Priyanka Shenoy Menon: ಕಾವಾಲ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ತಮನ್ನಾಗೆ ಸೆಡ್ಡು ಹೊಡೆದ ಮಿಸೆಸ್ ಕೇರಳ!

Published : Jul 29, 2023, 03:50 PM ISTUpdated : Jul 29, 2023, 03:52 PM IST
Priyanka Shenoy Menon: ಕಾವಾಲ ಹಾಡಿಗೆ ಭರ್ಜರಿ ಸ್ಟೆಪ್​ ಹಾಕಿ ತಮನ್ನಾಗೆ ಸೆಡ್ಡು ಹೊಡೆದ ಮಿಸೆಸ್ ಕೇರಳ!

ಸಾರಾಂಶ

ಜೈಲರ್​ ಚಿತ್ರದಲ್ಲಿ ನಟಿ ತಮನ್ನಾ ಭಾಟಿಗೆ ಕಾವಾಲ ಹಾಡಿಗೆ ಮಾಡಿದ ನೃತ್ಯದಂತೆಯೇ, ಅದೇ ರೀತಿ ವೇಷ ತೊಟ್ಟು ಮಿಸೆಸ್​ ಇಂಡಿಯಾ ಕೇರಳ ಪ್ರಿಯಾಂಕಾ ಭರ್ಜರಿ ಸ್ಟೆಪ್​ ಹಾಕಿದ್ದಾರೆ.   

ಟಾಲಿವುಡ್​​ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಜೈಲರ್’ (Jailer) ಚಿತ್ರವನ್ನು ಕಣ್ತುಂಬಿಕೊಳ್ಳಲು ಒಂದೆಡೆ ತಲೈವಾ ಫ್ಯಾನ್ಸ್​ ತುದಿಗಾಲಿನಲ್ಲಿ ನಿಂತಿದ್ದರೆ, ಇತ್ತೀಚೆಗೆ ಬಿಡುಗಡೆಯಾಗಿರೋ ಇದರ ಕಾವಾಲ  ಹಾಡು ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಿದೆ. ಫೇಸ್​ಬುಕ್, ಇನ್‌ಸ್ಟಾಗ್ರಾಮ್​, ವಾಟ್ಸಪ್‌ ಸ್ಟೇಟಸ್‌ನಲ್ಲೂ ಇದೇ ಈಗ ಟ್ರೆಂಡಿಂಗ್‌ನಲ್ಲಿದೆ. ಮಕ್ಕಳಿಂದ ಹಿಡಿದು ಅಜ್ಜಿಯರವರೆಗೆ, ಕಿರುತೆರೆ ಕಲಾವಿದರಿಂದ ಹಿಡಿದು ಬೇರೆ ಬೇರೆ ನಟಿಯರೂ ಈ ಹಾಡಿಗೆ ಡಾನ್ಸ್​ ಮಾಡಿ ಮೋಡಿ ಮಾಡುತ್ತಿದ್ದಾರೆ. ಈಚೆಗೆ ಕಿರುತೆರೆ ನಟಿ, ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಕೂಡ ಈ ಹಾಡಿಗೆ ಡಾನ್ಸ್​ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದು ಇದೆ.   ಅನಿರುದ್ಧ್ ಮ್ಯೂಸಿಕ್, ಶಿಲ್ಪಾ ರಾವ್ ವಾಯ್ಸ್‌ನಲ್ಲಿ ಸಾಂಗ್ ಕೇಳುಗರಿಗೆ ಆಪ್ತವಾಗಿದೆ.  ತಮನ್ನಾ ಭಾಟಿಯಾ ಮತ್ತು ರಜನಿಕಾಂತ್‌ ನಟಿಸಿದ ಈ ಚಿತ್ರದ ಕಾವಾಲ (Kavalayya)  ಹಾಡು ಜುಲೈ 6ರಂದು ಬಿಡುಗಡೆಯಾಗಿತ್ತು.  ಈ ಹಾಡಿಗೆ ಅರುಣರಾಜ ಕಾಮರಾಜ್ ಸಾಹಿತ್ಯವಿದೆ. ಆನ್‌ಲೈನ್‌ನಲ್ಲಿ ಹೊಸ ಪುಳಕ ಉಂಟು ಮಾಡಿದ ಈ ಹಾಡು ಯೂಟ್ಯೂಬ್‌ನಲ್ಲಿ 80 ದಶಲಕ್ಷ ವೀಕ್ಷಣೆ ಗಳಿಸಿದೆ. ಇದರಲ್ಲಿ ನಟಿ  ತಮನ್ನಾ ಡಾನ್ಸ್​ ಅಂತೂ ಹಲವರಿಗೆ ಹುಚ್ಚೇ ಹಿಡಿಸಿದೆ.  ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಬಿಂದಾಸ್ ಆಗಿ ಕುಣಿದು ಮಿಲ್ಕಿ ಬ್ಯೂಟಿ ಫ್ಯಾನ್ಸ್​ ಹೃದಯಕ್ಕೆ ಲಗ್ಗೆ ಇಟ್ಟುಬಿಟ್ಟಿದ್ದಾರೆ. ರೀಲ್ಸ್​ನಲ್ಲಿ ಪ್ರವೀಣರಾದವರ ಪೈಕಿ ಬಹುತೇಕ ಯುವತಿಯರಿಗಂತೂ ಈ ಹಾಡು ಅಚ್ಚುಮೆಚ್ಚಾಗಿದ್ದು, ಸಕತ್​ ಲೈಕ್ಸ್​ ಕೂಡ ಬರುತ್ತಿವೆ. ಒಟ್ಟಿನಲ್ಲಿ ಈ ಡಾನ್ಸ್​ (Dacne) ಇಂಟರ್‌ನೆಟ್‌ನಲ್ಲಿ ಹೊಸ ಕ್ರೇಜ್‌ ಹುಟ್ಟುಹಾಕಿದೆ. 

ಮೈಚಳಿ ಬಿಟ್ಟು ತಮನ್ನಾ ಕುಣಿದಿದ್ದು,  ಯೂಟ್ಯೂಬ್‌ನಲ್ಲಿ (Youtube) ಸೂಪರ್‌ ಹಿಟ್‌ ಆಗಿದೆ.  ನಟಿಯ ಆ ಹಾಡಿನ ವಿಡಿಯೋ ತುಣುಕುಗಳೂ ನೋಡುಗರ ಕಣ್ಣರಳಿಸುತ್ತಿವೆ.   ಇದಾಗಲೇ ಹಲವಾರು ಯುವತಿಯರು ಇದರ ರೀಲ್ಸ್​ ಮಾಡಿ ಶೇರ್​ ಮಾಡಿಕೊಂಡಿದ್ದು, ಸುದ್ದಿಯಾಗುತ್ತಿರುವುದು ಇದೆ. ಆದರೆ ಅವರೆಲ್ಲರಿಗಿಂತಲೂ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಪ್ರಿಯಾಂಕಾ ಶೆಣೈ (Priyanka Shenoy). ಇದಕ್ಕೆ ಕಾರಣವೂ ಇದೆ. ಇವರ ಡಾನ್ಸ್​ ತಮನ್ನಾ ಅವರ ನೃತ್ಯದಷ್ಟೇ ಸೊಗಸಾಗಿ ಮೂಡಿಬಂದಿದ್ದರೆ, ಈ ಡಾನ್ಸ್​ನಲ್ಲಿ ತಮನ್ನಾ  ತೊಟ್ಟಿರುವ ಉಡುಗೆಯನ್ನೇ ಪ್ರಿಯಾಂಕಾ ಅವರು ತೊಟ್ಟಿದ್ದು, ಅದೇ ರೀತಿ ಮೇಕ್​ ಓವರ್​ ಮಾಡಿಕೊಂಡಿದ್ದಾರೆ. ಡಾನ್ಸ್​ ಹಿಂಭಾಗದಲ್ಲಿ ಕಾವಾಲ ಹಾಡಿಗೆ ತಮನ್ನಾ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದು. ಆ ಹೆಜ್ಜೆಗೆ ಸ್ವಲ್ಪವೂ ವ್ಯತ್ಯಾಸವಾಗದಂತೆ ಥೇಟ್​ ಅದೇ ಮಾದರಿಯಲ್ಲಿ ಪ್ರಿಯಾಂಕಾ ಭರ್ಜರಿ ಸ್ಟೆಪ್​ ಹಾಕಿದ್ದಾರೆ.

ಶಿವರಾಜ್‌ಕುಮಾರ್ ಅಭಿನಯದ 'ಜೈಲರ್' ಸಾಂಗ್​ ರಿಲೀಸ್: ತಮನ್ನಾ ಹಾಟ್​ನೆಸ್​ಗೆ ಫ್ಯಾನ್ಸ್​ ಫಿದಾ

ಅಂದಹಾಗೆ ಪ್ರಿಯಾಂಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಅಪಾರ ಫಾಲೋವರ್ಸ್​ (Followers) ಹೊಂದಿದ್ದಾರೆ.  ಇವರು ಕೇವಲ ಅದ್ಭುತ ನೃತ್ಯಗಾತಿ ಮಾತ್ರವಲ್ಲದೇ 2017 ರಲ್ಲಿ ಮಿಸೆಸ್ ಇಂಡಿಯಾ ಕೇರಳ ಕೂಡ ಆಗಿದ್ದವರು.  ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಇವರು ಒಂದು ವಾರದ ಹಿಂದೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ 50 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಎರಡು ದಶಲಕ್ಷಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ.  

ಅಂದಹಾಗೆ,  ಕಾವಾಲ ಹಾಡು ಟ್ರೈಬಲ್‌ ಥೀಮ್‌ನಲ್ಲಿ  ತಯಾರಾಗಿದ್ದು ತಮನ್ನಾ ಭಾಟಿಯಾ ಹಾಟ್​ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.  ರಜನಿಕಾಂತ್‌ ಕೂಡಾ ಈ ಹಾಡಿನಲ್ಲಿ ಸಾಲ್ಟ್‌ ಪೆಪ್ಪರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ ಸಿನಿ ಪಯಣದಲ್ಲಿ  ಜೈಲರ್ ಚಿತ್ರ ವಿಶೇಷವಾಗಿದೆ. ಆದ್ದರಿಂದ ಈ ಸಿನಿಮಾದ ಮೇಲೆ ಅವರ ನಿರೀಕ್ಷೆ ಕೂಡ ಹೆಚ್ಚಾಗಿದೆ. ತಮನ್ನಾ ಭಾಟಿಯಾ ಅವರು ಐಟಂ ಸಾಂಗ್​ಗಳಲ್ಲಿ ನಟಿಸಿದ್ದು ಇದೇ ಮೊದಲೇನಲ್ಲ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ‘ಜೋಕೆ ನಾನು ಬಳ್ಳಿಯ ಮಿಂಚು..’ ಹಾಡಿನಲ್ಲಿ ತಮನ್ನಾ ಸ್ಟೆಪ್​ ಹಾಕಿದ ಪರಿಗೆ ಪಡ್ಡೆ ಹುಡುಗರು ಫಿದಾ ಆಗಿದ್ದರು. ತೆಲುಗು, ತಮಿಳಿನ ಸಿನಿಮಾಗಳಲ್ಲೂ ಅವರು ಐಟಂ ಡ್ಯಾನ್ಸ್​ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಜೈಲರ್​’ ಚಿತ್ರದಲ್ಲಿ ಸ್ಟೆಪ್​  ಹಾಕಿದ್ದಾರೆ.

Tamannah Bhatia: ‘ಕಾವಾಲಾ’ ಹಾಡಿನ ಹವಾ; ಏರ್​ಪೋರ್ಟ್​​ನಲ್ಲೇ ಡ್ಯಾನ್ಸ್​ ಮಾಡಿದ ಮಿಲ್ಕಿ ಬ್ಯೂಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?