ನೆರವಿನ ಭರವಸೆ ನೀಡಿದ್ದ ಆಮಿರ್ ಫೋನ್ ಎತ್ತಲಿಲ್ಲ; ನಟ ಅನುಪಮ್ ಸಾವಿನ ಹಿಂದಿನ ನೋವಿನ ಕಹಾನಿ!

Published : Aug 10, 2021, 04:05 PM ISTUpdated : Aug 10, 2021, 04:31 PM IST
ನೆರವಿನ ಭರವಸೆ ನೀಡಿದ್ದ ಆಮಿರ್ ಫೋನ್ ಎತ್ತಲಿಲ್ಲ; ನಟ ಅನುಪಮ್ ಸಾವಿನ ಹಿಂದಿನ ನೋವಿನ ಕಹಾನಿ!

ಸಾರಾಂಶ

*ಹಿರಿಯ ನಟ ಅನುಪಮ್ ಶ್ಯಾಮ್ ಸಾವಿನ ಹಿಂದಿನ ನೋವಿನ ಕಹಾನಿ *ಡಯಾಲಿಸಿಸ್ ಭರವಸೆ ನೀಡಿದ್ದ ಆಮಿರ್ ಖಾನ್ ಫೋನ್ ರಿಸೀವ್ ಮಾಡಲೇ ಇಲ್ಲ *ನಟನಿಗೆ ಕಾಡಿತ್ತು ತಾಯಿ ಜೊತೆ ಇರಲಾಗಲಿಲ್ಲ ಅನ್ನೋ ಕೊರಗು

ಮುಂಬೈ(ಆ.10): ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಶ್ಯಾಮ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ. 63 ವರ್ಷದ ಶ್ಯಾಮ್ ನಿಧನದ ಹಿಂದೆ ನೋವಿನ ಕಹಾನಿ ಇದೆ. ಹಿರಿಯ ನಟನಿಗೆ ಕಾಡಿದ ಮಾನಸಿಕ ಕೊರಗು, ಗಾಳಿ ಸುದ್ದಿ ತಂದ ಆತಂಕ ಹಾಗೂ ಚಿಕಿತ್ಸೆಗೆ ಸೂಕ್ತ ನೆರವು ಸಿಗದೆ ನಟ ಅನುಪಮ್ ಶ್ಯಾಮ್ ನಿಧನರಾಗಿದ್ದಾರೆ ಎಂದು  ಸಹೋದರ ಅನುರಾಗ್ ಶ್ಯಾಮ್ ಹೇಳಿದ್ದಾರೆ. 

ಬಾಲಿವುಡ್ ಹಿರಿಯ ನಟ ಅನುಪಮ್ ಶ್ಯಾಮ್ ನಿಧನ

ಆಸ್ಪತ್ರೆ ಬಿಲ್ ಕಟ್ಟಲೂ ಪರದಾಡಿದ ಹಿರಿಯ ನಟ ಅನುಪಮ್ ಶ್ಯಾಮ್ ಅಂತಿಮ ದಿನಗಳು ಅತ್ಯಂತ ನೋವಿನಿಂದ ಕೂಡಿತ್ತು ಎಂದು ಅನುರಾಗ್ ಹೇಳಿದ್ದಾರೆ. ಪ್ರತಿ 3 ದಿನಕ್ಕೆ ಡಯಾಲಿಸ್ ಮಾಡಿಸಬೇಕಿತ್ತು. ಜೊತೆಗೆ ಚಿಕಿತ್ಸೆ ವೆಚ್ಚಗಳು ನಮಗೆ ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಇದರ ನಡುವೆ ನಟ ಆಮೀರ್ ಖಾನ್ ಡಯಾಲಿಸ್‌ಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಬಳಿಕ ಫೋನ್ ರಿಸೀವ್ ಮಾಡಲೇ ಇಲ್ಲ ಎಂದು ಅನುರಾಗ್ ಶ್ಯಾಮ್ ಹೇಳಿದ್ದಾರೆ.

ಚಿಕಿತ್ಸೆಗೆ ನೆರವು ನೀಡಬೇಕೆಂದು ಕಲಾವಿದರಲ್ಲಿ ಮನವಿ ಮಾಡಿಕೊಂಡಿದ್ದೇವು. ಈ ವೇಳೆ ಆಮೀರ್ ಖಾನ್ ಕೂಡ ಡಯಾಲಿಸ್ ಮಾಡಿಸಲು ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದರು. ಈ ಮಾತಿನಿಂದ ಅನುಪಮ್ ಶ್ಯಾಮ್ ಸಂತಸಗೊಂಡಿದ್ದರು. ಆದರೆ ತಿಂಗಳ ಬಳಿಕ ಆಮೀರ್ ಖಾನ್ ಫೋನ್‌ಗೂ ಸಿಗಲಿಲ್ಲ, ಭೇಟಿಯಾಗಲೂ ಸಾಧ್ಯವಾಗಲಿಲ್ಲ ಎಂದು ಅನುರಾಗ್ ಶ್ಯಾಮ್ ಹೇಳಿದ್ದಾರೆ.

ಲವ್‌ ಯು ರಚ್ಚು ಶೂಟಿಂಗ್‌ನಲ್ಲಿ ಅವಘಡ, ಫೈಟರ್ ಸತ್ತರೂ ತಿಳಿಸದೆ ಕಾಲ್ಕಿತ್ತ ಚಿತ್ರತಂಡ

ಅನುಪಮ್‌ಗೆ ತಾಯಿ ಜೊತೆ ಇರಬೇಕು ಎಂದು ಅತೀವ ಹಂಬಲವಿತ್ತು. ಆದರೆ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಡಯಾಲಿಸ್ ಅನಿವಾರ್ಯವಾಗಿತ್ತು. ಆದರೆ ತಾಯಿ ಉತ್ತರ ಪ್ರದೇಶದ ಪ್ರತಾಪಘಡದಲ್ಲಿ ನೆಲೆಸಿದ್ದರು. ಈ ಪಟ್ಟಣದಲ್ಲಿ ಡಯಾಲಿಸ್ ಕೇಂದ್ರ ಇರಲಿಲ್ಲ. ಇಲ್ಲಿಂದ ನಗರಕ್ಕೆ ಬಂದು ಡಯಾಲಿಸ್ ಮಾಡಿಸಿ ಹೋಗುವುದು ಅಸಾಧ್ಯದ ಮಾತಾಗಿತ್ತು. ಈ ಕೊರಗು ಅತೀವ ಕಾಡಿತ್ತು. ಎರಡು ತಿಂಗಳ ಹಿಂದೆ ತಾಯಿ ಕೂಡ ನಿಧನರಾದರು. ಇದು ಅನುಪಮ್ ಮನಸ್ಸಿಗೆ ತೀವ್ರ ಆಘಾತ ನೀಡಿತ್ತು ಎಂದಿದ್ದಾರೆ.

ತಾಯಿ ಜೊತೆ ಇರಲಾಗಲಿಲ್ಲ, ಕೊನೆ ಕ್ಷಣ ತಾಯಿಯನ್ನು ನೋಡಲಾಗಲಿಲ್ಲ ಅನ್ನೋ ಕೊರಗು ಆರೋಗ್ಯ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು. ಇದರ ಜೊತೆಗೆ ಅನುಪಮ್ ಶ್ಯಾಮ್ ನಟಿಸಿದ್ದ ಶೋ ಸ್ಥಗಿತಗೊಳಿಸಲಾಗುತ್ತಿದೆ ಅನ್ನೋ ಸುದ್ದಿ ಆಘಾತ ನೀಡಿತ್ತು. ಇದರಿಂದ ವಿಚಲಿತರಾಗಿದ್ದರು. 

ಅನುಪಮ್ ಶ್ಯಾಮ್ ಅಂತಿಮ ದಿನದಲ್ಲಿ ತೀವ್ರ ಮಾನಸಿಕವವಾಗಿ ನೊಂದು ಹೋಗಿದ್ದರು. ಯಾರ ನೆರವು ಸಿಗದೆ ನೋವಿನಲ್ಲೇ ಶ್ಯಾಮ್ ಬದುಕು ಅಂತ್ಯವಾಯಿತು ಎಂದು ಅನುರಾಗ್ ಶ್ಯಾಮ್ ಹೇಳಿದ್ದಾರೆ. 

ಅನುಪಮ್ ಶ್ಯಾಮ್ ಪ್ರಖ್ಯಾತ ಟಿವಿ ಶೋ ಮನ್ ಕಿ ಅವಾಜ್ ಪ್ರತಿಗ್ಯ ಸೇರಿದಂತೆ ಹಲವು ಶೋ ಹಾಗೂ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಮೀರ್ ಖಾನ್ ಜೊತೆ ಲಗಾನ್ ಸಿನಿಮಾದಲ್ಲೂ ನಟಿಸಿದ್ದರು. ಬಳಿಕ ಆಮೀರ್ ಹೆಚ್ಚು ಪರಿಚಿತರಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?