ಆಲಿಯಾಳನ್ನು ರಣಬೀರ್​ ಸಿಂಗ್ ತಬ್ಬಿಕೊಂಡ್ರೆ ಫ್ಯಾನ್ಸ್​ ಹೀಗ್ ಹೇಳೋದಾ?

By Suvarna News  |  First Published Jul 4, 2023, 1:29 PM IST

ರಾಕಿ ಔರ್ ರಾಣಿಯ 'ಫಸ್ಟ್ ಲುಕ್ ಟೆಸ್ಟ್' ಫೋಟೋ ವೈರಲ್​ ಆಗಿದ್ದು, ಅದರಲ್ಲಿ ನೆಟ್ಟಿಗರು ಆಲಿಯಾ ಭಟ್​ ಮತ್ತು ರಣಬೀರ್​ ಸಿಂಗ್​ ಅವರ ಕೆಮೆಸ್ಟ್ರಿಯನ್ನು ಟ್ರೋಲ್​ ಮಾಡುತ್ತಿದ್ದಾರೆ. 
 


ಕರಣ್ ಜೋಹರ್ ಅವರು ರಾಕಿ ಔರ್ ರಾಣಿಯ 'ಫಸ್ಟ್ ಲುಕ್ ಟೆಸ್ಟ್' ನಿಂದ ಆಲಿಯಾ ಭಟ್, ರಣವೀರ್ ಸಿಂಗ್ ಅವರ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈ ಫೋಟೋವನ್ನು ಹಲವಾರು ಜನರು  ಇಷ್ಟಪಡುತ್ತಿಲ್ಲ.  ಇದಕ್ಕೆ ಕಾರಣ, ಇವರಿಬ್ಬರ ಕೆಮೆಸ್ಟ್ರಿ ಚೆನ್ನಾಗಿಲ್ಲ ಎನ್ನುವುದು ಫ್ಯಾನ್ಸ್​ ಅಭಿಮತ. ಏಕೆಂದರೆ, ನಟಿ ಆಲಿಯಾ ಭಟ್​ (Alia Bhatt) ಹೆಚ್ಚಾಗಿ ಮೇಕಪ್​ ಇಲ್ಲದೆಯೇ ತಮ್ಮ ಸಹಜ ಸೌಂದರ್ಯದಿಂದ ಅಭಿಮಾನಿಗಳ ಮನ ಗೆಲ್ಲುತ್ತಲೇ ಬಂದಿದ್ದಾರೆ.  ಒಂದು ಮಗುವಾದ ಮೇಲೂ ನಟಿಯ ಸೌಂದರ್ಯ ವೃದ್ಧಿಸುತ್ತಲೇ ಇದೆ. ಈಕೆಯ  ಫಿಟ್​ನೆಸ್​ ಮತ್ತು ನೈಸರ್ಗಿಕ ಸೌಂದರ್ಯ ಎರಡನ್ನೂ ಫ್ಯಾನ್ಸ್​ ಪ್ರಶಂಸಿಸುತ್ತಲೇ ಇರುತ್ತಾರೆ. ನಟ ರಣಬೀರ್​ ಕಪೂರ್​ ಅವರನ್ನು ಮದುವೆಯಾದ ಮೇಲೆ ಮಗಳು ರಾಹಾ ಕಪೂರ್ (Raha Kapoor)   ಜನನದ ನಂತರ, ಆಲಿಯಾ ಅನೇಕ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರತಿ ಬಾರಿಯೂ ಅವರ ನೋಟ ಮತ್ತು ಸೌಂದರ್ಯವು ಎಲ್ಲರ ಗಮನವನ್ನು ಸೆಳೆಯುತ್ತದೆ.  ಇದರಲ್ಲಿ ಅವರ ನೋ ಮೇಕಪ್ ಲುಕ್ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ. 

ಅದೇ ಇನ್ನೊಂದೆಡೆ, ನಟಿ ದೀಪಿಕಾ ಪಡುಕೋಣೆಯವರ (Deepika Padukone) ಪತಿ ರಣಬೀರ್​ ಸಿಂಗ್​ ಗಡಸು ಮುಖದವರು. ಅವರು ಸಾಫ್ಟ್​ ಎನಿಸಲು ಸಾಧ್ಯವೇ ಇಲ್ಲ. ಆದರೆ ನಟಿ ದೀಪಿಕಾ ಮತ್ತು ನಟ ರಣಬೀರ್​ ಸಿಂಗ್​ ಜೋಡಿಯ ಚಿತ್ರ ಈಗ ಬಿಡುಗಡೆಯಾಗುತ್ತಿದ್ದು, ಕರಣ್​ ಜೋಹರ್​ ಅದರ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ನಿನ್ನೆಯಷ್ಟೇ ಇದೇ ಚಿತ್ರದ ಪೋಸ್ಟರ್​ ಒಂದು ಸಕತ್​ ಟ್ರೋಲ್​ ಆಗಿತ್ತು. ಅದಕ್ಕೆ ಕಾರಣ, ರಣಬೀರ್​ ಸಿಂಗ್​ ಅವರು ಆಲಿಯಾ ಭಟ್​ ಅವರ ಜೊತೆ ಕಾಣಿಸಿಕೊಂಡು ಫೋಟೋಶೂಟ್​ ಮಾಡಿಸಿಕೊಂಡಿದ್ದರು. ಇದೇನು ಹೊಸ ವಿಷಯವಲ್ಲ. ಆದರೆ ಈ ಚಿತ್ರದಲ್ಲಿ ಆಲಿಯಾ ಬ್ಲೌಸ್​ಲೆಸ್​ನಲ್ಲಿ ಕಾಣಿಸಿಕೊಂಡಿದ್ದರು. ಅಶ್ಲೀಲ ಎನಿಸುವಂತೆ ಈ ಫೋಟೋ ಕಾಣಿಸುತ್ತಿದೆ. ಇದಕ್ಕಾಗಿ ನಟಿ ಆಲಿಯಾ ಅವರನ್ನು ಸಕತ್​ ಟ್ರೋಲ್​ ಮಾಡಲಾಗುತ್ತಿದೆ. ಆದರೆ ಅಸಲಿಗೆ ಈ ಫೋಟೋ ಎಡಿಟ್​ ಮಾಡಲಾಗಿದೆ. ಬ್ಲೌಸ್​ ಧರಿಸಿದ್ದರೂ ಅದನ್ನು ಎಡಿಟ್​ ಮಾಡಿ ಎದೆಭಾಗ ಕಾಣುವಂತೆ ಮಾಡಿ ವೈರಲ್​ ಮಾಡಲಾಗಿದೆ.

Tap to resize

Latest Videos

ಬ್ಲೌಸ್ ಹಾಕದೆ ಸೀರೆ ಧರಿಸಿದ ಆಲಿಯಾ ಭಟ್; ರಣವೀರ್‌ ಸಿಂಗ್ ಜೊತೆ ಫೋಟೋ ಲೀಕ್!

ಈಗ ಅದೇ ಚಿತ್ರದ ಪೋಸ್ಟರ್​ ಮತ್ತೊಮ್ಮೆ ವೈರಲ್​ ಆಗಿದ್ದು, ಈಗ ಜನ ಅದನ್ನೂ ಟ್ರೋಲ್​ ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಇವರಿಬ್ಬರು ನಾಯಕ-ನಾಯಕಿ ಥರ ಕಾಣಿಸುತ್ತಿಲ್ಲ ಎನ್ನುವುದು.   ರಣಬೀರ್​ (Ranveer Singh) ರಾಮನಂತೆ ಕಂಡರೆ ಆಲಿಯಾ ಇಶಾಳಂತೆ ಕಾಣುತ್ತಾರೆ ಎಂದು ಕೆಲವರು ಕಮೆಂಟ್​ ಹಾಕಿದರೆ,  "ಇಬ್ಬರೂ ಸಹೋದರ ಸಹೋದರಿಯರಂತೆ ಕಾಣುತ್ತಿದ್ದಾರೆ ಎಂದವರೇ ಹೆಚ್ಚು. ಇವರಿಬ್ಬರ  ರೊಮ್ಯಾನ್ಸ್ ವರ್ಕ್ ಔಟ್ ಆಗುವುದಿಲ್ಲ.  ಕಾಸ್ಟಿಂಗ್ ದೊಡ್ಡ ಫ್ಲಾಪ್ ಆಗಿದೆ ಎನ್ನುತ್ತಿದ್ದಾರೆ ಫ್ಯಾನ್ಸ್​. ರಣಬೀರ್​ ಗಡಸು ಮೊಗದವರ ರೀತಿ ಇದ್ದಾರೆ. ಆಲಿಯಾ ಸಾಫ್ಟ್​ ಹುಡುಗಿ. ಅವರ ಜೊತೆ ಹೀರೋ ಮಾಡುವಾಗ ಕನಿಷ್ಠ ಪಕ್ಷ ರಣಬೀರ್​ ಅವರಿಗೆ ಕ್ಲೀನ್-ಶೇವ್ ಮಾಡಬೇಕಿತ್ತು ಎಂದಿದ್ದಾರೆ ಆಲಿಯಾ ಫ್ಯಾನ್​. ಇನ್ನು ಕೆಲವರು ನಟನ ಕೂದಲು ಸೂಟ್​ ಆಗ್ತಿಲ್ಲ ಎಂದರೆ ಚಾಕಲೇಟ್​ ಗರ್ಲ್​ಗೆ ಈ ಗಡಸು ಬಾಯ್​ ಸರಿ ಮ್ಯಾಚ್​ ಆಗ್ತಿಲ್ಲ. ಅವರು ಏನಿದ್ದರೂ ದೀಪಿಕಾಗೇ ಸರಿ ಎನ್ನುತ್ತಿದ್ದಾರೆ ಇನ್ನು ಹಲವರು.
 
 ಸದ್ಯ ನಟಿ ಆಲಿಯಾ ಭಟ್​, ಹಾಲಿವುಡ್​ನಲ್ಲಿ ಬಿಜಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ನಂತರ, ಆಲಿಯಾ ಭಟ್ (Alia Bhatt) ಇತ್ತೀಚಿನ ದಿನಗಳಲ್ಲಿ ಹಾಲಿವುಡ್‌ನಲ್ಲಿ ಅಲೆಗಳನ್ನು ಎಬ್ಬಿಸಿದ ಮೂರನೇ ಭಾರತೀಯ ನಟಿ ಎನಿಸಿಕೊಂಡಿದ್ದಾರೆ. ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಟಾಮ್ ಹಾರ್ಪರ್ ನಿರ್ದೇಶನದ ಹಾಲಿವುಡ್ ಸ್ಪೈ ಆಕ್ಷನ್ ಥ್ರಿಲ್ಲರ್ ಚಲನಚಿತ್ರ 'ಹಾರ್ಟ್ ಆಫ್ ಸ್ಟೋನ್' ನಲ್ಲಿ 'ವಂಡರ್ ವುಮನ್' ಸ್ಟಾರ್ ಗಾಲ್ ಗಡೋಟ್ ಅವರೊಂದಿಗೆ ನಟಿಸಲಿದ್ದಾರೆ. ಇದು ಆಲಿಯಾ ಅವರ ಹಾಲಿವುಡ್ ಚೊಚ್ಚಲ ಚಿತ್ರವಾಗಿದೆ.  ಹಾರ್ಟ್ ಆಫ್ ಸ್ಟೋನ್ ಟ್ರೇಲರ್ (Heart of Stone Trailer) ನೆಟ್‌ಫ್ಲಿಕ್ಸ್‌ನ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಇದರಲ್ಲಿ ಕಪೂರ್ ಕುಟುಂಬದ ಸೊಸೆ ಆಲಿಯಾ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ. ಇತ್ತೀಚಿಗೆ ಇದರ ಟ್ರೇಲರ್​ ಬಿಡುಗಡೆಯಾಗಿತ್ತು. ಈ ಟ್ರೇಲರ್ (Trailer) ನೋಡಿದರೆ ಆಲಿಯಾ ಅವರದ್ದು ನೆಗೆಟಿವ್ ಪಾತ್ರ (Negaitve Role) ಎನ್ನುವುದು ತಿಳಿದುಬರುತ್ತದೆ.  ವಾಸ್ತವವಾಗಿ, ಸಾವೊ ಪಾಲೊದಲ್ಲಿ ನಡೆದ ನೆಟ್‌ಫ್ಲಿಕ್ಸ್ ಟುಡಮ್ 2023 ಈವೆಂಟ್‌ನಲ್ಲಿ ಬಹು ನಿರೀಕ್ಷಿತ ಚಲನಚಿತ್ರ ಹಾರ್ಟ್ ಆಫ್ ಸ್ಟೋನ್‌ನ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಅದೇ ಸಮಯದಲ್ಲಿ, ಈ ಟ್ರೇಲರ್ ಅನ್ನು ನೋಡಿದ ನಂತರ, ಅಭಿಮಾನಿಗಳು ಅವರು ನೆಗೆಟಿವ್ ಪಾತ್ರದಲ್ಲಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

Viral Video: ಕಿಸ್ಸಿಂಗ್​ 'ಕಳ್ಳ'ನ ಜೊತೆ ಕೊನೆಗೂ ಸಿಕ್ಕಿಬಿದ್ದ ಬಾಲಿವುಡ್​ ಸ್ಟಾರ್​ ಭೂಮಿ ಪೆಡ್ನೇಕರ್​

click me!