ನಟಿ ಕೈರಾ ಅಡ್ವಾಣಿ ತಮ್ಮ ಗುರುತು ದೃಢಪಡಿಸಲು ವಿಮಾನ ನಿಲ್ದಾಣದಲ್ಲಿ ತನ್ನ ಮಾಸ್ಕ್ ತೆಗೆಯಬೇಕಾಯ್ತು. ಅರೆ ಬಾಲಿವುಡ್ ನಟಿಯನ್ನೇ ಗುರುತಿಸಲಿಲ್ವಾ ಭದ್ರತಾ ಸಿಬ್ಬಂದಿ.
ಭದ್ರತಾ ಸಿಬ್ಬಂದಿ ನಟಿಯ ಮಾಸ್ಕ್ ತೆಗೆಸೋ ವೀಡಿಯೊ ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿಯ ದೃಶ್ಯವನ್ನು ನೆನಪಿಸಿದೆ. ಕೈರಾ ಹೋಟೆಲ್ ಸಿಬ್ಬಂದಿ ಪಾತ್ರವನ್ನು ನಿರ್ವಹಿಸಿದ್ದರು. ಆಕೆ ಕ್ರಿಕೆಟರ್ ಧೋನಿಯನ್ನೇ ಗುರುತಿಸುವುದಿಲ್ಲ. ಧೋನಿ ಕೋಣೆಗೆ ಹೋಗಬೇಕಾದರೆ ತನ್ನ ಗುರುತನ್ನು ಸಾಬೀತುಪಡಿಸುವಂತೆ ಕೇಳಿಕೊಂಡಿರುವ ದೃಶ್ಯವದು.
ಕುಟುಂಬದ ಮರ್ಯಾದೆ ಹೋಯ್ತು ಎಂದ ಶಿಲ್ಪಾ: ಸಿನಿಮಾ, ಜಾಹೀರಾತು ಆಫರ್ ಕೂಡಾ ಕ್ಯಾನ್ಸಲ್
ಇದೀಗ ರಿಯಲ್‌ನಲ್ಲಿ ಇಂತದ್ದೇ ಘಟನೆ ನಡೆದಿದೆ. ಕೈರಾ ವಿಮಾನ ನಿಲ್ದಾಣದಲ್ಲಿದ್ದಾಗ ಸಿಐಎಸ್ಎಫ್ ಅಧಿಕಾರಿಯೊಬ್ಬರು ನಟಿಯ ಗುರುತನ್ನು ದೃಢೀಕರಿಸಲು ಮಾಸ್ಕ್ ತೆಗೆದುಹಾಕುವಂತೆ ಕೇಳಿದ್ದಾರೆ. ನಟಿ ಇದನ್ನು ಅನುಸರಿಸಿದ್ದಾರೆ ಕೂಡಾ.