ಸರಳ ವಿವಾಹ ಮಾಡ್ಕೊಂಡು ಸರ್ಕಾರಕ್ಕೆ ಕೂಡಿಟ್ಟ ಹಣ ನೀಡಿದ ನಟ!

By Suvarna NewsFirst Published Apr 27, 2020, 10:49 AM IST
Highlights

ಮಾಲಿವುಡ್‌ ನಟ ಮಣಿಕಂದನ್‌ ಹಾಗೂ ಗೆಳತಿ ಅಂಜಲಿ ಸರಳ ವಿವಾಹಕ್ಕೆ ಸೈ ಎಂದಿದ್ದಾರೆ. ಆಡಂಬರ ಇಲ್ಲದ ಮದುವೆ ಹೇಗಿತ್ತು ನೋಡಿ....

ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟ ಮಣಿಕಂದನ್ ಹಾಗೂ ಗೆಳತಿ ಅಂಜಲಿ ಕೇರಳದ ತ್ರಿಪುರಾಂತರದ ದೇವಸ್ಥಾನದಲ್ಲಿ ಆಡಂಬರವಿಲ್ಲದೆ, ಹೆಚ್ಚಿನ ಜನರಿಲ್ಲದೆ, ಸರಳ ರೀತಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಣಿಕಂದನ್‌ ಹಾಗೂ ಅಂಜಲಿ ಕುಟುಂಬ ಸರ್ಕಾರದ ಲಾಕ್‌ಡೌನ್ ನಿಯಮವನ್ನು ಪಾಲಿಸಿ ಸೋಷಿಯಲ್  ಡಿಸ್ಟೆನ್ಸಿಂಗ್ ಫಾಲೋ ಮಾಡಿದ್ದಾರೆ. ಮದುವೆ ದಿನಾಂಕ ಹಾಗೂ ವ್ಯವಸ್ಥೆಗಳನ್ನು 6 ತಿಂಗಳ ಮುನ್ನವೇ ಮಾಡಿಕೊಂಡಿದ್ದ ಕಾರಣ, ಮುಂದೂಡಲು ಇಷ್ಟವಿಲ್ಲದೇ ನಿಗದಿತ ಮುಹೂರ್ತದಲ್ಲಿ ಅತ್ಯಂತ ಸರಳವಾಗಿ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ ಈ ಜೋಡಿ. 

ನಿಖಿಲ್‌-ರೇವತಿ ಮದುವೆಯಲ್ಲಿ ಸೆರೆ ಹಿಡಿದ ಆ ಒಂದು ಫೋಟೋದಿಂದ ಸೃಷ್ಟಿ ಆಯ್ತು ಗೊಂದಲ?

'ಕೋವಿಡ್‌-19 ಬೇಗ ದೂರವಾಗುತ್ತದೆ. ನಮ್ಮ ಮದುವೆಗೆಂದು ಕೂಡಿಟ್ಟ ಹಣವನ್ನು ನಾನು ಸರ್ಕಾರದ ಕೊರೋನಾ ವೈರಸ್ ರಿಲೀಫ್‌ ಫಂಡ್‌ಗೆ ನೀಡುತ್ತಿದ್ದೇವೆ. ನಮ್ಮ ಮದುವೆ ಆಡಂಬರದಿಂದ ನಡೆಯಲಿಲ್ಲ ಎಂದು ನಮಗೇನೂ ಬೇಸರವಿಲ್ಲ,' ಎಂದು ಮಣಿಕಂದನ್ ಹೇಳಿದ್ದಾರೆ.

ಹೌದು! ನಟನಾದ ಕಾರಣ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಿ ಅದ್ಧೂರಿಯಾಗಿ ಮದುವೆಯಾಗ ಬೇಕು ಎಂದುಕೊಂಡಿದ ಜೋಡಿ, ಕೆಲವರ ಸಮ್ಮುಖದಲ್ಲಿ ದೇವಾಲಯದಲ್ಲಿ ಮದುವೆಯಾಗಿದೆ. ಕೂಡಿಟ್ಟ ಹಣವನ್ನು ಸರ್ಕಾರ ಕೊರೋನಾ ರಿಲೀಫ್ ಫಂಡ್‌ಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಆ ಮೂಲಕ ಪ್ರತಿಯೊಬ್ಬರಿಗೆ ಈ ನಟನ ನಡೆ ಮಾದರಿಯಾಗಿದೆ. 

ಪ್ರೇಮ ಆರಂಭವಾಗಿದ್ದು ಎಲ್ಲಿ?
ಒಂದೂವರೆ ವರ್ಷಗಳ ಹಿಂದೆ ಊರ ಹಬ್ಬದಲ್ಲಿ ಮಣಿಕಂದನ್‌ ಹಾಗೂ ಆಂಜಲಿ ಒಬ್ಬರನ್ನೊಬ್ಬರ ನೋಡಿ ಪ್ರೀತಿಯಲ್ಲಿ ಬಿದ್ದರು. ಆ ನಂತರ ಗುರು ಹಿರಿಯರನ್ನು ಒಪ್ಪಿಸಿ, ಹಸೆಮಣೆ ಏರಲು ಮುಂದಾದರು. 'ನಮ್ಮ ಮದುವೆ ಕಾರ್ಯಕ್ರಮದಲ್ಲಿ ಆತ್ಮೀಯ ಬಂಧುಗಳು, ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು. ಈ ನಿರ್ಧಾರಕ್ಕೆ ಅಂಜಲಿ ಕುಟುಂಬದವರಿಗೆ ಒಪ್ಪಿಗೆ ಇತ್ತು. ಪ್ರಜ್ಞಾವಂತ ನಾಗರಿಕರಾಗಿ ಮದುವೆಯನ್ನು ಸರ್ಕಾರದ ಅನುಮತಿ ಪಡೆದು ಸರಳವಾಗಿ ಆಗಿದ್ದೇವೆ. ಎಲ್ಲ ಸುರಕ್ಷಿತ ಕ್ರಮಗಳನ್ನೂ ಅನುಸರಿಸಿದ್ದೇವೆ,' ಎಂದು ಮಣಿಕಂದನ್‌ ಹೇಳಿದ್ದಾರೆ.

2016ರಲ್ಲಿ ಮಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ಮಣಿಕಂದನ್ ಮೊದಲ ಸಿನಿಮಾ 'ಕಮ್ಮಿಟಿಪಾದ'ದಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.

ಕನ್ನಡ ಚಿತ್ರರಂಗದ ನಟ ಕಮ್‌ ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಹಾಗೂ ರೇವತಿ ಜೋಡಿ ಮದುವೆ ದಿನಾಂಕ ಹಾಗೂ ಸಿದ್ಧತೆ ನಿಗದಿಯಾಗಿದ್ದ ಕಾರಣ ಮದುವೆಯನ್ನು ಏಪ್ರಿಲ್‌17ರಂದು ರಾಮನಗರದ ಫಾರ್ಮ್ ಹೌಸ್‌ನಲ್ಲಿ, ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಡೆಸಲಾಯಿತು. ಆದರೆ, ಲಾಕ್‌ಡೌನ್ ನಿಯಮ ಪಾಲಿಸಿಲ್ಲ ಎಂಬ ದೂರು ಕೇಳಿ ಬರುತ್ತಿದ್ದು , ಈ ಸಂಬಂಧ ವರದಿ ಸಲ್ಲಿಸುವಂತೆ ಹೈ ಕೋರ್ಟ್ ಸರಕಾರಕ್ಕೆ ಸೂಚಿಸಿದೆ. 

ಅಷ್ಟೇ ಅಲ್ಲದೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್  ಏಪ್ರಿಲ್‌ 10ರಂದು ತಮ್ಮ ಹುಟ್ಟೂರಿನಲ್ಲಿ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಲಾಕ್‌ಡೌನ್ ನಡುವೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿ ಸಂತೋಷ್

ಈ ಕೊರೋನಾ ವಿಶ್ವಕ್ಕೇ ವಕ್ಕರಿಸಿದ್ದು, ಎಲ್ಲರನ್ನೂ ಕಾಡುತ್ತಿದೆ. ದೇಶದಲ್ಲಿ ಯುದ್ಧ ರೀತಿಯ ಪರಿಸ್ಥಿತಿ ಉದ್ಭವವಾಗಿದ್ದು, ಪ್ರತಿಯೊಬ್ಬ ಪ್ರಜೆಯೂ ಇಲ್ಲಿ ಯೋಧನಂತೆ ಹೋರಾಡುವುದು ಅನಿವಾರ್ಯವಾಗಿದೆ. ಆ ಮೂಲಕ ಪ್ರತಿಯೊಬ್ಬರೂ ಮನೆಯಲ್ಲಿಯೇ ಇದ್ದು, ಅಗತ್ಯ ಸಾಮಾಜಿಕ ಅಂತರ ಕಾಯ್ದುಕೊಂಡು, ಈ ರೋಗವನ್ನು ತೊಲಗಿಸುವ ಅನಿವಾರ್ಯತೆ ಇದೆ. ಅದರಲ್ಲಿಯೂ ಯಾವುದೇ ವಿಶೇಷ ಸಮಾರಂಭಗಳನ್ನು ನಡೆಸದೇ, ಹೆಚ್ಚು ಜನರು ಒಟ್ಟಾಗದಂತೆ ನಿಗಾ ವಹಿಸಿ, ಈ ಮಹಾಮಾರಿಯನ್ನು ಓಡಿಸುವ ಹೊಣೆ ಎಲ್ಲರ ಮೇಲಿದೆ.

click me!