
ಟಾಲಿವುಡ್ ಸ್ಟಾರ್ ರಾಮ್ ಚರಣ್ ಸದ್ಯ ತಂದೆಯಾಗುತ್ತಿರುವ ಸಂತಸದಲ್ಲಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಗರ್ಭಿಣಿ. ಇಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಮಗುವನ್ನು ಸ್ವಾಗತಿಸಲು ಉತ್ಸುಕರಾಗಿದ್ದಾರೆ. ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆಮಾಡಿದೆ. ಈ ನಡುವೆ ಮನೆಗೆ ವಿಶೇಷವಾಗಿ ತಯಾರಿಸಿದ ತೊಟ್ಟಿಲನ್ನು ಖರೀಸದಿಸಿದ್ದಾರೆ ರಾಮ್ ಚರಣ್ ದಂಪತಿ. ಈ ಬಗ್ಗೆ ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತೊಟ್ಟಿಲಿನ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
'PrajwalaFoundationನಿಂದ ಈ ಸುಂದರ ಉಡುಗೊರೆಯನ್ನು ಸ್ವೀಕರಿಸಲು ನಾವು ಗೌರವ ಮತ್ತು ವಿನಮ್ರರಾಗಿದ್ದೇವೆ. ಈ ಕರಕುಶಲ ತೊಟ್ಟಿಲು ಅಪಾರ ಮಹತ್ವವನ್ನು ಹೊಂದಿದೆ, ಇದು ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಭರವಸೆಯನ್ನು ಸಂಕೇತಿಸುತ್ತದೆ. ಇದು ಪರಿವರ್ತನೆ ಮತ್ತು ಸ್ವಾಭಿಮಾನದ ಪ್ರಯಾಣವನ್ನು ಪ್ರತಿನಿಧಿಸುತ್ತದೆ. ನನ್ನ ಮಗು ಹುಟ್ಟಿನಿಂದಲೇ ತೆರೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ' ಎಂದು ಪೋಸ್ಟ್ ಶೇರ್ ಮಾಡಿದ್ದಾರೆ. ತೊಟ್ಟಿಲನ ಫೋಟೋ ಜೊತೆಗೆ ರಾಮ್ ಚರಣ್ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಚಿರಂಜೀವಿ ಮನೆಗೆ ಶಿಫ್ಟ್
ಮೆಗಾಸ್ಟಾರ್ ಮನೆಗೆ ವಾಪಾಸ್ ಆಗುವ ಬಗ್ಗೆ ರಾಮ್ ಚರಣ್ ಪತ್ನಿ ಉಪಾಸನಾ ಇತ್ತೀಚಿಗಷ್ಟೆ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಉಪಾಸನಾ ಈ ಬಗ್ಗೆ ಬಹಿರಂಗ ಪಡಿಸಿದ್ದರು. ' ನಾವು ಈಗ ಪ್ರತ್ಯೇಕವಾಗಿ ಬದುಕುತ್ತಿದ್ವಿ. ಆದರೆ ಶೀಘ್ರದಲ್ಲೇ ಚರಣ್ ಅವರ ಪೋಷಕರ ಮನೆಗೆ ಮರಳುತ್ತಿದ್ದೇವೆ. ನಮ್ಮ ಪಾಲನೆಯಲ್ಲಿ ನಮ್ಮ ಅಜ್ಜಿಯರು ತೋಡಗಿಕೊಂಡಿದ್ದರು. ನಮ್ಮ ಮಗುವಿನ ಸಂತೋಷವನ್ನು ಕಸಿದಿಕೊಳ್ಳಲು ನಾವು ಬಯಸಲ್ಲ' ಎಂದು ಹೇಳಿದ್ದಾರೆ.
ರಾಮ್ ಚರಣ್-ಉಪಾಸನಾ ಮದುವೆ ವಾರ್ಷಿಕೋತ್ಸವ: ಪವರ್ ಕಪಲ್ ಸುಂದರ ಲವ್‌ಸ್ಟೋರಿ ಇಲ್ಲಿದೆ
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಜುಬಿಲಿ ಹಿಲ್ಸ್‌ನಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದೀಗ ರಾಮ್ ಚರಣ್ ದಂಪತಿ ಕೂಡ ಎಂಟ್ರಿ ಕೊಡುತ್ತಿರುವುದರಿಂದ ಮನೆಯ ಸಂತಸ ಮತ್ತಷ್ಟು ಹೆಚ್ಚಾಗಲಿದೆ. ಅಷ್ಟೆಯಲ್ಲದೇ ಮನೆಗೆ ಮಗು ಬರುವ ಖುಷಿ ಸಂತಸವನ್ನು ದುಪ್ಪಟ್ಟು ಮಾಡಿದೆ. ತಮ್ಮ ಮಗುವಿಗೆ ಅಜ್ಜಿ, ತಾತ ಸೇರಿದಂತೆ ಇಡೀ ಕುಟುಂಬದ ಪ್ರೀತಿ ಸಿಗಬೇಕು ಎನ್ನುವುದು ಉಪಾಸನಾ ದಂಪತಿಯ ಆಸೆ. ಹಾಗಾಗಿ ಪೋಷಕರ ಜೊತೆ ಇರಲು ಇಷ್ಟಟ್ಟಿದ್ದಾರೆ ಉಪಾಸನಾ.
ಮತ್ತೆ ಚಿರಂಜೀವಿ ಮನೆಗೆ ಶಿಫ್ಟ್ ಆಗ್ತಿದ್ದಾರೆ ರಾಮ್ ಚರಣ್-ಉಪಾಸನಾ ದಂಪತಿ: ಕಾರಣವೇನು?
ಪತ್ನಿ ಗರ್ಭಿಣಿ ಎಂದಾಗ ರಾಮ್ ಚರಣ್ ರಿಯಾಕ್ಷನ್ ಹೇಗಿತ್ತು?
ಗರ್ಭಿಣಿ ಎಂದು ಗೊತ್ತಾದಾಗ ಪತಿ ರಾಮ್ ಚರಣ್ ಅವರ ರಿಯಾಕ್ಷನ್ ಹೇಗಿತ್ತು ಎಂದು ಉಪಾಸನಾ ಬಹಿರಂಗ ಪಡಿಸಿದ್ದರು. ತಾವು ಪ್ರೆಗ್ನೆಂಟ್ ಎಂಬ ವಿಚಾರವನ್ನು ಮೊದಲ ಬಾರಿಗೆ ತಿಳಿಸಿದಾಗ ರಾಮ್ ಚರಣ್ ಅವರು ಮೊದಲಿಗೆ ಅತಿಯಾಗಿ ಖುಷಿಪಡಲಿಲ್ಲ ಎಂದು ಉಪಾಸನಾ ಹೇಳಿದ್ದಾರೆ.‘ನಾನು ರಾಮ್ ಚರಣ್ ಅವರಿಗೆ ಮೊದಲ ಬಾರಿ ಈ ವಿಷಯ ತಿಳಿಸಿದಾಗ ಅವರು ಈಗಲೇ ಇಷ್ಟೆಲ್ಲಾ ಖುಷಿಪಡಬೇಡ, ಸಮಾಧಾನದಿಂದ ಇರು ಅಂತ ಅವರು ನನಗೆ ಹೇಳಿದರು. ಏಕೆಂದರೆ ಗರ್ಭಿಣಿ ಹೌದೋ ಅಲ್ಲವೋ ಎನ್ನುವುದು ಮೊದಲು ಕನ್ಫರ್ಮ್ ಆಗಬೇಕಿತ್ತು. ಪ್ರೆಗ್ನೆಂಟ್ ಆಗಿರೋದು ನಿಜವೋ ಅಲ್ಲವೋ ಎಂಬ ಬಗ್ಗೆ ಹಲವು ಬಾರಿ ಪರೀಕ್ಷೆ ಮಾಡಿಸಿದೆವು. ಎಲ್ಲ ಪರೀಕ್ಷೆ ಸರಿಯಾಗಿದೆ ಎಂದು ತಿಳಿದ ನಂತರವಷ್ಟೇ ರಾಮ್ ಚರಣ್ ಸೆಲೆಬ್ರೇಟ್ ಮಾಡಿದರು' ಎಂದು ಉಪಾಸನಾ ಬಹಿರಂಗ ಪಡಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.