ನಟಿಯೊಬ್ಬರ ಖಾಸಗಿ ಕ್ಷಣ ಸೆರೆಹಿಡಿದು ಬ್ಲ್ಯಾಕ್ಮೇಲ್ ಮಾಡಿದ ಕಾರಣ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಆರೋಪದ ಮೇಲೆ ಪುಷ್ಪ ನಟ ಜಗದೀಶ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ನಟಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಷ್ಪಾ ಚಿತ್ರದ ನಟ ಜಗದೀಶ್ ಪ್ರತಾಪ್ ಭಂಡಾರಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಹನಟಿಯೊಬ್ಬರ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಆಕೆಗೆ ಬೆದರಿಕೆ ಹಾಕಿರುವ ಆರೋಪ ಇವರ ಮೇಲಿದೆ. ಕಿರುಕುಳಕ್ಕೆ ಒಳಗಾದ ನಟಿ ಕಳೆದ ನವೆಂಬರ್ 29ರಂದು ಹೈದರಾಬಾದ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತನಿಖೆ ವೇಳೆ ಜಗದೀಶ್ ಅವರ ಮೇಲೆ ಪೊಲೀಸರಿಗೆ ಅನುಮಾನ ಹುಟ್ಟಿತ್ತು. ಅವರ ಹುಡುಕಾಟದಲ್ಲಿ ತೊಡಗಿದ್ದರು. ಆದರೆ ಜಗದೀಶ್ ತಲೆ ಮರೆಸಿಕೊಂಡಿದ್ದರು. ನಿನ್ನೆ ಡಿಸೆಂಬರ್ 6ರಂದು ಅವರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಬಂಧಿಸಲಾಗಿದ್ದು, ಕೋರ್ಟ್ಗೆ ಹಾಜರುಪಡಿಸಲಾಗಿದೆ.
ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ್ದ ಪುಷ್ಪ ಸಿನಿಮಾ ಸೂಪರ್ ಹಿಟ್ ಆಗಿತ್ತು.ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿದ್ದರಿಂದ ಆ ಚಿತ್ರದಲ್ಲಿ ನಟಿಸಿದ ಹಲವು ಕಲಾವಿದರಿಗೆ ಒಳ್ಳೆಯ ಹೆಸರು ಬಂದಿತ್ತು. ಈ ಚಿತ್ರದಲ್ಲಿ, ನಾಯಕ ಪುಷ್ಪರಾಜನ ಸ್ನೇಹಿತನ ಪಾತ್ರಧಾರಿ ಕೇಶವ ಪಾತ್ರ ಮಾಡಿದ್ದ ಜಗದೀಶ್ ಪ್ರತಾಪ್ ಭಂಡಾರಿ ಸಾಕಷ್ಟು ಹೆಸರು ಮಾಡಿದ್ದರು. ‘ಪುಷ್ಪ 2’ ಸಿನಿಮಾದಲ್ಲೂ ಅವರ ಪಾತ್ರ ಇದೆ. ಸದ್ಯ ಈ ಸಿನಿಮಾಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲೇ ಜಗದೀಶ್ ಅರೆಸ್ಟ್ ಆಗಿದ್ದಾರೆ. ಸಹನಟಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಪಂಜಗುಟ್ಟ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಇವರ ಮೇಲಿದೆ.
ಸಂಪೂರ್ಣ ಬೆತ್ತಲಾಗಿ ರಶ್ಮಿಕಾರ 'ನ್ಯಾಷನಲ್ ಕ್ರಷ್' ಪಟ್ಟ ಕಿತ್ತುಕೊಂಡ ತೃಪ್ತಿ: ಬೂಟು ನೆಕ್ಕುವ ದೃಶ್ಯ ನೆನಪಿಸಿಕೊಂಡ ನಟಿ
ಪೊಲೀಸರ ಪ್ರಕಾರ, ನವೆಂಬರ್ 27ರಂದು ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಕೆ ಬೇರೆ ಪುರುಷನೊಂದಿಗೆ ಇದ್ದಾಗ, ಜಗದೀಶ್ ಭಂಡಾರಿ ಆಕೆಗೆ ತಿಳಿಯದಂತೆ ಫೋಟೋ ತೆಗೆದಿದ್ದರು. ನಂತರ ಆ ಫೋಟೋ ತೋರಿಸಿ ಬೆದರಿಕೆ ಹಾಕಿದ್ದರು. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿದ್ದರು. ಇದರಿಂದ ಮನನೊಂದ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಜಗದೀಶ್ ಈಗತಾನೆ ಗುರುತಿಸಿಕೊಳ್ಳುತ್ತಿದ್ದಾರೆ. ಪೋಷಕ ಪಾತ್ರಗಳಿಂದ ಅವರು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಇಂಥ ಸಮಯದಲ್ಲಿ ಗಂಭೀರ ಆರೋಪ ಎದುರಾಗಿದೆ.
ಆತ್ಮಹತ್ಯೆ ಮಾಡಿಕೊಂಡ ನಟಿಗೂ ಮತ್ತು ಜಗದೀಶ್‌ಗೂ ಈ ಹಿಂದೆಯೇ ಪರಿಚಯವಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕಿರುಚಿತ್ರಗಳ ಮೂಲಕವೇ ಆರಂಭದಲ್ಲಿ ಗುರುತಿಸಿಕೊಂಡಿರುವ ಜಗದೀಶ್ ಭಂಡಾರಿ ಅವರು, 2019ರಲ್ಲಿ ಮಲ್ಲೇಶಂ ಚಿತ್ರದ ಮೂಲಕ ತೆಲುಗು ಸಿನಿಮಾಕ್ಕೆ ಪದಾರ್ಪಣೆ ಮಾಡಿದರು. ಇಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಗೆ ಬ್ರೇಕ್ ತಂದುಕೊಟ್ಟ ಚಿತ್ರ ಪುಷ್ಪ. ಇದರ ಬೆನ್ನಲ್ಲೇ ಅವರು, ಪಿಕ್ ಪಾಕೆಟ್, ವಿರಾಟ ಪರ್ವಂ ಮತ್ತು ಬುಟ್ಟ ಬೊಮ್ಮ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಸತ್ತಿ ಒರ್ದೆಕರಾಲು ಚಿತ್ರದ ಮೂಲಕ ನಾಯಕನಾಗಿ ಪ್ರವೇಶಿಸಿದ್ದಾರೆ. ಇಂಥ ಗಂಭೀರ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಅವರ ವೃತ್ತಿಜೀವನಕ್ಕೆ ಬಹಳ ನಷ್ಟ ಆಗಲಿದೆ.
ಮಂಚದಲ್ಲಿ ಸಹಕರಿಸಿಲ್ಲವೆಂದು ಚಿತ್ರದಿಂದಲೇ ತೆಗೆದುಬಿಟ್ರು: ಕರಾಳ ಅನುಭವ ಬಿಚ್ಚಿಟ್ಟ 'ಲಂಕೇಶ್ ಪತ್ರಿಕೆ' ನಟಿ ಅದಿತಿ!