ತ್ರಿಶಾ ಸಿಎಂ ಆಗ್ತಾರಾ? ದಳಪತಿ 'ಗೆಳತಿ'ಯ ರಾಜಕೀಯ ಎಂಟ್ರಿ ಫಿಕ್ಸ್? ತ್ರಿಶಾಗೆ ತಿರುಚ್ಚಿ ಟಿಕೆಟ್?

Published : May 06, 2026, 09:16 PM IST
Thalapathy Vijay Trisha Krishanan

ಸಾರಾಂಶ

ದಳಪತಿ ವಿಜಯ್​ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ, ಎಲ್ಲರ ಚಿತ್ತ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ. ಅದ್ರಲ್ಲೂ ದಶಕಗಳ ಹಿಂದೆ ತ್ರಿಷಾ ಸಂದರ್ಶನವೊಂದರಲ್ಲಿ ನಾನು ತಮಿಳುನಾಡು ಸಿಎಂ ಆಗ್ತಿನಿ ಅಂದಿದ್ರು. ಅದೀಗ ನಿಜವಾಗುತ್ತಾ?

ವಿಜಯ್ ಪಾಲಿನ ವಿಜಯ ದೇವತೆಯಾದ ತ್ರಿಷಾ; ದಳಪತಿ ಜೊತೆಗೆ ರಾಜಕೀಯಕ್ಕೆ ಬರ್ತಾರಾ ತ್ರಿಷಾ..?

ದಳಪತಿ ವಿಜಯ್ (Thalapathy Vijay) ತಮಿಳುನಾಡು ಚುನಾವಣೆಯಲ್ಲಿ ಗೆದ್ದಿದ್ದೇ ಗೆದ್ದಿದ್ದು, ವಿಜಯ್ ಗಿಂತ ಹೆಚ್ಚಾಗಿ ತ್ರಿಷಾ ಕೃಷ್ಣನ್ (Trisha Krishnan) ಹೆಸರು ಚಾಲ್ತಿಗೆ ಬಂದಿದೆ. ಅಸಲಿಗೆ ವಿಜಯ್-ತ್ರಿಷಾ ಸಂಬಂಧದ ಬಗೆಗಿನ ಗಾಸಿಪ್​ ಬಹಳಷ್ಟು ದಿನಗಳಿಂದ ಇದೆ. ಈ ನಡುವೆ ವಿಜಯ್ ಜೊತೆ ತ್ರಿಷಾನೂ ರಾಜಕೀಯ ಬರ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲ ಹಿಂದೊಮ್ಮೆ ಸಂದರ್ಶನದಲ್ಲಿ ತಾನುಆದ್ರೆ ಮುಖ್ಯಮಂತ್ರಿಯೇ ಆಗ್ತಿನಿ ಅಂದಿದ್ದ ತ್ರಿಷಾ ಮಾತುಗಳು ಈಗ ಹೊಸ ಅರ್ಥ ಪಡೆದುಕೊಂಡಿವೆ.

ನಾನು ತಮಿಳು ಸಿಎಂ ಆಗ್ತಿನಿ : ತ್ರಿಷಾ ಪಂಚ್ ಡೈಲಾಗ್, ದಳಪತಿ ಗೆಳತಿಯ ರಾಜಕೀಯ ಎಂಟ್ರಿ ಫಿಕ್ಸ್..!

ಯೆಸ್ ದಳಪತಿ ವಿಜಯ್​ರ ಟಿವಿಕೆ ಪಾರ್ಟಿ ತಮಿಳುನಾಡಿನಲ್ಲಿ ಜಯಭೇರಿ ಬಾರಿಸ್ತಾ ಇದ್ದ ಹಾಗೇನೇ , ಎಲ್ಲರ ಚಿತ್ತ ತ್ರಿಷಾ ಕಡೆಗೆ ತಿರುಗಿಕೊಂಡಿದೆ. ಸೋಷಿಯಲ್ ಮಿಡಿಯಾದಲ್ಲಿ ತ್ರಿಷಾದೇ ಸದ್ದು, ಸುದ್ದಿ. ಅದ್ರಲ್ಲೂ ದಶಕಗಳ ಹಿಂದೆ ತ್ರಿಷಾ ಸಂದರ್ಶನವೊಂದರಲ್ಲಿ ನಾನು ತಮಿಳುನಾಡು ಸಿಎಂ ಆಗ್ತಿನಿ ಅಂದಿದ್ದ ವಿಡಿಯೋ ಈಗ ವೈರಲ್ ಆಗ್ತಾ ಇದೆ.

ಈಗ ಈ ಮಾತಿಗೆ ಹೊಸ ಅರ್ಥ ಬಂದಿದೆ

ಆಗ ತ್ರಿಷಾ ಈಗ ತಮಾಷೆಗೆ ಈ ಮಾತು ಹೇಳಿದ್ರೋ, ಅಥವಾ ಸೀರಿಯಸ್ ಆಗಿ ಹೇಳಿದ್ರೋ, ಈಗ ಈ ಮಾತಿಗೆ ಹೊಸ ಅರ್ಥ ಬಂದಿದೆ. ನಿಮಗೆಲ್ಲಾ ಗೊತ್ತಿರೋ ಹಾಗೆ ದಳಪತಿ ವಿಜಯ್, ಪತ್ನಿ ಸಂಗೀತಾ ಜೊತೆ ವಿಚ್ಛೆಧನಕ್ಕೆ ಮುಂದಾಗಿದ್ದಾರೆ. ವಿಜಯ್ ಮತ್ತು ತ್ರಿಷಾ ನಡುವೆ ಬಹುಕಾಲದಿಂದ ನಂಟು ಇದ್ದು, ಇವರಿಬ್ಬರ ಅಫೇರ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಹರಿದಾಡಿವೆ. ತಮ್ಮ ಸಂಬಂಧದ ಬಗ್ಗೆ ಇವರು ಬಹಿರಂಗವಾಗಿ ಹೇಳಿಕೊಂಡಿಲ್ಲವಾದ್ರೂ ಅದೊಂಥರಾ ಓಪನ್ ಸೀಕ್ರೆಟ್.

ಚುನಾವಣಾ ಫಲಿತಾಂಶದ ದಿನ ತ್ರಿಷಾ ಹುಟ್ಟುಹಬ್ಬ ಕೂಡ ಇದ್ದು, ತಿರುಪತಿ ದೇಗುಲಕ್ಕೆ ನಟಿ ತೆರಳಿದ್ರು. ಅಲ್ಲಿಂದ ಸೀದಾ ದಳಪತಿ ವಿಜಯ್ ನಿವಾಸಕ್ಕೆ ಆಗಮಿಸಿದ್ರು. ಅಷ್ಟೊತ್ತಿಗೆ ಟಿವಿಕೆ ವಿಜಯೋತ್ಸವ ಖಚಿತವಾಗಿತ್ತು. ತ್ರಿಷಾ ಮೊಗದಲ್ಲೂ ಸಂತಸದ ಕಾಂತಿ ನಳನಳಿಸ್ತಾ ಇತ್ತು.

2 ಕ್ಷೇತ್ರಗಳಲ್ಲಿಯೂ ವಿಜಯ್ ಜಯ.. ತ್ರಿಷಾಗೆ ತಿರುಚ್ಚಿ ಟಿಕೆಟ್..?

ಹೌದು ವಿಜಯ್ ಪೆರಂಬೂರು ಮತ್ತು ತಿರುಚ್ಚಿ ಎರಡು ಕಡೆಗೆ ಸ್ಪರ್ಧೆ ಮಾಡಿದ್ದು, ಎರಡೂ ಕಡೆ ವಿಜಯ ಸಾಧಿಸಿದ್ದಾರೆ. ಪೆರಂಬೂರನ್ನ ಉಳಿಸಿಕೊಂಡು, ತಿರುಚ್ಚಿಗೆ ರಾಜಿನಾಮೆ ಕೊಡೋದು ಬಹುತೇಕ ಫಿಕ್ಸ್. ಮತ್ತು ತಿರುಚ್ಚಿ ಟಿಕೆಟ್​ನ ತ್ರಿಷಾಗೆ ಕೊಡ್ತಾರೆ ಅಂತ ಸುದ್ದಿಯಾಗಿದೆ.

ಅಸಲಿಗೆ ಚುನಾವಣೆ ಸಮಯದಲ್ಲಿ ಅನೇಕ ರಾಜಕೀಯ ನಾಯಕರು ತ್ರಿಷಾ ಮತ್ತು ವಿಜಯ್ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರು. ವಿಜಯ್ ಪತ್ನಿ ಇದೇ ಸಮಯದಲ್ಲಿ , ಡಿವೋರ್ಸ್ ಅಪ್ಲೈ ಮಾಡಿದ್ರು. ಇವೆಲ್ಲಾ ವಿಜಯ್​ಗೆ ಮೈನಸ್ ಆಗ್ತಾವೆ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ತಮಿಳುನಾಡು ಜನ ಅದೆಲ್ಲವನ್ನೂ ಮೀರಿ ವಿಜಯ್ ಪಾರ್ಟಿಯನ್ನ ಬೆಂಬಲಿಸಿದ್ದಾರೆ. ಅಲ್ಲಿಗೆ ವಿಜಯ್ ತ್ರಿಷಾ ಸಂಬಂಧಕ್ಕೆ ಒಂದು ರೀತಿ ಅಧಿಕೃತ ಮುದ್ರೆ ಬಿದ್ದಂತೆ ಅಗಿದೆ. ಅದ್ರಲ್ಲೂ ಅಂದಿನ ಎಂ.ಜಿ.ಆರ್ ಮತ್ತು ಜಯಲಲಿತಾ ಜೋಡಿ ಜೊತೆಗೆ ಜನರು ವಿಜಯ್ ತ್ರಿಷಾರನ್ನ ಹೋಲಿಕೆ ಮಾಡ್ತಾ ಇದ್ದಾರೆ. ಇದೇ ಕಾರಣಕ್ಕೆ, ಎಂಜಿ ಆರ್ ಬಳಿಕ ಜಯಲಲಿತಾ ಸಿಎಂ ಆದಂತೆ, ಮುಂದೊಮ್ಮೆ ತ್ರಿಷಾ ಸಿಎಂ ಆಗಬಹುದು ಎಂಬುದು ಹಲವರ ಲೆಕ್ಕಾಚಾರ! 

ವಿಜಯ್ ಪಾಲಿನ ವಿಜಯ ದೇವತೆಯಾದ ತ್ರಿಷಾ..!

ಅಸಲಿಗೆ ತ್ರಿಶಾ ಅಂಡ್ ವಿಜಯ್ 2004ರಲ್ಲಿ ಮೊದಲ ಬಾರಿ ಗಿಲ್ಲಿ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ರು. ಗಿಲ್ಲಿ ಮೂವಿ ಸೂಪರ್ ಡೂಪರ್ ಹಿಟ್ ಆಗಿ ಇವರದ್ದು ಹಿಟ್ ಪೇರ್ ಅನ್ನಿಸಿಕೊಂಡಿತ್ತು.

ಇನ್ನೂ 2005 ಮತ್ತು 2006ರಲ್ಲಿ ತಿರುಪಾಚಿ, ಆತಿ ಸಿನಿಮಾಗಳಲ್ಲಿ ಕೂಡ ವಿಜಯ್ ಌಂಡ್ ತ್ರಿಶಾ ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ರು. 2008ರಲ್ಲಿ ಮತ್ತೆ ಕುರುವಿ ಮೂವಿನಲ್ಲಿ ಜೊತೆಯಾಗಿ ಮಿಂಚಿದ್ರು. ಆದ್ರೆ ಆ ಸಮಯದಲ್ಲಿ ಇಬ್ಬರ ನಡುವೆ ಗೆಳೆತನ ಮಾತ್ರ ಇತ್ತು.

2023ರಲ್ಲಿ , 15 ವರ್ಷಗಳ ನಂತರ ಮತ್ತೆ ಲಿಯೋ ಸಿನಿಮಾದಲ್ಲಿ ಇಬ್ಬರೂ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ರು. ಆ ಸಮಯದಲ್ಲಿ ವಿಜಯ್ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಅತ್ತ ಎಂಗೇಜ್​ಮೆಂಟ್ ಮುರಿದುಕೊಂಡಿದ್ದ ತ್ರಿಷಾ ಕೂಡ ಒಬ್ಬಂಟಿ ಆಗಿದ್ರು. ಅಲ್ಲಿಂದಲೇ ಇಬ್ಬರ ನಡುವೆ ಆತ್ಮೀಯತೆ ಬೆಳಿತು ಅಂತ ಹೇಳಲಾಗುತ್ತೆ.

ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು , ನಾನಾ ಸವಾಲು ಎದುರಿಸಿದ ಸಮಯದಲ್ಲಿ ತ್ರಿಷಾ ವಿಜಯ್​ಗೆ ಬೆನ್ನೆಲುಬಾಗಿ ನಿಂತುಕೊಂಡ್ರು. ಸೋ ವಿಜಯ್​ರ ಈ ಗೆಲುವಿನಲ್ಲಿ, ತ್ರಿಷಾ ಪಾತ್ರ ಇದೆ. ವಿಜಯ್ ಪಾಲಿನ ವಿಜಯ ದೇವತೆ ತ್ರಿಷಾ ಅಂತಿದ್ದಾರೆ ಫ್ಯಾನ್ಸ್.

ಎನಿ ವೇ ತ್ರಿಷಾ ಜಸ್ಟ್ ದಳಪತಿ ಬೆನ್ನ ಹಿಂದೆ ಇರ್ತಾರೋ, ಅಥವಾ ವಿಜಯ್ ಜೊತೆ ಜೊತೆಗೆ ರಾಜಕೀಯಕ್ಕೂ ಬರ್ತಾರೋ? ಮುಂದೊಂದು ದಿನ ಸಿಎಂ ಆಗ್ತಾರಾ? ಅನ್ನೋದು ಸದ್ಯದ ಕುತೂಹಲ...!

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗೂಗಲ್‌ನಲ್ಲಿ ಭಾರೀ ಹುಡುಕಾಟ.. 'ದಳಪತಿ' ಧರ್ಮ ಯಾವುದು ಎಂಬ ಕನ್‌ಫ್ಯೂಸನ್‌ನಲ್ಲಿ ವಿಜಯ್ ಫ್ಯಾನ್ಸ್!
ಸಲ್ಮಾನ್ ಖಾನ್ ಸೂಪರ್‌ಹೀರೋ ಸಿನಿಮಾಗೆ ಹಾಲಿವುಡ್ ಟಚ್: ವಿಶ್ವದ ನಂ.1 VFX ಕಂಪನಿ ಎಂಟ್ರಿ?