Chitradurga: ಡಿಕೆಶಿ ಸಭೆಯಲ್ಲಿ ಕೈ ಮುಖಂಡರ ಜೇಬಿಗೆ ಕತ್ತರಿ: ಕಳ್ಳನ ಕೈಸೇರಿದ 15 ಸಾವಿರ

By Sathish Kumar KHFirst Published Nov 28, 2022, 3:49 PM IST
Highlights

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಿತ್ರದುರ್ಗ ತಾಲೂಕಿನ ಕ್ಯಾದಿಗೆರೆ ಗ್ರಾಮಕ್ಕೆ ಆಗಮಿಸಿದ ವೇಳೆ ಕಳ್ಳರ ಕೈಚಳಕ ತೋರಿಸಿದ್ದಾರೆ. ಹೆಲಿಪ್ಯಾಡ್‌ ಬಳಿ ಡಿಕೆಶಿ ಅವರನ್ನು ಸ್ವಾಗತ ಕೋರಲು ಬಂದಿದ್ದ ಕಾಂಗ್ರೆಸ್‌ ಮುಖಂಡರ ಜೇಬಗೆ ಕತ್ತರಿ ಹಾಕಿ 15 ಸಾವಿರ ರೂ.ಗಳನ್ನು ಕದ್ದಿದ್ದಾರೆ.

ಚಿತ್ರದುರ್ಗ (ನ.28): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‍‌ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಚಿತ್ರದುರ್ಗ ತಾಲೂಕಿನಕ್ಯಾದಿಗೆರೆ ಗ್ರಾಮಕ್ಕೆ ಆಗಮಿಸಿದ ವೇಳೆ ಕಳ್ಳರ ಕೈಚಳಕ ತೋರಿಸಿದ್ದಾರೆ. ಹೆಲಿಪ್ಯಾಡ್‌ ಬಳಿ ಡಿಕೆಶಿ ಅವರನ್ನು ಸ್ವಾಗತ ಕೋರಲು ಬಂದಿದ್ದ ಕಾಂಗ್ರೆಸ್‌ ಮುಖಂಡರ ಜೇಬಗೆ ಕತ್ತರಿ ಹಾಕಿ 15 ಸಾವಿರ ರೂ.ಗಳನ್ನು ಕದ್ದಿದ್ದಾರೆ.

ಕ್ಯಾದಿಗೆರೆ ಗ್ರಾಮದಲ್ಲಿ ಜಿಲ್ಲಾ ಮಟ್ಟದ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ಆಯೋಜನೆ ಮಾಡಿದ್ದರಿಂದ ಡಿಕೆ. ಶಿವಕುಮಾರ್‍‌ ಆಗಮಿಸುತ್ತಿದ್ದರು. ಅವರನ್ನು ಸ್ವಾಗತ ಮಾಡಲು ಸ್ಥಳೀಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಸೇರಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಇದರಲ್ಲಿ ಕಳ್ಳರೂ ಸೇರಿಕೊಂಡಿದ್ದು, ಗುಂಪಿನಲ್ಲಿ ತಳ್ಳಾಟ ಆರಂಭವಾಗುತ್ತಿದ್ದಂತೆ ಕಳ್ಳನು ತನ್ನ ಕೈಚಳ ತೋರಿಸಿದ್ದಾನೆ. ಇಬ್ಬರು ಕಾಂಗ್ರೆಸ್‌ ಮುಖಂಡರ ಪ್ಯಾಂಟ್‌ ಜೇಬನ್ನು ಕತ್ತರಿಸಿ ಅವರ ಬಳಿಯಿದ್ದ ಪರ್ಸ ಮತ್ತು ಹಣವನ್ನು ಕದ್ದಿದ್ದಾರೆ. ಇನ್ನು ಎಲ್ಲರೂ ವೇದಿಕೆ ಕಾರ್ಯಕ್ರಮದತ್ತ ಹೋಗುತ್ತಿದ್ದಂತೆ ಜೇಬು ನೋಡಿಕೊಂಡಾಗ ಪ್ಯಾಂಟ್‌ ಮೇಲಿಂದಲೇ ಜೇಬು ಕತ್ತರಿಸಿ ಹಣ ಕದ್ದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ತಕ್ಷಣ ಹುಡುಕಾಟ ನಡೆಸಿದ್ದು ಓರ್ವ ಜೇಬುಗಳ್ಳ ಸಿಕ್ಕಿಬಿದ್ದಿದ್ದಾನೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಶೆಯಲ್ಲಿ ಮಲಗಿದ್ದವನ ಜೇಬಿಂದ ₹70 ಸಾವಿರ ಎಗರಿಸಿದ ಚೋರರು!

ಸಿಟಿ ರವಿ ಮೇಲೆ ಕೇಸ್‌ ಹಾಕಬೇಕು:  ಇನ್ನು ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‍‌, ಕಾಂಗ್ರೆಸ್‌ನ ಸಿದ್ಧರಾಮಯ್ಯ ಆಡಳಿತಕ್ಕೆ ಬಂದರೆ ಹಿಂದೂಗಳ ಹತ್ಯೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ವಿರುದ್ಧ ಕೇಸ್‌ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರು ಯಾವ ಆಧಾರದಲ್ಲಿ ಹಿಂದೂಗಳ ಹತ್ಯೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸ ನಡೆದಿದೆ. ಚುನಾವಣೆ ಹತ್ತಿರ ಬರುವ ವೇಳೆ ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಭ್ರಷ್ಟಾಚಾರ, ಮತಗಳ್ಳತನ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ದಿವಾಳಿ ಆಡಳಿತ ನಡೆಯುತ್ತಿದೆವ ಎಂದು ವಗ್ದಾಳಿ ನಡೆಸಿದರು.

ಪ್ರತಿ ಹಳ್ಳಿಗಳಲ್ಲಿ ಕೋಮುಗಲಭೆ: ರಾಜ್ಯದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿ ಹಾಗೂ ಸಿಎಂ ಬೊಮ್ಮಾಯಿ ಅವರಿಗೆ ಆಗ್ರಹ ಪಡಿಸುತ್ತೇನೆ. ಈ ಹೇಳಿಕೆಯನ್ನು ಸಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದವರ ವಿರುದ್ಧವೈ ಕ್ರಮ ಕೈಗೊಳ್ಳಬೇಕು. ಆದರೆ, ನಮ್ಮ ಕಡೆಯವರ ಮೇಲೆ ಮಾತ್ರ ಪೊಲೀಸರು ಕೇಸ್ ಹಾಕಲಾಗುತ್ತಿದ್ದಾರೆ. ಇನ್ನು ಶ್ರೀರಾಮುಲು ಅವರು ಬಳ್ಳಾರಿಯಲ್ಲಿ ಇಂಟರ್ನಲ್ ನಡೆಯುತ್ತಿದೆಯಲ್ಲ ಅದನ್ನ ನೋಡಿಕೊಳ್ಳಲಿ. ಶ್ರೀರಾಮುಲು ಅಣ್ಣನ ವಿಚಾರ ಎಲ್ಲರಿಗೂ ಗೊತ್ತಿದೆ.  ನಮಗೆ ರಾಜ್ಯದ ಜನರಿಗೆ ಕುರ್ಚಿ ಕೊಡಿಸಬೇಕೆಂಬ ಬಯಕೆ ಇದೆ. ಜನರಿಗೆ ಉತ್ತಮ ಆಡಳಿತದ ಭರವಸೆ ಮೂಡಿಸುತ್ತಿದ್ದೇವೆ. ಚಾಮರಾಜಪೇಟೆಯಲ್ಲಿ ರೌಡಿ ಸೈಲೆಂಟ್ ಸುನೀಲ್ ಗೆ ಬಿಜೆಪಿ ಮಣೆ ಹಾಕುವ ಮೂಲಕ ಪಕ್ಷದ ಸಂಸ್ಕೃತಿ ಪರಿಚಯಿಸಿದ್ದಾರೆ ಎಂದರು.
 

click me!