
ಟಾಲಿವುಡ್ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಟಾಲಿವುಡ್ ಚಿತ್ರರಂಗದ ಹಿರಿಯ ಕಲಾವಿದ ಬಾಲಾಕೃಷ್ಣ ವಯಸ್ಸು 60 ಆದರೂ ಹುಮ್ಮಸ್ಸು ಮಾತ್ರ 25 ಹುಡುಗನಂತೆಯೇ ಇದ್ದಾರೆ. ಈ ವಯಸ್ಸಿನಲ್ಲೂ ನಾಯಕನಾಗಿ ಬೇಡಿಕೆ ಗಿಟ್ಟಿಸಿಕೊಂಡಿರುವ ನಟ ಬಾಲಾಕೃಷ್ಣ ಮುಂದಿನ ಚಿತ್ರಕ್ಕೆ ನಾಯಕಿಯ ಹುಡುಕಾಟ ಶುರುವಾಗಿದೆ. ಈ ಚಿತ್ರದಲ್ಲಿ ತಮನ್ನಾ ಅವರನ್ನು ಅಪ್ರೋಚ್ ಮಾಡಲಾಗಿತ್ತಂತೆ! ಬರೋಬ್ಬರಿ 3 ಕೋಟಿ ರೂ. ಬೇಡಿಕೆ ಇಟ್ರಂತೆ!
ತಮನ್ನಾ ಕೈ ಸೇರಿತು ರಾಮ್ ಚರಣ್ ಪತ್ನಿ ವಜ್ರದುಂಗುರ?
ಬಾಲಾಕೃಷ್ಣ ಅವರಿಗೆ ಜೋಡಿಯಾಗಿ ಅಭಿನಯಿಸುವುದಕ್ಕೆ ಯಾವ ನಟಿಯೂ ಒಪ್ಪಿಕೊಂಡಿರಲಿಲ್ಲ. ಮೊದಮೊದಲು ತಮನ್ನಾನೂ ಸಿನಿಮಾ ರಿಜೆಕ್ಟ್ ಮಾಡಿದ್ದರು. ಆದರೆ ನಿರ್ಮಾಪಕರ ಒತ್ತಾಯಕ್ಕೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಆದಕ್ಕೆ ಸಂಭಾವನೆ ಬೇಡಿಕೆ ಮಾತ್ರ ಗಗನ ಮುಟ್ಟಿದೆ.
ಹೌದು! ಬಾಲಾಕೃಷ್ಣ ಜೊತೆ ಅಭಿನಯಿಸುವುದಕ್ಕೆ ತಮನ್ನಾ 3 ಕೋಟಿ ಬೇಡಿಕೆ ಇಟ್ಟಿದ್ದಾರಂತೆ. ಇದಕ್ಕೆ ನಿರ್ಮಾಪಕರು ಓಕೆ ಎಂದು ಹೇಳಿ, ಚಿತ್ರೀಕರಣ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ತೆಲುಗಿನಲ್ಲಿ ಮಾತ್ರ ಈ ನಟಿಯರು ಕೋಟಿ ಕೋಟಿ ಸಂಭಾವನೆ ಪಡೆಯಲು ಸಾಧ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.