ಬೈಕ್ ಸವಾರನೋರ್ವ ಅತೀಯಾದ ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾಫಿನಾಡು ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯ ಮಂಗಳ ಹೋಟೆಲ್ ಬಳಿ ಈ ಅವಘಡ ಸಂಭವಿಸಿದೆ.
ಚಿಕ್ಕಮಗಳೂರು : ಬೈಕ್ ಸವಾರನೋರ್ವ ಅತೀಯಾದ ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾಫಿನಾಡು ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯ ಮಂಗಳ ಹೋಟೆಲ್ ಬಳಿ ಈ ಅವಘಡ ಸಂಭವಿಸಿದ್ದು, ಈ ದುರಂತ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಮೃತನನ್ನು 22 ವರ್ಷದ ಶ್ರೇಯಸ್ (Shreyas) ಎಂದು ಗುರುತಿಸಲಾಗಿದೆ.
ಬೈಕ್ ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆಯುವ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು ನೋಡುಗರ ಮೈ ಜುಮ್ ಎನ್ನುವಂತಿದೆ. ಬೈಕ್ ಮರಕ್ಕೆ ಡಿಕ್ಕಿಯೊಡೆಯುತ್ತಿದ್ದಂತೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದೆ. ಆತನನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಮರಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ಬೈಕ್ ಸವಾರ ಬೈಕ್ ಮೇಲಿಂದ ಹಾರಿ ಬಿದ್ದಿದ್ದಾನೆ. ಬೈಕ್ ಬಿದ್ದು ನೆಲದಲ್ಲಿ ಉಜ್ಜಿಕೊಂಡು ಹೋಗುವ ರಭಸಕ್ಕೆ ನೆಲದ ಮೇಲೆ ಭಾರೀ ಪ್ರಮಾಣದ ಧೂಳು ಎದ್ದಿದೆ. ಧೂಳು ಏಳುವ ರೀತಿಗೆ ಅಪಘಾತದ (Accident) ಭೀಕರತೆ ಅರಿವಾಗುತ್ತಿದೆ. ಚಿಕ್ಕಮಗಳೂರು (Chikkamagaluru) ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Mangaluru: ಅಪಘಾತಕ್ಕೆ ವೈದ್ಯ ವಿದ್ಯಾರ್ಥಿ ಬಲಿ, ಮೃತದೇಹ ನೋಡಲು ಬಂದ ಹೈಕೋರ್ಟ್ ಜಡ್ಜ್
ರಸ್ತೆ ಅಪಘಾತ ಹಾಗೂ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಅತಿವೇಗ ತಿಥಿ ಬೇಗ ಅಂತ ಟ್ರಾಫಿಕ್ ಪೊಲೀಸರು ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿ ಜಾಗೃತಿ ಮೂಡಿಸಲು ಯತ್ನಿಸಿದರು ಆ ಎಚ್ಚರಿಕೆಯನ್ನು ಯುವ ಸಮೂಹ ಪಾಲಿಸುವುದಿಲ್ಲ. ವೇಗವಾಗಿ ಸಾಗಿ ತಮ್ಮ ಸಾವನ್ನು ತಾವೇ ಬರೆದುಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಕಲಬುರಗಿಯಲ್ಲಿ ಬೈಕ್ ಗಳ ನಡುವೆ ಡಿಕ್ಕಿ, ಮೂವರು ಬಲಿ