Tiger ಭದ್ರಾ ಅಭಯಾರಣ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ !

By Suvarna News  |  First Published Apr 27, 2022, 5:28 PM IST
  • ಅರಣ್ಯ ಇಲಾಖೆ ಕ್ಯಾಮೆರಾದಲ್ಲಿ ಹುಲಿ ದ್ರಶ್ಯ ಸೆರೆ
  • ಹುಲಿಯು ಅತ್ತಿಂದಿತ್ತ ಸಂಚಾರ ಮಾಡುವ ದೃಶ್ಯಾವಳಿಗಳು ಸೆರೆ
  • ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯ 

ಚಿಕ್ಕಮಗಳೂರು(ಏ.27) : ಭದ್ರಾ ಅಭಯಾರಣ್ಯ ವನ್ಯ ಜೀವಿಗಳ ಅವಾಸಸ್ಥಾನ, ಪ್ರಾಣಿ, ಪಕ್ಷಿಗಳಿಗೆ  ಹೇಳಿ ಮಾಡಿಸಿರುವ ಪ್ರದೇಶ.ಎಲೆ ಉದುರುವ ತೇವಾಂಶಭರಿತವಾದ ಅಭಯಾರಣ್ಯದಲ್ಲಿ ಪ್ರಾಣಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ.

ಅರಣ್ಯ ಇಲಾಖೆ ಕ್ಯಾಮೆರಾದಲ್ಲಿ ಹುಲಿ ದ್ರಶ್ಯ ಸೆರೆ…
ಭದ್ರಾ ಅಭಯಾರಣ್ಯ ವ್ಯಾಪ್ತಿಯ ಬಸವನಕೋಟೆ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಹುಲಿಯೊಂದು ಸಂಚಾರ ಮಾಡುವ ದೃಶ್ಯ ಸೆರೆಯಾಗಿದೆ.ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸುತ್ತಮುತ್ತಲಿನ ಅರಣ್ಯ ಪ್ರದೇಶದ ಎರಡು ಪ್ರತ್ಯೇಕ ಜಾಗಗಳಲ್ಲಿ ಹುಲಿಗಳ ಸಂಚಾರ ಕ್ಯಾಮರಾದಲ್ಲಿ ಸೆರೆಯಾಗಿದೆ.ಹುಲಿ ಗಣತಿಗಾಗಿ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ಬಾಳೆಹೊನ್ನೂರು ಭಾಗದಲ್ಲಿ ಎರಡು ಹುಲಿ ಸಂಚಾರ ನಡೆಸುವುದು ಕಂಡುಬಂದಿದೆ.

Tap to resize

Latest Videos

ಭದ್ರಾ ಅಭಯಾರಣ್ಯದಲ್ಲಿ  ಹುಲಿಗಳ ಸಂಖ್ಯೆ ಹೆಚ್ಚಳ 
ಭದ್ರಾ ವನ್ಯಜೀವಿ ಅಭಯಾರಣ್ಯ, ಒಂದು ಸಂರಕ್ಷಿತ ಅರಣ್ಯ ಪ್ರದೇಶ. ಇದ್ರೊಂದಿಗೆ 38 ಕಿಮೀ. ವ್ಯಾಪ್ತಿಯಲ್ಲಿ ಪ್ರಾಜೆಕ್ಟ್ ಟೈಗರ್ ರಿಸರ್ವ್ ಕೂಡ ಆಗಿದೆ. ಭದ್ರ ಅಭಯಾರಣ್ಯ ಎರಡು ಪಕ್ಕದ ವಿಭಾಗಗಳನ್ನು ಒಳಗೊಂಡಿದೆ. ಅಭಯಾರಣ್ಯ ಬೆಟ್ಟಗಳಿಂದ ಮತ್ತು ಕಡಿದಾದ ಇಳಿಜಾರು ಸುತ್ತುವರೆದಿದ್ದು ಮುಳ್ಳಯ್ಯನಗಿರಿ , ಹೆಬ್ಬೆಗಿರಿ, ಗಂಗೆಗಿರಿ ಮತ್ತು ಬಾಬಾಬುಡನ್ ಗಿರಿ ಬೆಟ್ಟ ಶ್ರೇಣಿಗಳ ಅಪರೂಪದ ನೋಟವಿದು.ಒಟ್ಟು 499 ಚದರ ಕಿ.ಲೊಮೀಟರ್ ವ್ಯಾಪ್ತಿಯಲ್ಲಿ ಸಾವಿರಾರು ಪ್ರಾಣಿಗಳಿಗೆ ಆಶ್ರಯ ನೀಡಿವೆ. ಈ  ಭದ್ರಾ ಹುಲಿ ಅಭಯಾರಣ್ಯದಲ್ಲಿ ಕೇವಲ ವ್ಯಾಘ್ರಗಳ ಸಂತತಿ ಮಾತ್ರ ಹೆಚ್ಚುತ್ತಿಲ್ಲ, ಬದಲಾಗಿ ಆನೆಗಳು, ಜಿಂಕೆ, ಚಿರತೆ , ಕಾಡಾಮ್ಮೆ, ಕಾಡುಕುರಿ  ಸೇರಿದಂತೆ ಹಲವು ಪ್ರಾಣಿಗಳ  ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ದೋಣಿಯಿಂದ ಜಿಗಿದು ಈಜಿದ ಹುಲಿ : ವಿಡಿಯೋ ವೈರಲ್

ಅರಣ್ಯ ಇಲಾಖೆಯ ಪ್ರಕಾರ ವರ್ಷದಿಂದ ವರ್ಷಕ್ಕೆ  ಪ್ರಾಣಿಗಳು ಸಂಖ್ಯೆ ಹೆಚ್ಚಳವಾಗುತ್ತಿದೆ.  ಜಿಲ್ಲೆಯಲ್ಲಿ ನಾಲ್ಕು ಅರಣ್ಯ ವೃತ್ತಗಳಿದ್ದು ಲಕ್ಕವಳ್ಳಿ, ಮುತ್ತೋಡಿ, ತಣಿಗೆಬೈಲ್, ಹೆಬ್ಬೆ ಅರಣ್ಯ ಪ್ರದೇಶಗಳಿವೆ. ಇದುವರೆಗಿನ ಕ್ಯಾಮೇರಾ ಟ್ರಾಪ್ ನ ಸಮೀಕ್ಷೆ ಪ್ರಕಾರ ಸುಮಾರು 360 ಆನೆಗಳು,ಹುಲಿ 32ರಿಂದ 35ವರೆಗೂ ಇದ್ದು, 35ರಿಂದ 40 ಚಿರತೆಗಳಿವೆ, ಇವುಗಳಿಗೆ ಆಹಾರವಾಗಿರುವ ಕಾಡು ಕುರಿ, ಜಿಂಕೆ,ಕಡಾವೆ ಸೇರಿದಂತೆ ಪ್ರಮುಖ ಪ್ರಾಣಿಗಳ ಸಂಖ್ಯೆಯು ಹೆಚ್ಚಳವಾಗಿದೆ. ಕಳೆದ ವರ್ಷದ ಇಲಾಖೆ ನಡೆಸಿದ ಸಮಿಕ್ಷೆಯಲ್ಲಿ 28 ಹುಲಿಗಳು ಇದ್ದವು , ಈ ವರ್ಷ ಅದರ ಸಂಖ್ಯೆ 32ರಿಂದ 35ಕ್ಕೆ ಹೆಚ್ಚಳವಾಗಿದೆ.ಇಲಾಖೆ ನಡೆಸಿದ ಕ್ಯಾಮೇರಾ ಟ್ರಾಪ್ ನಲ್ಲಿ ಪ್ರಾಣಿಗಳು ಕ್ಯಾಮೇರಾದ ಹತ್ತಿರ ಬಂದು ಕ್ಯಾಮೇರಾವನ್ನು ನೋಡುವುದು, ಕಾಡಿನಲ್ಲಿ ಪ್ರಾಣಿಗಳು ಅತ್ತದಿಂದ ಇತ್ತ ಎನ್ನುವ ರೀತಿಯಲ್ಲಿ ಓಡಾಡುವ ದ್ರಶ್ಯ ಪರಿಸರಾಸಕ್ತರಲ್ಲಿ ಹರ್ಷ ಮೂಡಿಸುತ್ತಿದೆ...

ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ 
ಬಸವನಕೋಟೆ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಹುಲಿಯೊಂದು ಸಂಚಾರ ಮಾಡುವ ದೃಶ್ಯ ಸೆರೆಯಾಗಿದ್ದು  ಗ್ರಾಮಸ್ಥರು ಆತಂಕ ,ಭಯಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಸುತ್ತಮುತ್ತಲಿನ ಹಲವು ಅರಣ್ಯ ಪ್ರದೇಶಗಳ ಎರಡು ಪ್ರತ್ಯೇಕ ಜಾಗಗಳಲ್ಲಿ ಹುಲಿಗಳ ಸಂಚಾರ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹುಲಿ ಗಣತಿಯ ಸಲುವಾಗಿ ಅರಣ್ಯ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಕ್ಯಾಮರಾದಲ್ಲಿ ಬಾಳೆಹೊನ್ನೂರು ಭಾಗದಲ್ಲಿ ಎರಡು ಹುಲಿ ಸಂಚಾರ ನಡೆಸುವುದು ಕಂಡುಬಂದಿದ್ದು ಸ್ಥಳೀಯರು ಹಾಗೂ ಗ್ರಾಮಸ್ಥರು ಆತಂಕ - ಭಯಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 ಸಾರಿಸ್ಕಾ ಕಾಡ್ಗಿಚ್ಚು ಬಹುತೇಕ ನಿಯಂತ್ರಣಕ್ಕೆ, ಬೆಂಕಿಯಿಂದ ಹುಲಿಗೆ ತೊಂದರೆಯಾಗಿಲ್ಲ!

ಬಾಳೆಹೊನ್ನೂರು ಅರಣ್ಯ ಇಲಾಖೆಯ ವ್ಯಾಪ್ತಿಯ ಬಸವನಕೋಟೆ ಹಾಗೂ ಸಾರಗೋಡು ಬಳಿಯಲ್ಲಿ ಹುಲಿಯ ಸಂಚಾರವು ಕಂಡುಬಂದಿದ್ದು ಈ ದೃಶ್ಯಾವಳಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ದಾಖಲಾತಿಗಾಗಿ ಕಂಪ್ಯೂಟರ್ ಗೆ ವರ್ಗಾವಣೆ ಮಾಡಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.ಸ್ವಾಭಾವಿಕವಾಗಿ ನಾವು ಜೀವನ ನಡೆಸುವಂತೆ ಅರಣ್ಯ ಪ್ರದೇಶದಲ್ಲಿ ಹುಲಿಗಳು ತಮ್ಮ ಆಹಾರವನ್ನು ಹುಡುಕುತ್ತಾ ಅದನ್ನು ಸೇವಿಸಿ ಪ್ರಾಕೃತಿಕವಾಗಿ ಜೀವನ ನಡೆಸುತ್ತಿದೆ. ದಟ್ಟ ಅರಣ್ಯ ಭಾಗಗಳಲ್ಲಿ ಹುಲಿಗಳ ಸಂಚಾರವಿದ್ದು ಜನರು ಭಯಪಡಬೇಕಾದ ಅಗತ್ಯವಿಲ್ಲ ಜನರ ಸುರಕ್ಷತೆಯನ್ನು ಕಾಪಾಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸದಾ ಕಾರ್ಯನಿರ್ವಹಿಸುತ್ತಾರೆ ಎಂದು ಸಾರ್ವಜನಿಕರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವರದಿ : ಆಲ್ದೂರು ಕಿರಣ್ 
ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

click me!