ಹೆಂಡ್ತಿಗೆ 40 ವರ್ಷವಾದರೆ ಗಂಡ ಮತ್ತೊಂದು ಮದ್ವೆಯಾಗ್ಬಹುದು, ಪಾಕ್ ನಟಿ ಹೇಳಿಕೆಗೆ ಹೆಣ್ ಹೈಕ್ಳು ಶಾಕ್

Published : Apr 29, 2026, 03:27 PM IST
Shamin Khan

ಸಾರಾಂಶ

Second Marriage : ಗಂಡ ಬೇರೆ ಹುಡುಗಿನ ವಾರೆಗಣ್ಣಲ್ಲಿ ನೋಡಿದ್ರೂ ಕೋಪ ನೆತ್ತಿಗೇರುತ್ತೆ. ಆದ್ರೆ ಈ ನಟಿ ಪುರುಷರು ಇನ್ನೊಂದು ಮದುವೆ ಆಗ್ಬಹುದು. ಅದಕ್ಕೆ ನನ್ನ ಒಪ್ಪಿಗೆ ಇದೆ ಅಂತಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಆಕೆ ಹೇಳಿಕೆ ವೈರಲ್ ಆಗಿದೆ. 

ಜೀವನಪೂರ್ತಿ ಜೊತೆಗಿರ್ತೇವೆ ಅಂತ ಪ್ರಮಾಣ ಮಾಡಿ ಮದುವೆ ಆಗ್ತಾರೆ. ಮದುವೆ ಆದ್ಮೇಲೆ ಇನ್ನೊಂದು ಹುಡುಗಿ ಜೊತೆ ಪ್ರೀತಿ ಶುರು ಮಾಡಿ ಆಕೆಯನ್ನೂ ಮದುವೆಯಾಗಿ ಮನೆಗೆ ಕರೆತಂದ್ರೆ ಮೊದಲ ಹೆಂಡತಿ ಜೀವನ ಬೀದಿಗೆ ಬರುತ್ತೆ. ಮದುವೆ, ನಂಬಿಕೆಯಲ್ಲಿ ಮಹಾ ಮೋಸವಾಗುತ್ತೆ. ಬಹುತೇಕ ಯಾವುದೇ ಮಹಿಳೆ ಗಂಡನ ಎರಡನೇ ಮದುವೆಯನ್ನು ಒಪ್ಪಿಕೊಳ್ಳೋದಿಲ್ಲ. ಆದ್ರೆ ಮದುವೆಗೆ ಸಂಬಂಧಿಸಿದಂತೆ ಪಾಕಿಸ್ತಾನಿ ನಟಿ ಶಮಿನ್ ಖಾನ್ ಹೇಳಿಕೆ ಅಚ್ಚರಿ ಮೂಡಿಸಿದೆ. ಒಬ್ಬ ಪುರುಷ ಎರಡು ಮದುವೆ ಆಗ್ಬಹುದು ಅಂತ ನಟಿ ಹೇಳಿದ್ದಾರೆ. ನಟಿ ಶಮಿನ್ ಖಾನ್ ಪ್ರಕಾರ ಎರಡನೇ ಮದುವೆ ಆಗೋದ್ರಲ್ಲಿ ಯಾವುದೇ ತಪ್ಪಿಲ್ಲವಂತೆ. ಆದ್ರೆ ಶಮಿನ್ ಖಾನ್ ಹೇಳಿಕೆ ಎಲ್ಲರ ಕೋಪಕ್ಕೆ ಕಾರಣವಾಗಿದ್ದು ಸುಳ್ಳಲ್ಲ.

ಪತ್ನಿಗೆ 40 ವರ್ಷವಾದ್ಮೇಲೆ ಇನ್ನೊಂದು ಮದುವೆ ಆಗ್ಬಹುದು! 

ಪಾಡ್ ಕ್ಯಾಸ್ಟ್ ನಲ್ಲಿ ಪಾಕಿಸ್ತಾನಿ ನಟಿ ಶಮಿನ್ ಖಾನ್ ಗೆ ಎರಡನೇ ಮದುವೆ ಬಗ್ಗೆ ಕೇಳಲಾಗಿದೆ. ಅದಕ್ಕೆ ಉತ್ತರಿಸಿದ ಶಮಿನ್ ಖಾನ್, ಮೊದಲ ಹೆಂಡತಿಯನ್ನು ಬಿಡಬಾರದು. ಆಕೆ ವಂಶಾವಳಿಯನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕೆ ಸಹಾಯ ಮಾಡ್ತಾಳೆ. ಆದ್ರಿಂದ ಮೊದಲ ಹೆಂಡತಿಯನ್ನು ಬಿಡುವುದು ತಪ್ಪು ಅಂತ ಶಮಿನಾ ಹೇಳಿದ್ದಾರೆ. ಮಾತು ಮುಂದುವರೆಸಿದ ಆಂಕರ್, ಹಾಗಿದ್ರೆ ಮರುಮದುವೆಗೆ ಒಪ್ಪಿಗೆ ಇದ್ಯಾ ಅಂತ ಕೇಳಿದ್ದಾರೆ. ಅದಕ್ಕೆ ಶಮಿನ್ ಖಾನ್, ಒಬ್ಬ ಮಹಿಳೆ 40 ವರ್ಷಕ್ಕಿಂತ ಮೇಲ್ಪಟ್ಟವಳಾಗಿದ್ದರೆ ಮತ್ತು ಅವಳ ಪತಿ ಇನ್ನೂ ಸಂಬಂಧವನ್ನು ಅರ್ಥಮಾಡಿಕೊಳ್ಳದಿದ್ದರೆ, ತನ್ನ ಹೆಂಡತಿಯೊಂದಿಗೆ ಅತೃಪ್ತನಾಗಿದ್ದರೆ ಅವನು ಮರುಮದುವೆಯಾಗಬೇಕೆಂದು ನಾನು ಭಾವಿಸ್ತೇನೆ ಎಂದಿದ್ದಾರೆ. ಇದ್ರಲ್ಲಿ ಯಾವುದೇ ತಪ್ಪಿಲ್ಲ. ಆದ್ರೆ ಪುರುಷರು ತಮ್ಮ ಮೊದಲ ಹೆಂಡತಿಯಿಂದ ಅನುಮತಿ ಪಡೆದ ನಂತರ ಮರುಮದುವೆಯಾಗಬಹುದು ಎಂದು ಶಮಿನ್ ಖಾನ್ ಹೇಳಿದ್ದಾರೆ. ಆದ್ರೆ ವಿವಾಹೇತರ ಸಂಬಂಧವನ್ನು ನಾನು ಒಪ್ಪುವುದಿಲ್ಲ ಅಂತ ಶಮಿನ್ ಖಾನ್ ಹೇಳಿದ್ದಾರೆ.

ದರ್ಶನ್‌ಗೆ ಮತ್ತೆ ಸಿಗುತ್ತಾ ರಿಲೀಫ್? ಜಾಮೀನಿಗೆ ಅರ್ಜಿ ಸಲ್ಲಿಸ್ತಿರೋದು ಇದು ಎಷ್ಟನೇ ಬಾರಿ

ಶಮಿನ್ ಖಾನ್ ಟ್ರೋಲ್

ಪಾಡ್ಕ್ಯಾಸ್ಟ್ನ ಶಮಿನ್ ಖಾನ್ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ಯಾನ್ಸ್ ಶಮಿನ್ ಖಾನ್ ಅವರನ್ನು ಟೀಕಿಸಿದ್ದಾರೆ. ಮದುವೆ ಮೋಜಿನ ವಿಷ್ಯವಲ್ಲ, ಅದು ಜವಾಬ್ದಾರಿ ಎಂದಿದ್ದಾರೆ. ಮತ್ತೊಬ್ಬರು, ಪುರುಷನನ್ನು ಇಷ್ಟಪಡದಿದ್ದರೆ ಮಹಿಳೆ ಏನು ಮಾಡಬೇಕು? ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, ಇಂಥ ಹೇಳಿಕೆ ನೀಡಿದ ಶಮಿನ್ ಖಾನ್ ಅವರನ್ನು ಜೈಲಿಗೆ ಹಾಕಬೇಕು ಎಂದಿದ್ದಾರೆ.

ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್​ ಉತ್ತರ ಕೇಳಿ ಇದ್ದವರು ಸುಸ್ತು

ಶಮಿನ್ ಖಾನ್ ಯಾರು?

30 ವರ್ಷದ ಶಮಿನ್ ಖಾನ್ ಪಾಕಿಸ್ತಾನಿ ಟಿವಿ ನಟಿ. ಅವರು ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 2019 ರಲ್ಲಿ ಅವರು ಗಮ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಗೋಹರ್-ಎ-ನಯಾಬ್, ಹಿನಾ ಕಿ ಖುಷ್ಬೂ, ಧಡ್ಕನ್, ಭರೋಸಾ ಪ್ಯಾರ್ ತೇರಾ, ಮತ್ತು ಖುದಾ ಔರ್ ಮೊಹಬ್ಬತ್ 3 ನಂತಹ ಟಿವಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
ದರ್ಶನ್‌ಗೆ ಮತ್ತೆ ಸಿಗುತ್ತಾ ರಿಲೀಫ್? ಜಾಮೀನಿಗೆ ಅರ್ಜಿ ಸಲ್ಲಿಸ್ತಿರೋದು ಇದು ಎಷ್ಟನೇ ಬಾರಿ