ಸನ್ಯಾಸಿ ಆಗಲು ತಲೆ ಬೋಳಿಸಿಕೊಂಡ ನಟ ಚಿರಂಜೀವಿ; ಅಭಿಮಾನಿಗಳಿಗೆ ಶಾಕ್?

Suvarna News   | Asianet News
Published : Sep 12, 2020, 02:43 PM ISTUpdated : Sep 16, 2020, 09:59 AM IST
ಸನ್ಯಾಸಿ ಆಗಲು ತಲೆ ಬೋಳಿಸಿಕೊಂಡ ನಟ ಚಿರಂಜೀವಿ; ಅಭಿಮಾನಿಗಳಿಗೆ ಶಾಕ್?

ಸಾರಾಂಶ

ಟಾಲಿವುಡ್ ಹಿರಿಯ ನಟ ಚಿರಂಜೀವಿ ತಲೆ ಬೋಳಿಸಿ ಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು ಕೇಳಿದ ಸಾವಿರಾರು ಪ್ರಶ್ನೆಗಳಿಗೆ ಸಿಕ್ಕಿದ್ದು ಒಂದೇ ಉತ್ತರ....

ಕೋವಿಡ್‌19ನಿಂದಾಗಿ ಇಷ್ಟು ದಿನಗಳ ಕಾಲ ಮನೆಯಲ್ಲಿ ಟೈಂ ಕಳೆಯುತ್ತಿದ್ದ ಮೆಗಾ ಸ್ಟಾರ್ ಚಿರಂಜೀವಿ ಈಗ ಶೂಟಿಂಗ್‌ಗೆ ಮರಳಿದ್ದಾರೆ. 65 ವರ್ಷದ ನಟನನ್ನು ಡಿಫರೆಂಟ್‌ ಲುಕ್‌ನಲ್ಲಿ ನೋಡಿ ಶಾಕ್‌ ಆಗಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಉತ್ತರ.

"

ಮೆಗಾ ಸ್ಟಾರ್‌ ಚಿರಂಜೀವಿ ಫ್ಯಾಮಿಲಿಯ ಒಂದು ಝಲಕ್‌

ಚಿರು ಪೋಸ್ಟ್:
'ಅರ್ಬನ್ ಮಾಂಕ್. ನಾನು ಸನ್ಯಾಸಿ ರೀತಿಯಲ್ಲಿ ಚಿಂತಿಸುತ್ತಿದ್ದೀನಾ?' ಎಂದು ಚಿರಂಚೀವಿ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ನಟ ಸುಧಾಕರ್‌ 'ಹೌದು ಸರ್ ಸೂಪರ್ ಲುಕ್' ಎಂದರೆ, ಕನ್ನಡದ ಹೆಬ್ಬುಲಿ ನಟಿ ನಿಶ್ವಿಕಾ 'ಸೂಪರ್' ಎಂದಿದ್ದಾರೆ. ಆದರೆ ಪುತ್ರ ರಾಮ್‌ಚರಣ್ ಮಾತ್ರ 'ಅಪ್ಪ, ನಾನು ಏನ್ ನೋಡ್ತಿದ್ದೀನಿ. ಇದು ನಿಜಾನಾ?'ಎಂದು ಬರೆದು ಹೊಸ ಲುಕ್ ನೋಡಿ ಶಾಕ್ ಆಗಿದ್ದಾರೆ.

 

ಆದರೆ, ಚಿರಂಜೀವಿ ಈ ಲುಕ್ ಪರ್ಮನೆಂಟ್‌ ಅಲ್ಲ. ತನ್ನ ಮುಂದಿನ ಚಿತ್ರ 'ಆಚಾರ್ಯ'ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಲಯಾಳಂನ 'ಲೂಸಿಫರ್' ರಿಮೇಕ್‌ ಎನ್ನಲಾಗಿದೆ. ಚಿತ್ರದ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿಯನ್ನು ಇನ್ನೂ ಬಹಿರಂಗ ಪಡಿಸಿಲ್ಲ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!