Mahesh Babu Tests Positive Covid: ಮಹೇಶ್‌ ಬಾಬುಗೆ ಸೋಂಕು, ಪತ್ರ ಬರೆದ ನಟ

By Suvarna News  |  First Published Jan 7, 2022, 1:04 AM IST

* ಟಾಲಿವುಡ್ ನಟ ಮಹೇಶ್ ಬಾಬುಗೆ ಕೊರೋನಾ
* ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೊರೋನಾ
* ಎಚ್ಚರಿಕೆ ಸೂತ್ರ ಪಾಲಿಸಲು ಮನವಿ


ಹೈದರಾಬಾದ್(ಜ. 07)  ಕೊರೋನಾ (Coronavirus) ವ್ಯಾಪಿಸುತ್ತಿರುವುದು ಎಲ್ಲರಿಗೆ ಗೊತ್ತಿರುವ ಸಂಗತಿ. ಟಾಲಿವುಡ್ (Tollywood) ನಟ ಮಹೇಶ್ ಬಾಬು (Mahesh Babu) ಅವರಿಗೂ ಸೋಂಕು ತಗುಲಿದೆ. ಮಹೇಶ್ ಬಾಬು ಸೋಶಿಯಲ್(Social Media)  ಮೀಡಿಯಾ ಮೂಲಕ ವಿಚಾರ ತಿಳಿಸಿದ್ದು ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.  ಮಹೇಶ್ ಬಾಬು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಮುಂಜಾಗೃತಾ ಕ್ರಮ ಅನುಸರಿಸಿದರೂ ನನಗೆ ಕೊರೋನಾ ತಗುಲಿದೆ ಎಂದಿದ್ದಾರೆ.  ವೈದ್ಯರ ಮಾರ್ಗದರ್ಶನ ಪಾಲಿಸುತ್ತಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ ಎಂದಿದ್ದಾರೆ.

Tap to resize

Latest Videos

ಕೊರೋನಾ ಲಸಿಕೆ ಅಪಾಯ ಕಡಿಮೆ ಮಾಡುತ್ತದೆ. ದಯವಿಟ್ಟು ನಿಯಮ ಪಾಲಿಸಿ, ಮನೆಯಲ್ಲೇ ಸುರಕ್ಷಿತವಾಗಿರಿ.. ಅಗತ್ಯ ಇದ್ದರೆ ಮಾತ್ರ ಹೊರಗೆ ಬನ್ನಿ ಎಂದು ಕೇಳಿಕೊಂಡಿದ್ದಾರೆ.  ನಟ ಮಹೇಶ್ ಬಾಬು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನುವ ಮಾಹಿತಿ ಇದೆ.  ಕೊರೋನಾ ಕಾರಣಕ್ಕೆ ಸಿನಿಮಾ ಜಗತ್ತು ಸಹ ನಿಧಾನವಾಗಿದೆ.

ಬೆಂಗಳೂರು ಕೊರೋನಾ ಹಾಟ್ ಸ್ಪಾಟ್

ರಾಜ್ಯದಲ್ಲಿ 2 ವಾರ ವೀಕೆಂಡ್ ಕರ್ಫ್ಯೂ : ರಾಜ್ಯದಲ್ಲಿ ಕೊರೋನಾ ವೈರಸ್(Coronavrius) ಪ್ರಮಾಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ಬೆಂಗಳೂರಲ್ಲಿ ಮಾತ್ರ ಶಾಲೆಗಳನ್ನ ಎರಡು ವಾರ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ.

pic.twitter.com/PN7oR9GrUT

— Mahesh Babu (@urstrulyMahesh)

ಇಂದು(ಮಂಗಳವಾರ) ತಜ್ಞರ ಜೊತೆಗಿನ ಸಭೆ ಬಳಿಕ ಸಚಿವರಾದ ಅಶೋಕ್, ಸುಧಾಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು,  ಇದೇ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವೀಕೆಂಡ್ ಕರ್ಫ್ಯೂ (weekend Curfew)  ಇರಲಿದೆ ಎಂದು  ಸ್ಪಷ್ಟಪಡಿಸಿದರು. 

ಕರ್ನಾಟಕದಾದ್ಯಂತ ಎರಡು ವಾರ ವೀಕೆಂಡ್ ಜಾರಿಯಲ್ಲಿರಲಿದೆ. ಇನ್ನು ಬೆಂಗಳೂರಲ್ಲಿ ಮಾತ್ರ ಎರಡು ವಾರ ಶಾಲೆ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು. 
ಬೆಂಗಳೂರಿನಲ್ಲಿ ಮುಂದಿನ ಎರಡು ವಾರಗಳು (ಜನವರಿ 6ರಿಂದ) 10 ಮತ್ತು 12ನೇ ತರಗತಿ ಹೊರತು ಪಡಿಸಿ ಉಳಿದ ಎಲ್ಲ ತರಗತಿಗಳನ್ನೂ ಬಂದ್ ಮಾಡಿ ಆನ್‌ಲೈನ್‌ ಮೂಲಕ ನಡೆಸಲು ನಿರ್ಧರಿಸಲಾಗಿದೆ.

ನಾವು ತೆಗೆದುಕೊಂಡ ತೀರ್ಮಾನಗಳನ್ನು ವೈಜ್ಞಾನಿವಾಗಿ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ, ಅಕ್ಕಪಕ್ಕದ ಮಹಾರಾಷ್ಟ್ರ, ಕೇರಳ, ತಮಿಳುನಾಡು ಗಳಲ್ಲಿ ತೆಗೆದುಕೊಂಡಿರುವ ತೀರ್ಮಾನಗಳನ್ನು ಪರಾಮರ್ಶಿಸಿದೆವು. ಒಮಿಕ್ರಾನ್ ಸೋಂಕು ಕೊವಿಡ್​ಗಿಂತ 5 ಪಟ್ಟು ಜಾಸ್ತಿ ಆಗ್ತಿದೆ ಅಂತ ತಜ್ಞರು ವರದಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಪಸ್ತುತ 3048 ಮಂದಿಗೆ ಸೋಂಕು ಬಂದಿದೆ. 147 ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ನಮ್ಮ ರಾಜ್ಯದಲ್ಲಿ ಪಾಸಿಟಿವ್ ಪ್ರಕರಣ ಶೇ 3ಕ್ಕಿಂತ ಹೆಚ್ಚಾಗುತ್ತಿದೆ. 20ರಿಂದ 50 ವರ್ಷದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ ಎಂದು ಆರ್. ಅಶೋಕ್ ತಿಳಿಸಿದ್ದಾರೆ.

ಕಳೆದ 3 ದಿನಗಳಿಂದ ಕೊವಿಡ್ ಎರಡು ಮೂರು ದಿನಗಳಲ್ಲಿ ಡಬಲ್ ಆಗ್ತಿದೆ. 3ರಿಂದ 6, 6ರಿಂದ 9 ಸಾವಿರ ಆಗ್ತಿದೆ. ಐದಾರು ದಿನಗಳಲ್ಲಿ 10 ಸಾವಿರ ದಾಟುವ ಅಪಾಯ ಕಂಡುಬರುತ್ತಿದೆ. ಮಹಾರಾಷ್ಟ್ರದಲ್ಲಿ ಈಗಾಗಲೇ 10 ಸಾವಿರ ದಾಟಿದೆ ಎಂದು ಹೇಳಿದ್ದಾರೆ. ಶೇ 80ರಿಂದ 85ರಷ್ಟು ಸೋಂಕು ಮೆಟ್ರೊ ನಗರಗಳಲ್ಲಿ ಕಾಣಿಸಿಕೊಳ್ತಿದೆ. ದೇಶದೆಲ್ಲೆಡೆ ಇದೇ ವಿದ್ಯಮಾನ ವರದಿಯಾಗಿದೆ. ಅಮೆರಿಕದಲ್ಲಿಯೂ ಪ್ರಸ್ತುತ 5 ಕೋಟಿಗೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಪರಿಸ್ಥಿತಿ ನಿರ್ವಹಿಸಲು ಬೆಂಗಳೂರಿಗೆ ಒಂದು, ರಾಜ್ಯದ ಇತರೆಡೆಗೆ ಮತ್ತೊಂದು ನಿಯಮಾವಳಿ ರೂಪಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

 

 

 

click me!