ಮಗನ ಮೊದಲ ಫೋಟೋ ರಿವೀಲ್ ಮಾಡಿದ ಕರೀನಾ: ಮಹಿಳಾ ದಿನ ಕೊಟ್ರು ಸೂಪರ್ ಮೆಸೇಜ್

Published : Mar 08, 2021, 02:20 PM IST
ಮಗನ ಮೊದಲ ಫೋಟೋ ರಿವೀಲ್ ಮಾಡಿದ ಕರೀನಾ: ಮಹಿಳಾ ದಿನ ಕೊಟ್ರು ಸೂಪರ್ ಮೆಸೇಜ್

ಸಾರಾಂಶ

ಪುಟ್ಟ ಕಂದನ ತಬ್ಬಿ ಹಿಡಿದ ಬಾಲಿವುಡ್ ಬೇಬೋ | ಮಹಿಳಾ ದಿನಾಚರಣೆ ದಿನ ಕರೀನಾ ಕೊಟ್ಟ ಸ್ಪೆಷಲ್ ಮೆಸೇಜ್

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮಹಿಳಾ ದಿನಾಚರಣೆಯ ದಿನವೇ ತನ್ನ ಪುಟ್ಟ ಮಗುವಿನ ಜೊತೆ ಮೊದಲ ಫೋಟೋ ಶೇರ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಎರಡನೇ ಮಗುವನ್ನು ಸ್ವಾಗತಿಸಿದ ಸೈಫ್-ಕರೀನಾ ದಂಪತಿ ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ. ಮಗುವನ್ನು ಎದೆಗಪ್ಪಿಹಿಡಿದ ಫೋಟೋ ಶೇರ್ ಮಾಡಿದ ನಟಿ ಅದರ ಜೊತೆ ಸ್ಪೆಷಲ್ ಮೆಸೇಜ್ ಒಂದನ್ನು ಕೊಟ್ಟಿದ್ದಾರೆ.

ಬಾಲಿವುಡ್‌ನ ಯಂಗ್‌ ಮತ್ತು ಪ್ರಾಮಿಸ್ಸಿಂಗ್‌ ನಟಿಯರಿವರು!

ಮಗುವಿನ ಮುಖವನ್ನು ಸಂಪೂರ್ಣವಾಗಿ ತೋರಿಸಿಲ್ಲ. ಆದ್ರೂ ಫ್ಯಾನ್ಸ್ ಮಾತ್ರ ಫುಲ್ ಖುಷ್ ಆಗಿದ್ದಾರೆ. ಮಹಿಳೆ ಮಾಡಲಾಗದ್ದು ಏನೂ ಇಲ್ಲ. ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ನಟಿ ಬರೆದಿದ್ದಾರೆ.

ಫೆಬ್ರವರಿ 21ರಂದು ಸೈಫೀನಾ ಎರಡನೇ ಮಗುವನ್ನು ಸ್ವಾಗತಿಸಿದ್ದರು. ಇವರಿಗೆ 4 ವರ್ಷದ ಮಗ ತೈಮೂರ್ ಕೂಡಾ ಇದ್ದಾನೆ. ನಟಿ ಬ್ರೀಚ್ ಕ್ಯಾಂಟಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಫ್ಲೈಟ್ ಟಿಕೆಟ್ ಇಲ್ಲ, ಪಾಸ್‌ಪೋರ್ಟ್ ಬೇಕಿಲ್ಲ: ಆದರೂ ವಿಶ್ವ ಸುತ್ತಿಸಿಬಿಡುತ್ತವೆ ಈ 5 ಸಿನಿಮಾಗಳು!
ಪ್ರಭಾಸ್ ಖಾನ್ಸಾರ್‌ಗೆ ಮತ್ತೆ ವಾಪಸ್ ಆದ ಪ್ರಶಾಂತ್ ನೀಲ್: ‘ಸಲಾರ್ 2’ನಲ್ಲಿ ಏನಿರಲಿದೆ?