ಸರ್ಕಾರದ ಅಳಿವು ಉಳಿವಿನ ಸುಳಿವು ನೀಡಿದರಾ ಸಚಿವ ಸಿ.ಟಿ.ರವಿ?

By Kannadaprabha News  |  First Published Nov 2, 2019, 9:33 AM IST

ಅನ್‌ವಾಂಟೆಂಡ್ ಇನ್ಸಿಡೆಂಟ್’ (ಅನಪೇಕ್ಷಿತ ಘಟನೆ) ನಡೆಯದಿದ್ದರೆ ಜನವರಿ ಅಂತ್ಯದಲ್ಲಿ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು  ಸಚಿವ ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿರುವುದು ಇದೀಗ  ಚರ್ಚೆಗೆ ಎಡೆ ಮಾಡಿಕೊಟ್ಟಿದೆ


ಚಿಕ್ಕಮಗಳೂರು [ನ.02]: ಯಾವುದೇ ‘ಅನ್‌ವಾಂಟೆಂಡ್ ಇನ್ಸಿಡೆಂಟ್’ (ಅನಪೇಕ್ಷಿತ ಘಟನೆ) ನಡೆಯದಿದ್ದರೆ ಜನವರಿ ಅಂತ್ಯದಲ್ಲಿ ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೊಳಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಈ ಮಾತು ಸರ್ಕಾರದ ಅಳಿವು ಉಳಿವಿನ ಬಗ್ಗೆ ನೀಡಿರುವ ಸುಳಿವೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತ ವಾಗಿವೆ. ‘ಅನ್‌ವಾಂಟೆಂಡ್ ಇನ್ಸಿಡೆಂಟ್’ ಅಂದ ರೇನು? ಉಪ ಚುನಾವಣೆ ಬಳಿಕ ಸರ್ಕಾರ ಇರೋ ನಂಬಿಕೆ ಸರ್ಕಾರಕ್ಕೇ ಇಲ್ವಾ? ಸರ್ಕಾರ ಬೀಳದಿದ್ದರೆ ಮಾತ್ರ ಪ್ರವಾಸೋದ್ಯಮದ ಹೊಸ ನೀತಿ ರಚನೆಯ ಅರ್ಥವೇ’ ಎಂಬಿತ್ಯಾದಿಪ್ರಶ್ನೆಗಳು ಹುಟ್ಟಿಕೊಂಡಿವೆ. 

Tap to resize

Latest Videos

ಪುಸ್ತಕ ಕಳಿಸ್ತೀನಿ, ಓದಿ ಚರ್ಚಿಸಲಿ: ಸಿದ್ದುಗೆ ಸಿಟಿ ರವಿ ಸವಾಲು...
 
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಜನವರಿ ಅಂತ್ಯದೊಳಗೆ ಜಾರಿಗೊಳಿಸಲಾಗುವುದು. ಈ ಸಂಬಂಧ ಈಗಾಗಲೇ ರಾಜ್ಯದ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿದೆ ಎಂದು ಹೇಳಿದರು. 

click me!