ಚಿಕ್ಕಮಗಳೂರಿನಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದ ವಿಶೇಷ ಘಟನೆ ನಡೆದಿದೆ.
ಚಿಕ್ಕಮಗಳೂರು [ಅ.18]: ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿರುವ ಘಟನೆ ತರೀಕೆರೆ ತಾಲೂಕಿನ ನಂದಿಪುರ ಗ್ರಾಮದಲ್ಲಿ ನಡೆದಿದೆ. ರಂಗಪ್ಪ ಅವರ ದೇಶಿ ತಳಿಯ ಹಸು, ಎರಡು ಗಂಡು ಮತ್ತು ಒಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ.
ಲಕ್ಷ್ಮೇ ಹೆಸರಿನ ಹಸುವಿಗೆ ಹುಟ್ಟಿರುವ ಮೂರು ಕರುಗಳಿಗೆ ರಾಮ, ಲಕ್ಷ್ಮಣ ಹಾಗೂ ಸೀತೆ ಎಂಬುದಾಗಿ ಹೆಸರು ಇಡಲಾಗಿದೆ. ಸಾಮಾನ್ಯವಾಗಿ ಹಸುವಿಗೆ ಒಂದು ಕರು ಹುಟ್ಟುವುದು ಸಾಮಾನ್ಯ. ಎರಡು ಕರುಗಳು ಹುಟ್ಟಿರುವುದು ಕೇಳುವುದು ಅಪರೂಪ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆದರೆ, ಈ ಹಸುವಿಗೆ ಕರುಗಳು ಹುಟ್ಟಿವೆ. ವಿಷಯ ತಿಳಿಯುತ್ತಿದ್ದಂತೆ ರಂಗಪ್ಪ ಮನೆಯವರು ಮಾತ್ರವಲ್ಲ ಗ್ರಾಮಸ್ಥರು ಕರುಗಳನ್ನು ನೋಡಿ ಖುಷಿಪಟ್ಟರು.
ಮೂರು ಕರುಗಳಿಗೆ ಜನ್ಮ ನೀಡಿದ ಹಸು ದೇಸಿಯ ತಳಿಯದ್ದಾಗಿದ್ದು, ದೇಸಿಯ ತಳಿಯು ತನ್ನ ಹಾಲಿನಲ್ಲಿ ಹೆಚ್ಚಿನ ಔಷಧೀಯ ಗುಣವನ್ನು ಹೊಂದಿರುವಂತದ್ದಾಗಿದೆ.
ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ : ಇಲ್ಲಿ ಹಸು ಮೂರು ಕರುಗಳಿಗೆ ಜನ್ಮ ನೀಡಿದರೆ ವಿಜಯಪುರದಲ್ಲಿ ತಾಯಿಯೊಬ್ಬಳು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಾಲ್ಕು ಮಕ್ಕಳೂ ಕೂಡ ಆರೋಗ್ಯವಾಗಿವೆ.
ನಾಲ್ಕೂ ಮಕ್ಕಳು ತಲಾ ಒಂದೂವರೆ ಕೆಜಿ ತೂಕವಿರುವುದು ವಿಶೇಷ. ಈ ನಾಲ್ಕರಲ್ಲಿ 2 ಹೆಣ್ಣು, 2 ಗಂಡು ಮಕ್ಕಳಿದ್ದು, ಆರೋಗ್ಯವಾಗಿವೆ.
ವಿಜಯಪುರದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ!...