಲ್ದಾರ್‌ ತಿಳಿಸಿದರು. ಕನಕಗಿರಿಯಲ್ಲಿ ಶ್ರೀ ವಿಜಯದಾಸರು ಚಿತ್ರದ ಚಿತ್ರಿಕರಣ ಸಂದರ್ಭದಲ್ಲಿ ಮಾತನಾಡಿ, 14 ಚಿತ್ರಗಳಲ್ಲಿ ಆಯ್ಕೆಯಾಗಿರುವ ಚಿತ್ರಗಳಲ್ಲಿ ಒಂದಾಗಿದೆ. ಕರ್ನಾಟಕ ಚಲನಚಿತ್ರ ಆಕಾಡೆಮಿ ಅವರು ಆಯ್ಕೆ ಮಾಡಿದ್ದು, ಮಾ. 3ರಿಂದ 10ರ ವರೆಗೆ ಬೆಂಗಳೂರಿನಲ್ಲಿ ಚಿತ್ರೋತ್ಸವ ನಡೆಯಲಿದೆ ಎಂದರು.

click me!