ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಇನ್ನು ಮುಂದೆ ನಟಿಸುವುದಿಲ್ಲ ಎಂದು ಫ್ಯಾನ್ಸ್ಗೆ ಬಿಗ್ ಶಾಕ್ ಕೊಟ್ಟಿದ್ದಾರೆ ನಟ ಧನುಷ್. ಅವರು ನೀಡಿರುವ ಕಾರಣ ಏನು?
ವೆಂಕಟೇಶ್ ಪ್ರಭು ಕಸ್ತೂರಿ ರಾಜ್ ಎಂದರೆ ಯಾರಿಗೂ ತಿಳಿಯಲಿಕ್ಕಿಲ್ಲ. ಆದರೆ ಕಾಲಿವುಡ್ನ ಸೂಪರ್ಸ್ಟಾರ್ ಧನುಷ್ (Dhanush)ಎಂದರೆ ಎಲ್ಲರಿಗೂ ಅರಿವಾಗುತ್ತದೆ. ಹೌದು. ಧನುಷ್ ಅವರ ಮೊದಲ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜ್. ಅದುಕುಲಂ ಎಂಬ ಚಿತ್ರದ ಮೂಲಕ ಸಕತ್ ಫೇಮಸ್ ಆಗಿದ್ದಾರೆ ಧನುಷ್. ಈ ಚಿತ್ರಕ್ಕಾಗಿ ಅವರಿಗೆ 58ನೇ ನ್ಯಾಷನಲ್ ಫಿಲಂ ಅವಾರ್ಡ್ ಕೂಡ ಲಭಿಸಿದೆ. ಹಾಗೂ ಇವರ 'ವೈ ದಿಸ್ ಕೊಲವರಿ ಡಿ' ಎಂಬ ಹಾಡಿಗೆ ಅಂತಾರಾಷ್ಟ್ರೀಯ ಜನಪ್ರಿಯತೆ ದೊರಕಿದೆ. ಈ ಹಾಡು 100 ಮಿಲಿಯನ್ಗಿಂತ ಹೆಚ್ಚು ಜನರು ಯೂಟ್ಯೂಬಿನಲ್ಲಿ ವಿಕ್ಷಣೆ ಪಡೆದ ಮೊದಲನೆಯ ಭಾರತೀಯ ವೀಡಿಯೊ ಎಂಬ ಹೆಗ್ಗಳಿಕೆ ಗಳಿಸಿದೆ. ಅಸಲಿಗೆ ಧನುಷ್ ಅವರ ಈ ಹಾಡನ್ನು ಅವರ ಪತ್ನಿ ಐಶ್ವರ್ಯ ಧನುಷ್ ರವರು ಸಂಯೋಜಿಸಿದ್ದರು. ಇವರಿಗೆ ಮೂರೂ ನ್ಯಾಷನಲ್ ಫಿಲಂ ಅವಾರ್ಡ್ (National Film Award) ಮತ್ತು ಏಳು ಫಿಲಂಫೇರ್ ಅವಾರ್ಡ್ ಲಭಿಸಿದೆ.
ಇನ್ನು, ಧನುಷ್ ಸಿನಿಮಾಗಳ ಕುರಿತು ಹೇಳುವುದಾದರೆ, ಇವರು ನಟ ಮಾತ್ರಲ್ಲ. ನಿರ್ದೇಶಕ (Director), ನಿರ್ಮಾಪಕ, ಚಿತ್ರಸಾಹಿತಿ ಮತ್ತು ಹಿನ್ನಲೆ ಗಾಯಕ ಕೂಡ. ಕೆಲ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಇವರು ಸೂಪರ್ ಸ್ಟಾರ್ ರಜನಿಕಾಂತ್ ರ ಪುತ್ರಿ ಐಶ್ವರ್ಯರನ್ನು (Aishwarya) ವಿವಾಹವಾಗಿದ್ದಾರೆ. ತಮ್ಮ ನಟನೆಗಾಗಿ ಮತ್ತು ಚಿತ್ರ ನಿರ್ಮಾಣಕ್ಕಾಗಿ ತಲಾ ಎರಡೆರೆಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. 13 ಸೈಮಾ ಪ್ರಶಸ್ತಿ, ಏಳು ಫಿಲ್ಮ್ ಫೇರ್, ಐದು ವಿಕಟನ್ ಮತ್ತು ಐದು ಎಡಿಸನ್ ಪ್ರಶಸ್ತಿ ಪಡೆದಿದ್ದು ಧನುಷ್ ರವರ ಅಭಿನಯಕ್ಕೆ ಸಾಕ್ಷಿ. ಅವರು ಸದ್ಯ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಬಿಜಿ ಇದ್ದಾರೆ. ಸತ್ಯಜ್ಯೋತಿ ಫಿಲ್ಸ್ಮ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾಗೆ ಅರುಣ್ ಮಥೇಶ್ವರನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಬಾಬಾ ರಾಮ್‌ದೇವ್ ಆಗಿಬಿಟ್ರಲ್ಲಾ ಧನುಷ್! ಏನಪ್ಪಾ ವಿಷ್ಯ ಅಂತಿದ್ದಾರೆ ಫ್ಯಾನ್ಸ್
ಇಂತಿಪ್ಪ ಧನುಷ್ ಅವರು, ಫ್ಯಾನ್ಸ್ಗೆ ಬಿಗ್ ಶಾಕ್ (big shock) ಕೊಟ್ಟಿದ್ದಾರೆ. ಅದೇನೆಂದರೆ ಇನ್ಮುಂದೆ ತಾವು ರೊಮ್ಯಾಂಟಿಕ್ ಸೀನ್ನಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಹಿಂದಿ, ತಮಿಳು, ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರೋ ಧನುಷ್, ರೊಮ್ಯಾಂಟಿಕ್ ಚಿತ್ರಗಳಲ್ಲಿಯೂ ಅಷ್ಟೇ ಫೇಮಸ್. ಆದರೆ ಈಗ ಆ ಸೀನ್ ಮಾಡೋದೇ ಇಲ್ಲ ಎಂದಿದ್ದಾರೆ. ಇದಕ್ಕೆ ಕಾರಣ ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದು, ಥಹರೇವಾರಿ ಸಲಹೆಗಳನ್ನು, ಉದಾಹರಣೆಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಧನುಷ್ ಮತ್ತು ಎ ಆರ್ ರೆಹಮಾನ್ ಇನ್‌ಸ್ಟಾಗ್ರಾಂ ಲೈವ್ ಬಂದಿದ್ದರು. 2013ರಲ್ಲಿ ರಿಲೀಸ್ ಆದ ‘ಮರಿಯಾನ್’ ಚಿತ್ರಕ್ಕೆ 10 ವರ್ಷಗಳ ಸಂಭ್ರಮವಾಗಿದ್ದು, ಈ ಖುಷಿಯನ್ನು ಲೈವ್ ಮೂಲಕ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಅವರದ್ದು ರೊಮ್ಯಾಂಟಿಕ್ ಸೀನ್ಗಳೇ ಹೆಚ್ಚು. ಆ ಸಮಯದಲ್ಲಿ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುವಂತೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ನಗುತ್ತಲೇ ಉತ್ತರ ನೀಡಿದ ಧನುಷ್ ‘ನನಗೆ ವಯಸ್ಸಾಯ್ತು, 40 ವರ್ಷವಾಗಿದೆ. ಇನ್ನು ಮುಂದೆ ರೊಮ್ಯಾಂಟಿಕ್ ಸಿನಿಮಾದಲ್ಲಿ ನಾನು ನಟಿಸುವುದಿಲ್ಲ, ಈಗಿನ ಹುಡುಗರು ಅಂತಹ ಸಿನಿಮಾಗಳಲ್ಲಿ ನಟಿಸಲಿ ಎಂದು ಅವರು ಹೇಳಿಬಿಟ್ಟರು. ‘
ಇದಕ್ಕೆ ಕೇಳಿ ಫ್ಯಾನ್ಸ್ಗೆ ನಿರಾಸೆಯಾಗಿದೆ. ನಿಮ್ಮ ಸ್ಟೈಲ್ಗಳನ್ನೇ ನಾವು ಅನುಸರಿಸುತ್ತಿದ್ದೇವೆ, ನಿಮ್ಮ ರೊಮ್ಯಾಂಟಿಕ್ ಸೀನ್ ನಮಗೆ ಇಷ್ಟ. ದಯವಿಟ್ಟು ಹೀಗೆಲ್ಲಾ ಮಾತನಾಡಬೇಡಿ ಎಂದಿದ್ದಾರೆ ಫ್ಯಾನ್ಸ್. ಇತ್ತೀಚೆಗೆ ಧನುಷ್ ಮುಂಬೈ ಏರ್‌ಪೋರ್ಟ್‌ನಲ್ಲಿ (Airport) ಕಾಣಿಸಿಕೊಂಡಿದ್ದರು. ಭುಜದವರೆಗೂ ಕೂದಲು, ಉದ್ದ ಗಡ್ಡ ಬಿಟ್ಟು ಧನುಷ್ ಸಂಪೂರ್ಣ ಲುಕ್ ಬದಲಿಸಿದ್ದರು. ಥೇಟ್ ಬಾಬಾ ರಾಮ್‌ದೇವ್ ಥರ ಕಾಣಿಸುತ್ತಿದ್ದೀರಿ ಎಂದು ಹಲವರು ಕಮೆಂಟ್ ಮಾಡಿದ್ದರು. ಇಷ್ಟೇ ಅಲ್ಲದೇ ಆಗಾಗ್ಗೆ ಧನುಷ್ ಗೆಟಪ್ ಬದಲಿಸಿಕೊಳ್ಳುತ್ತಿರುವುದು ಇದೆ. ಹೀಗೆಲ್ಲಾ ಗೆಟಪ್ ಬದಲಿಸಿಕೊಂಡು ನಮ್ಮನ್ನು ಮೋಡಿ ಮಾಡುವ ನೀವು ರೊಮ್ಯಾಂಟಿಕ್ ಸೀನ್ನಿಂದ ಹಿಂದೆ ಸರಿಯುವುದು ಸರಿಯಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ಕೆಲವರು ಶಾರುಖ್ ಖಾನ್ ಉದಾಹರಣೆ ಕೊಡುತ್ತಿದ್ದಾರೆ. ವಯಸ್ಸು 60ರ ಹತ್ತಿರ ಬಂದಿದ್ದರೂ, ಪಠಾಣ್ನಲ್ಲಿ ಅವರು ಮಾಡಿದ ರೊಮ್ಯಾಂಟಿಕ್ ಸೀನ್ಗೆ ಯುವಕರೇ ನಾಚಿಕೊಂಡಿದ್ದರು. ನಿಮಗಿನ್ನೂ 40 ವರ್ಷ. ಹೀಗೇಕೆ ಹೇಳುವುದು ಎನ್ನುತ್ತಿದ್ದಾರೆ.
ಧನುಷ್, ವಿಜಯ್ ಸೇತುಪತಿ, ಅಮಲಾ ಸೇರಿದಂತೆ 14 ತಾರೆಯರಿಗೆ ನಿರ್ಮಾಪಕರ ಸಂಘದಿಂದ ಬಿಗ್ ಶಾಕ್!