
ಎಸ್ ಎಸ್ ರಾಜಮೌಳಿ(Rajamouli) ಸಾರಥ್ಯದಲ್ಲಿ ಬಂದ ಆರ್ ಆರ್ ಆರ್(RRR) ಸಿನಿಮಾ ಚಿತ್ರಮಂದಿರದಲ್ಲಿ ಧೂಳ್ ಎಬ್ಬಿಸುತ್ತಿದೆ. ಕೋಟ್ಯಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಆರ್ ಆರ್ ಆರ್ ಮಾರ್ಚ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಚಿತ್ರ ನೋಡಿ ಆನಂದಿಸುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್(Jr NTR and Ram Charans) ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಈಗಾಗಲೇ ರಾಜಮೌಳಿ ಸಿನಿಮಾ 500 ಕೋಟಿ ರೂಪಾಯಿ ಕಲೆಕ್ಷನ್ ದಾಟಿದ್ದು, 4 ನೇ ದಿನವೂ ಉತ್ತಮ ಗಳಿಕೆ ಮಾಡಿದೆ.
ಬಾಕ್ಸ್ ಆಫೀಸ್ ಇಂಡಿಯಾ ವರದಿಯ ಪ್ರಕಾರ ಆರ್ ಆರ್ ಆರ್ ಸಿನಿಮಾ ಸೋಮವಾರ ಅಂದರೆ ಸಿನಿಮಾ ಬಿಡುಗಡೆಯಾಗಿ 4ನೇ ದಿನವೂ ಉತ್ತಮ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಸಿನಿಮಾ 17 ಕೋಟಿ ಕಲೆಕ್ಷನ್ ಮಾಡಿದ್ದು, ಕಳೆದ ನಾಲ್ಕು ದಿನಗಳಲ್ಲಿ ಹಿಂದಿಯಲ್ಲಿ 92 ಕೋಟಿ ಬಾಚಿಕೊಂಡಿದೆ. ಇನ್ನು ದಕ್ಷಿಣ ಭಾರತದಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನು ಅಧಿಕೃತ ವರದಿ ಬಹಿರಂಗವಾಗಿಲ್ಲ.
ಇನ್ನು ಮೂರನೆ ದಿನದ ಕಲೆಕ್ಷನ್ ವರದಿ ನೋಡವುದಾದರೆ, ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ನೀಡಿರುವ ಮಾಹಿತಿ ಪ್ರಕಾರ ಮೂರನೇ ದಿನಕ್ಕೆ 500 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆರ್ ಆರ್ ಆರ್ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ(RRR Collection). ಮೊದಲ ವಾರಾಂತ್ಯದಲ್ಲಿ ಸಿನಿಮಾ 500 ಕೋಟಿ ರೂ. ಬಾಚಿಕೊಂಡಿದೆ ಎಂದು ಮಾಹಿತಿ ಹಂಚಿಕೊಂಡಿದ್ದರು. ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ಆರ್ ಆರ್ ಆರ್ ಸಿನಿಮಾದ ಗಳಿಕೆ ಎರಡೇ ವಾರಾಂತ್ಯದಲ್ಲಿ ಡಬಲ್ ಆಗುವ ಸಾಧ್ಯತೆ ಇನ್ನುತ್ತಿದ್ದಾರೆ ವಿಶ್ಲೇಷಕರು.
Ram Charan Birthday; ಗೆಳೆಯನಿಗಾಗಿ ಪಾರ್ಟಿ ಆಯೋಜಿಸಿದ್ದ Jr.NTR...ಕನ್ನಡದಲ್ಲಿ ಧನ್ಯವಾದ ತಿಳಿಸಿದ ಚಿರು ಪುತ್ರ
ಇನ್ನು ರಾಜಮೌಳಿ ನಿರ್ದೇಶದ ಆರ್ ಆರ್ ಆರ್ ಮೊದಲ ದಿನವೇ ದಾಖಲೆ ಗಳಿಕೆ ಮಾಡಿತ್ತು. ಆಂಧ್ರ ಪ್ರದೇಶದಲ್ಲಿ 75 ಕೋಟಿ ರೂ. ಗಳಿಕೆ ಮಾಡಿದೆ. ಕರ್ನಾಟಕದಲ್ಲಿ 14.5 ಕೋಟಿ ರೂ. ಗಳಿಕೆ ಮಾಡಿದ್ರೆ ತಮಿಳುನಾಡಿನಲ್ಲಿ 10 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕೇರಳದಲ್ಲಿ 4 ಕೋಟಿ ರೂ. ಆರ್ ಆರ್ ಆರ್ ಸಿನಿಮಾ ಬಾಚಿಕೊಂಡಿತ್ತು. ಉತ್ತರ ಭಾರತದಲ್ಲಿ 25 ಕೋಟಿ ರೂ. ಭಾರತದಲ್ಲಿ ರಾಜಮೌಳಿ ಸಿನಿಮಾ 156 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ವಿದೇಶದಲ್ಲಿಯೂ ಆರ್ ಆರ್ ಆರ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಯು ಎಸ್ ನಲ್ಲಿ 42 ಕೋಟಿ ಕಲೆಕ್ಷನ್ ಮಾಡಿದೆ, ಬೇರೆ ಬೇರೆ ದೇಶಗಳಲ್ಲಿ 25 ಕೋಟಿ ರೂ. ಒಟ್ಟು ಆರ್ ಆರ್ ಆರ್ ಕಲೆಕ್ಷನ್ 223 ಕೋಟಿ ರೂಪಾಯಿ ಆಗಿದೆ.
ಎರಡನೇ ದಿನವೂ ಆರ್ ಆರ್ ಆರ್ ಕಲೆಕ್ಷನ್ ಅಬ್ಬರ ಮುಂದುವರೆದಿತ್ತು. ಮೊದಲ ದಿನ ಹಿಂದಿ ಭಾಷೆಯಲ್ಲಿ ಆರ್ ಆರ್ ಆರ್ 14 ಕೋಟಿ ಬಾಚಿಕೊಂಡಿತ್ತು. 2ನೇ ದಿನದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಿದೆ. ಎರಡನೇ ದಿನ ಹಿಂದಿಯಲ್ಲಿ ರಾಜಮೌಳಿ ಸಿನಿಮಾ 24.5 ಕೋಟಿ ರೂ.ಗಳಿಕೆ ಮಾಡಿದೆ. ಭಾನುವಾರ ರಜೆ ಇರುವುದರಿಂದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಆಸ್ಟ್ರೇಲಿಯಾ ಮತ್ತು ಯುಎಸ್ ನಲ್ಲಿಯೂ ಆರ್ ಆರ್ ಆರ್ ಉತ್ತಮ ಕಲೆಕ್ಷನ್ ಮಾಡಿದೆ. ಚಿತ್ರದ ಹಿಂದಿ ಮತ್ತು ವಿದೇಶಿ ಕಲೆಕ್ಷನ್ ಬಗ್ಗೆ ತೆಲುಗು ಸಿನಿಮಾಗಳ ವಿಶ್ಲೇಷಕ ರಮೇಶ್ ಬಾಲ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.
ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಆರ್ ಆರ್ ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಜೀವನದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸುಮಾರು 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿದೆ. ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಮುದ್ರ ಕಣಿ, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.