ಚಿಕ್ಕಮಗಳೂರು : ಭಾರೀ ಗಾತ್ರದ ಹೆಬ್ಬಾವು ಪತ್ತೆ

By Web Desk  |  First Published Nov 6, 2019, 12:28 PM IST

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬೃಹತ್ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. ಹಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ. 


ಚಿಕ್ಕಮಗಳೂರು (ನ.06) : ಚಿಕ್ಕಮಗಳೂರಿನಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ವಗಳೆಯಲ್ಲಿ ಕಾಫಿ ತೋಟದಲ್ಲಿ ಬರೋಬ್ಬರಿ 75 ಕೆಜಿ ತೂಕದ ಹಾವು ಕಂಡಿದೆ. 

Latest Videos

undefined

ಇಲ್ಲಿನ ನಾಗರಾಜ್ ಎಂಬುವವರ ತೋಟದಲ್ಲಿ ಕಾಡುಕುರಿಯನ್ನು ನುಂಗಿ ಮಲಗಿದ್ದ ಹೆಬ್ಬಾವನ್ನು ಉರಗ ತಜ್ಞ ಹರೀಂದ್ರಾ ಅವರು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. 

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?...

ಸತತ ಒಂದು ಗಂಟೆಯ ಕಾರ್ಯಾಚರಣೆಯ ಬಳಿಕ ಹಾವನ್ನು ಹಿಡಿದಿದ್ದು, ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಸೆರೆಹಿಡಿದ ಹಾವನ್ನು ಅರಣ್ಯಕ್ಕೆ ಬಿಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 
ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಮಲೆನಾಡು ಪ್ರದೇಶ ಹಲವು ಜೀವಿಗಳ ಆವಾಸ ಸ್ಥಾನವಾಗಿದ್ದು, ಹೆಚ್ಚಿನ ಸಂಖ್ಯೆಯ ಹಾವುಗಳು ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬರುತ್ತವೆ. 

click me!