ಚಿಕ್ಕಮಗಳೂರಿನಲ್ಲಿ ಅಪರೂಪದ ರಕ್ತಗನ್ನಡಿ ಹಾವು ಪತ್ತೆ

Published : Dec 10, 2024, 09:15 AM IST
ಚಿಕ್ಕಮಗಳೂರಿನಲ್ಲಿ ಅಪರೂಪದ ರಕ್ತಗನ್ನಡಿ ಹಾವು ಪತ್ತೆ

ಸಾರಾಂಶ

ಈ ಹಾವಿಗೆ ಹಪ್ಪಟೆ, ರಕ್ತಗನ್ನಡಿ, ಹವಳದ ಹಾವೆಂದು ಕರೆಯುತ್ತಾರೆ. ದೇಹದ ಮೇಲೆ ಕಪ್ಪು ಬಣ್ಣವನ್ನು ಹೊಂದಿದ್ದು, ಕೆಳ ಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿರುತ್ತದೆ.

ಚಿಕ್ಕಮಗಳೂರು: ಉರಗ ಸಂತತಿಯಲ್ಲೇ ಅತ್ಯಂತ ಅಪಾಯಕಾರಿ ಎಂದು ಹೇಳಲಾದ ರಕ್ತಗನ್ನಡಿ ಹಾವು ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಸೋಮವಾರ ಪತ್ತೆಯಾಗಿದೆ.

ಮಲೆನಾಡಿನಲ್ಲಿ ಈ ಹಾವಿಗೆ ಹಪ್ಪಟೆ, ರಕ್ತಗನ್ನಡಿ, ಹವಳದ ಹಾವೆಂದು ಕರೆಯುತ್ತಾರೆ. ದೇಹದ ಮೇಲೆ ಕಪ್ಪು ಬಣ್ಣವನ್ನು ಹೊಂದಿದ್ದು, ಕೆಳ ಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿರುವ ಈ ಹಾವು ಕಚ್ಚಿದರೆ ಸಾಯೋದು ಕಡಿಮೆ. ಆದರೆ, ದೇಹಕ್ಕೆ ನಾನಾ ಸಮಸ್ಯೆ ಒಡ್ಡುತ್ತೆ ಎಂದು ಹೇಳಲಾಗುತ್ತಿದೆ.

ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹ ಸೇರೋದು ಕಡಿಮೆ. ಅಲ್ಲದೆ ಪಶ್ಚಿಮಘಟ್ಟಗಳ ಭಾಗದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಈ ಹಾವು ಕಳಸದ ಉರಗ ತಜ್ಞ ರಿಜ್ವಾನ್‌ ಅವರ ಮನೆ ಅಂಗಳದಲ್ಲಿ ಕಾಣಿಸಿಕೊಂಡಿದ್ದು ರಿಜ್ವಾನ್‌ ಅದನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: 

PREV
Read more Articles on
click me!

Recommended Stories

ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ