ಚೀನಾದ ಆಡಳಿತ ಕಮ್ಯನಿಸ್ಟ್ ಪಕ್ಷ ಸೇರಲಿದ್ದಾರೆ ಜಾಕಿಚಾನ್

By Suvarna NewsFirst Published Jul 13, 2021, 1:51 PM IST
Highlights
  • ಆಕ್ಷನ್ ಸ್ಟಾರ್ ಜಾಕಿಚಾನ್ ರಾಜಕೀಯಕ್ಕೆ ಎಂಟ್ರಿ
  • ಚೀನಾದ ಆಡಳಿತ ಕಮ್ಯುನಿಸ್ಟ್ ಪಕ್ಷ ಸೇರೋ ಇರಾದೆ ವ್ಯಕ್ತಪಡಿಸಿದ ನಟ

ಹಿಂದಿನ ಬ್ರಿಟಿಷ್ ವಸಾಹತು ಪ್ರದೇಶದಲ್ಲಿದ್ದ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳ ಮೇಲೆ ಬೀಜಿಂಗ್ ನಡೆಸಿದ ದಬ್ಬಾಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಹಾಂಗ್ ಕಾಂಗ್ ಮೂಲದ ಹಾಲಿವುಡ್ ತಾರೆ ಜಾಕಿ ಚಾನ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೀಗ ನಟ ಜಾಕಿ ಚಾನ್ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಗೆ ಸೇರಲು ಆಸಕ್ತಿ ವ್ಯಕ್ತಪಡಿಸಿದ್ದಾರೆ.

67 ರ ಹರೆಯದ ಚಾನ್ ಅವರು ಸಿಪಿಸಿಗೆ ಸೇರ್ಪಡೆಗೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ವಿಚಾರ ಸಂಕಿರಣದಲ್ಲಿ, ಚೀನಾ ಫಿಲ್ಮ್ ಅಸೋಸಿಯೇಷನ್‌ನ ಉಪಾಧ್ಯಕ್ಷರೂ ಆಗಿರುವ ಚಾನ್ ಅವರು ಸಿಪಿಸಿಗೆ ಸೇರ್ಪಡೆಗೊಳ್ಳುವ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ.

Latest Videos

ಲುಂಗಿ ಜಾರುತ್ತಿತ್ತು ಎಂದ ಶಾರೂಖ್: ದೇವದಾಸ್‌ಗೆ 19 ವರ್ಷ

"ನಾನು ಸಿಪಿಸಿ ಸದಸ್ಯನಾಗಲು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ. ಚಾನ್ ಹಲವಾರು ವರ್ಷಗಳಿಂದ ಸಿಪಿಸಿಯ ಬೆಂಬಲಿಗರಾಗಿದ್ದಾರೆ. ಚೀನಾದ ಪಕ್ಷವು ನಾಮನಿರ್ದೇಶನ ಮಾಡಿದ ವೃತ್ತಿಪರರ ಸಲಹಾ ಸಂಸ್ಥೆ ಪೀಪಲ್ಸ್ ಪೊಲಿಟಿಕಲ್ ಕನ್ಸಲ್ಟೇಟಿವ್ ಕಾನ್ಫರೆನ್ಸ್ (ಸಿಪಿಪಿಸಿಸಿ) ಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಸಮರ ಕಲೆಗಳ ಐಕಾನ್ ಅವರು 2019 ರಲ್ಲಿ ಹಾಂಗ್ ಕಾಂಗ್ನಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳನ್ನು ಟೀಕಿಸಿದಾಗ ತೀವ್ರ ಟೀಕೆಗೆ ಗುರಿಯಾದರು.

ನಾನು ಅನೇಕ ದೇಶಗಳಿಗೆ ಭೇಟಿ ನೀಡಿದ್ದೇನೆ ಮತ್ತು ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ನಾನು ಹೇಳಬಲ್ಲೆ. ನಾನು ಹೋದಲ್ಲೆಲ್ಲಾ ಚೈನೀಸ್ ಆಗಿರುವುದರ ಬಗ್ಗೆ ನನಗೆ ಹೆಮ್ಮೆ ಇದೆ, ಮತ್ತು 'ಐದು-ನಕ್ಷತ್ರಗಳ ಕೆಂಪು ಧ್ವಜ'ವನ್ನು ಜಗತ್ತಿನ ಎಲ್ಲೆಡೆ ಗೌರವಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

click me!