ಶಾರುಕ್‌ ವಯಸ್ಸು ಏರ್ತಿದ್ಯಾ, ಇಳಿತಿದ್ಯಾ? ಫೋಟೋ ನೋಡಿ ಫ್ಯಾನ್ಸ್‌ ಫಿದಾ

By Roopa Hegde  |  First Published Jan 9, 2025, 10:18 AM IST

ಕಿಂಗ್ ಖಾನ್ ಶಾರುಕ್ ಖಾನ್ ಮತ್ತಷ್ಟು ಯಂಗ್ ಆಗ್ತಿದ್ದಾರೆ. ಮಗನ ಬಟ್ಟೆ ಬ್ರಾಂಡ್ ಪ್ರಮೋಷನ್ ವೇಳೆ ಶಾರುಕ್ ಫೋಟೋ ವೈರಲ್ ಆಗಿದೆ. ಫಿಟ್ನೆಸ್ ಜೊತೆ ಶಾರುಕ್ ಕಾನ್ಫಿಡೆನ್ಸ್ ಈ ಫೋಟೋದಲ್ಲಿ ಫ್ಯಾನ್ಸ್ ಗಮನ ಸೆಳೆದಿದೆ. 
 


ಬಾಲಿವುಡ್ ಕಿಂಗ್ ಖಾನ್ ಶಾರುಕ್ ಖಾನ್ (Bollywood King Khan Shahrukh Khan) ವಯಸ್ಸು ಹೆಚ್ಚಾಗ್ತಿದ್ಯಾ ಇಲ್ಲ ಕಡಿಮೆ ಆಗ್ತಿದ್ಯಾ? ಅವರ ಈಗಿನ ಲುಕ್ ನೋಡಿದ್ರೆ ಈ ಪ್ರಶ್ನೆ ಕಾಡೋದು ಸಹಜ. ಶಾರುಕ್ ಖಾನ್ ಗೆ ಈಗ 59 ವರ್ಷ ವಯಸ್ಸು. ಆದ್ರೆ ಪಠಾಣ್ (Pathan) ಸ್ವೀಟ್ 25 ತರ ಕಾಣ್ತಿದ್ದಾರೆ. ಸದ್ಯ ಅವರ ಮಗನ ಬಟ್ಟೆ ಬ್ರ್ಯಾಂಡ್ ಗೆ ಮಾಡೆಲ್ ಪೋಸ್ ನೀಡಿರುವ ಶಾರುಕ್ ಫೋಟೋ ನೋಡ್ತಿದ್ದಂತೆ ಫ್ಯಾನ್ಸ್ ಕಳೆದು ಹೋಗಿದ್ದಾರೆ. ಮೂಗಿನ ಮೇಲೆ ಬೆರಳಿಟ್ಟು, ವಾವ್ ಎನ್ನುತ್ತಿದ್ದಾರೆ.

ಶಾರುಕ್ ಖಾನ್ ಮಗ ಆರ್ಯನ್ ಖಾನ್ (Aryan Khan) ಬಟ್ಟೆ ಬ್ರಾಂಡ್‌ಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿದ್ದಾರೆ. ಒಂಟಿಯಾಗಿ ನಿಂತಿರುವ ಶಾರುಕ್ ಸ್ಟೈಲ್ ಹಾಗೂ ಫಿಟ್ನೆಸ್ ಅಭಿಮಾನಿಗಳ ಮನಸ್ಸು ಸೆಳೆದಿದೆ.  ನೀಲಿ ಟಿ-ಶರ್ಟ್ ಮತ್ತು ಕಪ್ಪು ಕಾರ್ಗೋದಲ್ಲಿ ನಿಂತಿರುವ ಶಾರುಕ್ ಮುಖದಲ್ಲಿ ಆತ್ಮವಿಶ್ವಾಸ ಎದ್ದು ಕಾಣ್ತಿದೆ.  ಅವರ ಆಕರ್ಷಕ ನೋಟಕ್ಕೆ ಅಭಿಮಾನಿಗಳು ಪ್ರೀತಿಯ ಮಳೆಗೈದಿದ್ದಾರೆ. dyavol.x  and iamsrk ಇನ್ಸ್ಟಾ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಲಾಗಿದೆ. ಎಕ್ಸ್ 3. ಮಿಡ್ನೈಟ್ ಟೀ ಮತ್ತು ನೈಟ್ ವಾಕರ್ II ಪ್ಯಾಂಟ್. ನಿಮ್ಮ ಮುಂದೆ ಜನವರಿ 12 ರಿಂದ. www.dyavolx.com ನಲ್ಲಿ ಮಾತ್ರ ಪಡೆಯಿರಿ ಎಂದು ಫೋಟೋಕ್ಕೆ ಶೀರ್ಷಿಕೆ ಹಾಕಲಾಗಿದೆ. 

Tap to resize

Latest Videos

ಅಬ್ಬಬ್ಬಾ! ಕೇವಲ 13 ಗಂಟೆಗಳಲ್ಲಿ ಪುಷ್ಪಾ 2 ರೆಕಾರ್ಡ್ ಮುರಿದ ಟಾಕ್ಸಿಕ್!

ಈ ಫೋಟೋ ನೋಡಿದ ಅಭಿಮಾನಿಗಳು ಲೈಕ್ಸ್ ಒತ್ತುತ್ತಿದ್ದಾರೆ. ಕಮೆಂಟ್ ಗಳ ಸುರಿಮಳೆಯಾಗಿದೆ. ನೀವು ವಯಸ್ಸಾದ ವೈನ್ ಇದ್ದಂತೆ, ನೀವು ಬರೀ ಸೂಪರ್ ಸ್ಟಾರ್ ಅಲ್ಲ ಶೈನಿಂಗ್ ಸ್ಟಾರ್, ಅದೆಷ್ಟೋ ಯುವಕರಿಗೆ ಸ್ಫೂರ್ತಿ, ನಿಮ್ಮ ಫಿಟ್ನೆಸ್ ಮೆಚ್ಚುವಂತಿದೆ, ವಯಸ್ಸು ಬರೀ ಲೆಕ್ಕಕ್ಕೆ, ಹಾಟ್ ಬಾಯ್, ನಿಮ್ಮ ಸ್ಟೈಲ್ ಸೂಪರ್ ಹೀಗೆ ಫ್ಯಾನ್ಸ್ ತಮ್ಮ ಪ್ರೀತಿಯನ್ನು ಕಮೆಂಟ್ ನಲ್ಲಿ ತುಂಬಿದ್ದಾರೆ. 9 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಫೋಟೋಕ್ಕೆ ಬಂದಿದೆ. 

2023 ರಲ್ಲಿ ಪಠಾಣ್, ಜವಾನ್ ಮತ್ತು ಡಾಂಕಿಯಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು ಶಾರುಕ್. 2024ರಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಈಗ ಕಿಂಗ್ ಖಾನ್  ತಮ್ಮ ಹೊಸ ಪ್ಲಾನ್ ಶುರು ಮಾಡಿದ್ದಾರೆ.  ಕಿಂಗ್ ಸಿನಿಮಾ ತಯಾರಿ ನಡೆಯುತ್ತಿದ್ದು, ಇದರಲ್ಲಿ ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ದಳಪತಿ ವಿಜಯ್ 'ಗೋಟ್' ಸಿನಿಮಾದಲ್ಲಿ ನಟಿಸಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದೇನೆ ಅಂದ್ರು ನಟಿ

ಇನ್ನು ಶಾರುಕ್ ಖಾನ್ ಮಗ ಆರ್ಯನ್, ಸಿನಿಮಾದಿಂದ ದೂರವಿದ್ದು, ಬ್ಯುಸಿನೆಸ್ ಆಯ್ಕೆ ಮಾಡ್ಕೊಂಡಿದ್ದಾರೆ. ಆರ್ಯನ್ ಬಟ್ಟೆ ಮಳಿಗೆ ಹೊಂದಿದ್ದಾರೆ. ಏಪ್ರಿಲ್ 30, 2023ರಂದು ಆರ್ಯನ್, ಬಟ್ಟೆ ಬ್ರಾಂಡ್ Dyavol.x  ಪ್ರಾರಂಭಿಸಿದ್ದಾರೆ. ಈ ಬ್ರ್ಯಾಂಡ್‌ನ ಬಟ್ಟೆಗಳ ಬೆಲೆ ಲಕ್ಷದ ಲೆಕ್ಕದಲ್ಲಿದೆ. ಆದ್ರೆ  ಬ್ರಾಂಡ್ ಬಿಡುಗಡೆಯಾದ ಒಂದು ದಿನದಲ್ಲಿ ಸಂಪೂರ್ಣ ಸ್ಟಾಕ್ ಖಾಲಿಯಾಗಿತ್ತು. ಆರ್ಯನ್ ಖಾನ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದರು. ಆರ್ಯನ್ ಖಾನ್ ಬ್ರ್ಯಾಂಡ್ ಅನ್ನು ಶಾರುಖ್ ಖಾನ್ ಸ್ವತಃ ಪ್ರಚಾರ ಮಾಡ್ತಿದ್ದಾರೆ.  ಅಲ್ಲದೆ ಅವರ ಸಹೋದರಿ ಸುಹಾನಾ ಖಾನ್ ಕೂಡ ಬ್ರಾಂಡ್ ಪ್ರಚಾರಕಿ. 

ಆರ್ಯನ್ ಗೆ ಅಪ್ಪ ಶಾರುಕ್ ಖಾನ್ ಸಂಪೂರ್ಣ ಬೆಂಬಲ ನೀಡಿದ್ದಾರೆ. ಶಾರುಕ್ ಹೆಸರೇ ಆರ್ಯನ್ ಬ್ಯುಸಿನೆಸ್ ಗೆ ದೊಡ್ಡ ಮಟ್ಟದಲ್ಲಿ ನೆರವಾಗಿದೆ. ಶಾರುಕ್ ಸಹಿ ಹಾಕಿದ್ದ ಕಪ್ಪು ಲೆದರ್ ಜಾಕೆಟ್ 2 ಲಕ್ಷದ 555 ರೂಪಾಯಿ ಆಗಿತ್ತು. ಆದ್ರೆ ಈ ಜಾಕೆಟ್ ಮಾರುಕಟ್ಟೆಗೆ ಬಂದ ಕೆಲವೇ ಗಂಟೆಯಲ್ಲಿ ಮಾರಾಟವಾಗಿತ್ತು. 

 
 
 
 
 
 
 
 
 
 
 
 
 
 
 

A post shared by D'YAVOL X (@dyavol.x)

click me!