
2012ರಲ್ಲಿ ವಿಜಯ್ ಅಭಿನಯದ ಸೂಪರ್ ಹಿಟ್ ತಮಿಳು ಸಿನಿಮಾ 'ತುಪಾಕಿ' ಈಗ ಮತ್ತೆ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ನಟಿಯಾಗಿ ಅಭಿನಯಿಸಿದ ಅಕ್ಷರಾ ಗೌಡ. ಕನ್ನಡತಿಯಾದರೂ ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಅಕ್ಷರಾ ಮೊದಲ ಬಾರಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಅಶ್ಲೀಲ ಪದ ಬಳಸಿ ರಜನಿಕಾಂತ್-ವಿಜಯ್ ವಿರುದ್ಧ ಗಂಭೀರ ಆರೋಪ ಮಾಡಿದ ಕಾಲಿವುಡ್ ನಟಿ!
ಚಿತ್ರಕತೆ ಬೇರೆ, ಪಾತ್ರ ಬೇರೆ:
ನಟಿ ಅಕ್ಷರಾಳನ್ನು ಚಿತ್ರತಂಡ ಕತೆ ಹಿಡಿದು ಸಂಪರ್ಕಿಸಿದ್ದಾಗ, ಇವರ ಪಾತ್ರ ನಟಿ ಕಾಜಲ್ ಅಗರ್ವಾಲ್ ಗೆಳತಿಯ ಪಾತ್ರವಾಗಿತ್ತು. ಚಿತ್ರೀಕರಣ ಆರಂಭಿಸಿದ ನಂತರ ಪಾತ್ರದಲ್ಲಿ ಬದಲಾವಣೆ ಮಾಡಲಾಗಿಯಿತಂತೆ. ಎ.ಆರ್ ಮುರುಗದಾಸ್ ನಿರ್ದೇಶಿಸುತ್ತಿರುವ ಕಾರಣ ನಾನು ನಟಿಸಬೇಕೋ, ಬೇಡವೋ ಎಂದು ತುಂಬಾ ಯೋಚಿಸಿದ್ದರಂತೆ ಅಕ್ಷರಾ. ಕಥೆ ಒಪ್ಪಿಕೊಂಡ ನಂತರ ಬದಲಾವಣೆ ಮಾಡಿದ್ದರೂ, ಒಪ್ಪಂದದಿಂದ ಹೊರ ಬರಲು ಸಾಧ್ಯವಾಗಿರಲಿಲ್ಲ. ತುಪಾಕಿ ಸಿನಿಮಾ ಹಿಟ್ ಆದ ಕಾರಣ ಪ್ರತಿ ಕಲಾವಿದರಿಗೂ ಈ ಚಿತ್ರ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ನೀಡಿತ್ತು.
ಮಾಡೆಲ್ ಕಮ್ ನಟಿಯಾಗಿರುವ ಅಕ್ಷರಾಗೆ ನಂತರ ತಮಿಳು ಚಿತ್ರರಂಗದಲ್ಲಿ ದಿನೆ ದಿನೇ ಆಫರ್‌ಗಳು ಕಡಿಮೆಯಾಗುತ್ತಾ ಬಂದವು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅಕ್ಷರಾ ಗೌಡ ತಮ್ಮ ದಿನ ಕೆಲಸಗಳ ಬಗ್ಗೆ ಲಾಕ್‌ಡೌನ್‌ನಲ್ಲಿ ಮಾಡುತ್ತಿರುವ ವರ್ಕೌಟ್‌ಗಳ ಬಗ್ಗೆ ಫೋಟೋ, ವೀಡಿಯೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ತ್ರಿವಿಕ್ರಮ್ ಅಭಿನಯದ 'ತ್ರಿವಿಕ್ರಮ' ಸಿನಿಮಾದಲ್ಲಿ ಅಕ್ಷರಾ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ತಮಿಳು 'ಸೂರ್ಪನಗೈ' ಸಿನಿಮಾದಲ್ಲೂ ನಟಿಸಿ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.