'ನನಗೆ ತೆಲುಗು ಸಿನಿಮಾಗಳೆಂದರೆ ಅಚ್ಚುಮೆಚ್ಚು. ಬಾಲಿವುಡ್ ಸಿನಿಮಾಗಳು ಕೂಡ ಇಷ್ಟ. ಸೌತ್ ಸಿನಿಮಾಗಳಲ್ಲಿ, ಅದರಲ್ಲೂ ನಾನು ನಟಿಸಿರುವ ತೆಲುಗು ಸಿನಿಮಾಗಳಲ್ಲಿ ಸಂಬಂಧಗಳ ಬಗ್ಗೆ, ಸಾಮಾಜಿಕ ಜವಾಬ್ದಾರಿ ಬಗ್ಗೆ ತುಂಬಾ..
ಮೃಣಾಲ್ ಠಾಕೂರ್ ಸಿನಿಮಾ ಅಂದ್ರೆ ಅದು ಒಳ್ಳೆಯ ಸ್ಟೋರಿನೇ ಇರುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಾರೆ, ಬರೆಯುತ್ತಾರೆ. ಆಗ ನನಗೆ ನಿಜವಾಗಿಯೂ ಗ್ರೇಟ್ ಎನಿಸುತ್ತದೆ. ಸಿನಿಮಾ ಪ್ರೇಕ್ಷಕರಿಗೆ ನನ್ನ ಸಿನಿಮಾಗಳು ಎಂದರೆ ಸ್ಪೆಷಲ್ ಆಗಿರುತ್ತವೆ ಎಂಬ ಭಾವ ಮೂಡಿದೆ ಎಂದರೆ ನನಗದು ನಿಜವಾಗಿಯೂ ತುಂಬಾ ಹೆಮ್ಮೆಯ ಸಂಗತಿ. ಏಕೆಂದರೆ, ಯಾವುದೇ ಕಲಾವಿದರಿರಲಿ, ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆಯಲು ಇಷ್ಟಪಡುತ್ತಾರೆ. ಸಿನಿಮಾ ಸೂಪರ್ ಹಿಟ್ ಆದರೆ, ಒಳ್ಳೆಯ ಕಲೆಕ್ಷನ್ ಮಾಡಿದರೆ ತುಂಬಾ ಒಳ್ಳೆಯದು, ಏಕೆಂದರೆ, ಸಿನಿಮಾ ಜನರಿಗೆ ರೀಚ್ ಆಗಬೇಕು, ಹಣ ಹಾಕಿದ ನಿರ್ಮಾಪಕರು ಹಣ ಮಾಡಬೇಕು. ಅದೆಲ್ಲವೂ ಸರಿಯೇ.
ಆದರೆ, ಕಲಾವಿದರಾದ ನಮಗೆ ಸಿನಿಮಾ ರೀಚ್ ಆಗಿರುವ ಜತೆಗೆ ನಾವು ಜನರೊಂದಿಗೆ ಕನೆಕ್ಟ್ ಆಗಬೇಕು. ಅಂದರೆ, ನಮ್ಮ ಪಾತ್ರವನ್ನು ಪ್ರೇಕ್ಷಕರು ಮೆಚ್ಚಬೇಕು. ಅಭಿಮಾನಿಗಳನ್ನು ನಾವು ನಿರೀಕ್ಷೆ ಮಾಡದಿದ್ದರೂ, ನಮ್ಮ ಅಭಿನಯ, ಪಾತ್ರವನ್ನು ಮೆಚ್ಚಿರುವ ಪ್ರೇಕ್ಷಕರು ಫ್ಯಾನ್ಸ್ ಆಗದೇ ಇರುತ್ತಾರೆಯೇ? ಸಹಜವಾಗಿಯೇ ನಮಗೆ ಅಭಿಮಾನಿಗಳಾಗುತ್ತಾರೆ. ಅಭಿಮಾನಿಗಳ ಬಗ್ಗೆ ನಮಗೆ ಗೌರವಾದರ ಇರುವುದು ಸಹಜ. ಆದರೆ, ಅಭಿಮಾನಿಗಳನ್ನು ಸಂಪಾದಿಸುವುದಕ್ಕಿಂತ ಮೊದಲು ನಮಗೆ ಒಳ್ಳೆಯ ಪಾತ್ರಗಳು ಸಿಗಬೇಕು, ಅದನ್ನು ನೋಡಿ ಜನರು ಮೆಚ್ಚಬೇಕು.
ಧನಂಜಯ್ ಮುಂದಿಟ್ಟು 'ಕೋಟಿ'ಗೆ ಕೈ ಹಾಕಿದ ಪರಮ್, ಸಿನಿಮಾ ರಿಲೀಸ್ ಡೇಟ್ ಫಿಕ್ಸ್!
ನಟಿ ಮೃಣಾಲ್ ಠಾಕೂರ್ ಅವರು ತಮ್ಮ 'ಕಲ್ಯಾಣಿ ವಚ್ಚಾ ವಚ್ಚಾ' ಸಿನಿಮಾದ ಪಾತ್ರದ ಬಗ್ಗೆ ಕೂಡ ತುಂಬಾ ಎಕ್ಸೈಟ್ ಆಗಿ ಮಾತನಾಡಿದ್ದಾರೆ. 'ನನಗೆ ತೆಲುಗು ಸಿನಿಮಾಗಳೆಂದರೆ ಅಚ್ಚುಮೆಚ್ಚು. ಬಾಲಿವುಡ್ ಸಿನಿಮಾಗಳು ಕೂಡ ಇಷ್ಟ. ಸೌತ್ ಸಿನಿಮಾಗಳಲ್ಲಿ, ಅದರಲ್ಲೂ ನಾನು ನಟಿಸಿರುವ ತೆಲುಗು ಸಿನಿಮಾಗಳಲ್ಲಿ ಸಂಬಂಧಗಳ ಬಗ್ಗೆ, ಸಾಮಾಜಿಕ ಜವಾಬ್ದಾರಿ ಬಗ್ಗೆ ತುಂಬಾ ಚೆನ್ನಾಗಿ ಕಥೆಯಲ್ಲಿ ನಿರೂಪಿಸಿದ್ದಾರೆ. ನನಗದು ಇಷ್ಟವಾಗುತ್ತದೆ. ಏಕೆಂದರೆ, ನಮ್ಮ ಬದುಕು ಜನರ ಸುತ್ತಲೂ ಜನರಿಗಾಗಿಯೇ ನಡೆಯುತ್ತಾ ಇರುತ್ತದೆ.
ನೆಗೆಟಿವಿಟಿ ಇರೋದೇ ಗೊತ್ತಾಗಲ್ಲ; ನಾನು ಅದನ್ನು ತೆಗೆದುಕೊಳ್ಳುವುದಿಲ್ಲ; ಹೀಗಂದ್ರಾ ಅಲ್ಲು ಅರ್ಜುನ್?
ಅದನ್ನು ಸಿನಿಮಾ ಮೂಲಕ ಇಡಿ ಸಮಾಜ ಅನುಭವಿಸಿ ಅದೇ ಹ್ಯಾಂಗೋವರ್‌ನಲ್ಲಿ ತಮ್ಮವರ ಜತೆ ಇನ್ನೂ ಹೆಚ್ಚಿನ ಜನರನ್ನು ತಮ್ಮವರು ಎಂದುಕೊಂಡು ಸಹಬಾಳ್ವೆಗೆ ಹೆಚ್ಚಿನ ಒತ್ತು ಕೊಟ್ಟು ಲೈಫ್ ಲೀಡ್ ಮಾಡಿದರೆ ಅದು ನನಗೆ ಖುಷಿ ಕೊಡುತ್ತದೆ' ಎಂದಿದ್ದಾರೆ ನಟಿ ಮೃಣಾಲ್ ಠಾಕೂರ್. ಅಂದಹಾಗೆ, ಅವರು ನಟಿಸಿರುವ ಚಿತ್ರಗಳು ಸಾಕಷ್ಟಿವೆ ಹಾಗೂ ಅವುಗಳಲ್ಲಿ ಹೆಚ್ಚಿನವು ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿವೆ., ಜತೆಗೆ, ಮೃಣಾಲ್ ಠಾಕೂರ್ ನಟಿಸಿರುವ ಪಾತ್ರಗಳು ಜನಮೆಚ್ಚುಗೆ ಗಳಿಸಿವೆ.
ವಿಷ್ಣುವರ್ಧನ್ ಅವರನ್ನೇ 'ನಾಗರಹಾವು'ಗೆ ಪುಟ್ಟಣ್ಣ ಕಣಗಾಲ್ ಆಯ್ಕೆ ಮಾಡಿದ್ದೇಕೆ? ಭಾರೀ ಗುಟ್ಟು ರಟ್ಟಾಯ್ತು!
ಸೀತಾ ರಾಮಂ, ಹಾಯ್ ನನ್ನಾ, ದಿ ಫ್ಯಾಮಿಲಿ ಸ್ಟಾರ್, ಜೆರ್ಸಿ, ಕುಂಕಮ್ ಭಾಗ್ಯ,, ಲಸ್ಟ್ ಸ್ಟೋರೀಸ್, ಲವ್ ಸೋನಿಯಾ, ಸೂಪರ್ 30, ಗುಮ್ರಾಹ್, ಪಿಪ್ಪಾ ಹೀಗೆ ಲಿಸ್ಟ್‌ನಲ್ಲಿ ಸಾಕಷ್ಟಿವೆ. ತೆಲುಗು ಸಿನಿಮಾಗಳಿರಲಿ ಅಥವಾ ಹಿಂದಿ ಚಿತ್ರಗಳಿರಲಿ, ಅವುಗಳಲ್ಲಿ ನಟಿ ಮೃಣಾಲ್ ಠಾಕೂರ್ ಪಾತ್ರಗಳು ಮತ್ತೆ ಮತ್ತೆ ಸಿನಿಮಾ ನೋಡಬೇಕು ಎನ್ನುವಂತೆ ಮಾಡುತ್ತವೆ ಎನ್ನಬಹುದು.
ಸಾಧು ಕೋಕಿಲ ಪ್ರಶ್ನೆಗೆ ನಗುತ್ತ 'ಮೌನವೇನೇ ಧ್ಯಾನವೇ ಪ್ರೇಮಾ' ಎಂದಿದ್ದೇಕೆ ರಿಯಲ್ ಸ್ಟಾರ್ ಉಪೇಂದ್ರ?