ಚಿಕ್ಕಮಗಳೂರು ದಕ್ಷಿಣ ಕನ್ನಡ ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿ ಕೆಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಚಿಕ್ಕಮಗಳೂರು (ಮೇ 17): ಚಿಕ್ಕಮಗಳೂರು ದಕ್ಷಿಣ ಕನ್ನಡ ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿ ಕೆಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಚಾರ್ಮಾಡಿ ಘಾಟಿಯ ಏಳನೇ ತಿರುವಿನಲ್ಲಿ ಸಂಜೆ ಒಂಟಿ ಸಲಗ ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ಭಯ ಸೃಷ್ಟಿ ಮಾಡಿದೆ. ಸಂಜೆ ಮಂಗಳೂರು ಹಾಸನ ಸರ್ಕಾರಿ ಬಸ್ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಪಾರಾಗಿದೆ.
ಕಾಡಾನೆ ಕಂಡು ಚಾಲಕ ಬಸ್ ನಿಲ್ಲಿಸಿದ್ದು, ರಸ್ತೆ ಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾಡಾನೆ ಸ್ವಲ್ಪ ಸಮಯದ ನಂತರ ಏಳನೇ ತಿರುವಿನ ಮತ್ತೊಂದು ಭಾಗದಲ್ಲಿ ಹೋಗಿ ನಿಂತಿದೆ. ಬಸ್‌ನ ಹಿಂದೆ ಹಲವು ವಾಹನಗಳು ಅರ್ಧ ಗಂಟೆಗೂ ಅಧಿಕ ಕಾಲ ಸಾಲುಗಟ್ಟಿ ನಿಂತಿದ್ದು ಒಂದೊಂದೇ ವಾಹನಗಳು ನಿಧಾನವಾಗಿ ಪಾಸ್ ಆದವು. ಬಸ್ ಕಾಡಾನೆಯಿಂದ ತುಸು ದಾಟಿದ ನಂತರ ಪ್ರಯಾಣಿಕರೆಲ್ಲರೂ ನಿಟ್ಟುಸಿರು ಬಿಟ್ಟರು. ಅರಣ್ಯ ಅಧಿಕಾರಿಗಳು ಚಾರ್ಮಾಡಿ ಘಾಟಿನಲ್ಲಿ ರಾತ್ರಿ ಹೊತ್ತು ವಾಹನ ಸಂಚಾರ ನಿರ್ಬಂಧಿಸಿ ಕಾಡಾನೆಯನ್ನು ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
undefined
ನಾನೇ ಪಕ್ಷ ಸಂಘಟಿಸುವುದಾಗಿ ಪಂಚೆಕಟ್ಟಿನಿಂತ ದೇವೇಗೌಡ! ಸಮಾಧಾನ ಮಾಡಿದ ಕುಮಾರಸ್ವಾಮಿ
ಹಾಸನದಲ್ಲೂ ಕಾಡಾನೆ ದಾಳಿ: ಚಿಕ್ಕಮಗಳೂರಿನಲ್ಲಿ ಮಾತ್ರವಲ್ಲದೇ ಹಾಸನದಲ್ಲಿ ಮಲೆನಾಡು ಸಕಲೇಶಪುರ ಭಾಗದಲ್ಲಿ ಆನೆಯ ಪುಂಡಾಟ ಕಂಡುಬಂದಿದೆ. ಕಾಡುಗಳಿಂದ ತೋಟ ಹಾಗೂ ಜನವಸತಿ ಪ್ರದೇಶಗಳೆಡೆಗೆ ಬರುತ್ತಿರುವ ಆನೆಗಳು, ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ಮನೆಯ ಕಿಟಕಿ ಮುರಿದ ಹಾಕಿದ ಘಟನೆ ನಡೆದಿದೆ. ಮನೆಯ ಮುಂದಿನ ಮೇಲ್ಚಾವಣೆಗೆ ಹಾಕಿದ್ದ ಹೆಂಚುಗಳು ಪುಡಿ ಪುಡಿ ಮಾಡಿ ಹಾಕಿದೆ. ಮುರಳಿ ಎಂಬುವವರ ನಿವಾಸದ ಮೇಲೆ ಕಾಡಾನೆ ತಡರಾತ್ರಿ ದಾಳಿ ನಡೆಸಿದೆ.
ಬಿಜೆಪಿ ನಾಯಕರ ಶ್ರದ್ಧಾಂಜಲಿ ಬ್ಯಾನರ್ ಹಾಕಿದವರ, ಚರ್ಮ ಸುಲಿದ ಪೊಲೀಸರು!
ಭತ್ತವನ್ನು ತಿಂದಹೋದ ಕಾಡಾನೆ: ಇನ್ನು ಮನೆಯ ಮೇಲ್ಛಾವಣಿ ಹಾಗೂ ಕಿಟಕಿಯನ್ನು ಮುರಿದು ಹಾಕಿದ ಕಾಡಾನೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತವನ್ನು ತಿಂದು ಹಾಕಿದೆ. ಇನ್ನು ಆನೆಯು ಕಿಟಿಕಿಯನ್ನು ಮುರಿದು ಸೊಂಡಿಲನ್ನು ಮನೆಯೊಳಗೆ ತೂರಿಸಿದ್ದರೂ ಎಲ್ಲಿ ಗದ್ದಲ ಮಾಡಿದರೆ ಮನೆಯ ಗೋಡೆಯನ್ನೇ ಬೀಳಿಸುವುದು ಎನ್ನುವ ಭಯದಿಂದ ಮನೆಯ ಸದಸ್ಯರೆಲ್ಲರೂ ಸುಮ್ಮನಿದ್ದರು. ರಾತ್ರಿ ಪೂರ್ತಿ ಆತಂಕದಲ್ಲೇ ಜೀವವನ್ನು ಬಿಗಿಹಿಡಿದು ಕುಳಿತಿದ್ದ ಮುರುಳಿ ಕುಟುಂಬ ಸದಸ್ಯರು ಬೆಳಗ್ಗೆ ಆನೆ ಮನೆಯ ಬಳಿಯಿಂದ ಹೋದ ನಂತರ ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದು, ಅರಣ್ಯ ಸಿಬ್ಬಂದಿ ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ.